September 3, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಂದಾರು ಪೆರ್ಲ ಬೈಪಾಡಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಚಪ್ಪರ ಮುಹೂರ್ತ

ಬೆಳ್ತಂಗಡಿ : ಜನವರಿ 7ರಿಂದ 15 ರವರೆಗೆ ನಡೆಯುವ ಪೆರ್ಲ ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಬ್ರಹ್ಮಕಲಶೋತ್ಸವದ ಪ್ರಯುಕ್ತ ದೇವಸ್ಥಾನದ ವಠಾರದಲ್ಲಿ ಚಪ್ಪರ ಮುಹೂರ್ತ ಕಾರ್ಯಕ್ರಮ ನಡೆಯಿತು.

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರು ಹಾಗೂ ಕನಸಿನ ಮನೆ ಲಕ್ಷ್ಮೀ ಇಂಡಸ್ಟ್ರೀಸ್ ಉಜಿರೆ ಇದರ ಮಾಲಕ ಮೋಹನ್ ಕುಮಾರ್ ಈ ಚಪ್ಪರ ಮುಹೂರ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಬಾಲಕೃಷ್ಣ ಪೂಜಾರಿ ಬಜಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಹಾಬಲ ಗೌಡ, ಪ್ರಧಾನ ಕಾರ್ಯದರ್ಶಿ ಹರೀಶ್ ಪರಪ್ಪಾಜೆ, ಕೋಶಾಧಿಕಾರಿ ಕೇಶವ ಗೌಡ ಕೊಂಗುಜೆ, ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಗೌಡ ಅಡ್ಡಾರು, ಕಾರ್ಯದರ್ಶಿ ಉಮೇಶ್ ಗೌಡ ಅಂಗಡಿಮಜಲು, ದೇವಸ್ಥಾನದ ಪ್ರಧಾನ ಅರ್ಚಕ ಅನಂತರಾಮ ಶಬರಾಯ, ಅನುವಂಶೀಯ ಆಡಳಿತ ಮೊಕ್ತೇಸರಾದ ಕುಕ್ಕಪ್ಪ ಗೌಡ, ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಹೊನ್ನಪ್ಪ ಗೌಡ, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಆದಪ್ಪ ಗೌಡ ಹಾರ್ತ್ಯಾರು, ಮಹಿಳಾ ಮಂಡಳಿ ಅಧ್ಯಕ್ಷ ಶ್ವೇತಾ ಹಾರ್ತ್ಯಾರು, ಚಪ್ಪರ ಸಮಿತಿ ಸಂಚಾಲಕರಾದ ಗೋಪಾಲ ಗೌಡ ಅಡ್ಡಾರು, ರಮೇಶ್ ಪೂಜಾರಿ ಹಾಗೂ ಅನೇಕ ಗಣ್ಯರ ಸಮ್ಮುಖದಲ್ಲಿ ಚಪ್ಪರ ಮುಹೂರ್ತ ನಡೆದು ಬ್ರಹ್ಮಕಲಶೋತ್ಸವದ ಅಧಿಕೃತವಾಗಿ ಪೂರ್ವ ಸಿದ್ಧತೆ ಕೆಲಸ ಕಾರ್ಯಗಳಿಗೆ ಚಾಲನೆ ನೀಡಲಾಯಿತು.

You may also like

News

ಮಂಗಳೂರಿನಲ್ಲಿ ರಾಗಗಳ ರಸದೌತಣ: ಸೆಪ್ಟೆಂಬರ್ 6ರಂದು ‘ರಾಗ ಸುಧಾ’ ಸಂಗೀತ ಸಂಭ್ರಮ

ಖ್ಯಾತ ಹಿಂದೂಸ್ತಾನಿ ಗಾಯಕ ಆದಿತ್ಯ ಮೋದಕ್ ಸೇರಿದಂತೆ ರಾಷ್ಟ್ರೀಯ ಖ್ಯಾತಿಯ ಮೂವರು ಕಲಾವಿದರಿಂದ ಅಪರೂಪದ ಸಂಗೀತ ಪ್ರಸ್ತುತಿ; ಸಂಗೀತಾಸಕ್ತರಿಗೆ ಉಚಿತ ಪ್ರವೇಶ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸುಮಧುರ
News

ಮಂಗಳೂರು ಧರ್ಮಕ್ಷೇತ್ರದ ಕಥೊಲಿಕ ಶಿಕ್ಷಣ ಮಂಡಳಿಯಿಂದ ಅದ್ದೂರಿ 37ನೇ ಶಿಕ್ಷಕರ ದಿನಾಚರಣೆ

“ಶಿಕ್ಷಕರ ಮಾರ್ಗದರ್ಶನ ವಿದ್ಯಾರ್ಥಿ ಜೀವನಕ್ಕೆ ದಾರಿದೀಪ” – ಬಿಷಪ್ ಡಾ. ಪೀಟರ್ ಪಾವ್ಲ್ ವಿದ್ಯಾರ್ಥಿಯ ಜೀವನವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಕರ ಮಾರ್ಗದರ್ಶನ ಹಾಗೂ

You cannot copy content of this page