January 17, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕರ್ನಾಟಕ ರಾಜ್ಯ ಮುಸ್ಲಿಂ ಲೀಗ್ ಇದರ ಮಾಜಿ ಕಾರ್ಯದರ್ಶಿ ಕರೀಮ್ ಕಡಬ ನಿಧನ

ಮಂಗಳೂರು : ಕರ್ನಾಟಕ ರಾಜ್ಯ ಮುಸ್ಲಿಂ ಲೀಗ್ ಇದರ ಮಾಜಿ ಕಾರ್ಯದರ್ಶಿಗಳು, ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಇದರ ಮಾಜಿ ಅಧ್ಯಕ್ಷರಾದ ಜನಾಬ್ ಎ.ಎಸ್.ಇ. ಕರೀಮ್ ಕಡಬರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 64 ವರ್ಷ ಪ್ರಾಯವಾಗಿದ್ದು ಇವರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿರುತ್ತಾರೆ.

ಇವರು ಕರ್ನಾಟಕ ರಾಜ್ಯ ಎಮ್.ಎಸ್.ಎಫ್. ಹಾಗೂ ಮುಸ್ಲಿಂ ಯೂತ್ ಲೀಗ್ ನ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಇದಲ್ಲದೆ ಲೈಫ್ ಪಬ್ಲಿಶಿಂಗ್ ಟ್ರಸ್ಟ್ ಮಂಗಳೂರು, ಬಾಫಖಿ ತಂಗಳ್ ಫೌಂಡೇಶನ್ ಕರ್ನಾಟಕ ಇದರ ಸ್ಥಾಪಕರು ಆಗಿದ್ದಾರೆ.

ಇವರು ಕರ್ನಾಟಕ ರಾಜ್ಯ ಮುಸ್ಲಿಂ ಲೀಗ್ ನ ಹಿರಿಯ ಸದಸ್ಯರಾಗಿದ್ದು ಇವರ ನಿಧನಕ್ಕೆ ಮುಸ್ಲಿಂ ಲೀಗ್ ಅಧ್ಯಕ್ಷರಾದ ಪಾಣಕ್ಕಾಡ್ ಸಯ್ಯಿದ್ ಸ್ವಾದಿಖಲೀ ಶಿಹಾಬ್ ತಂಗಳ್, ಮುಸ್ಲಿಂ ಯೂತ್ ಲೀಗ್ ಕೇರಳ ರಾಜ್ಯಾಧ್ಯಕ್ಷರಾದ ಪಾಣಕ್ಕಾಡ್ ಸಯ್ಯಿದ್ ಮುನವ್ವರಲೀ ಶಿಹಾಬ್ ತಂಗಳ್, ಮಲಪ್ಪುರಂ ಲೋಕಸಭಾ ಕ್ಷೇತ್ರದ ಸಂಸದರಾದ ಇ.ಟಿ. ಮುಹಮ್ಮದ್ ಬಶೀರ್ ಸಾಹೇಬ್, ಪೊನ್ನಾನಿ ಲೋಕಸಭಾ ಕ್ಷೇತ್ರದ ಸಂಸದರಾದ ಅಬ್ದುಸ್ಸಮದ್ ಸಮದಾನಿ ಸಾಹೇಬ್,  ರಾಮನಾಥಪುರಂ ಲೋಕಸಭಾ ಸಂಸದರಾದ ನವಾಝ್ ಗನಿ ಸಾಹೇಬ್, ರಾಜ್ಯಸಭಾ ಸದಸ್ಯರಾದ ನ್ಯಾಯವಾದಿ ಹಾರಿಸ್ ಬೀರಾನ್ ಸಾಹೇಬ್, ಕರ್ನಾಟಕ ರಾಜ್ಯಾಧ್ಯಕ್ಷರಾದ ಜಾವೇದುಲ್ಲಾ, ಪ್ರಧಾನ ಕಾರ್ಯದರ್ಶಿ ಮೌಲಾನಾ ನೂಹ್ ಸಾಹೇಬ್ ಗುಲ್ಬರ್ಗ, ಕರ್ನಾಟಕ ರಾಜ್ಯ ಉಸ್ತುವಾರಿ ಟಿ.ಪಿ. ಅಶ್ರಫಲೀ ಸಾಹೇಬ್, ಎಮ್.ಎಸ್.ಎಫ್. ರಾಷ್ಟ್ರೀಯ ಅಧ್ಯಕ್ಷರಾದ ಪಿ.ವಿ. ಸಾಜು ಅಹ್ಮದ್ ದೆಹಲಿ, ಕಾಸರಗೋಡು ಶಾಸಕರಾದ ಎನ್.ಎ. ನೆಲ್ಲಿಕುನ್ನು, ಮಂಜೇಶ್ವರ ಶಾಸಕರಾದ ಎ.ಕೆ.ಎಂ. ಅಶ್ರಫ್, ಬಾಫಖಿ ತಂಗಳ್ ಫೌಂಡೇಶನ್ ಕರ್ನಾಟಕ ಅಧ್ಯಕ್ಷರಾದ ಡಾ. ಶೇಖ್ ಬಾವ ಹಾಜಿ ಮಂಗಳೂರು, ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸಿ. ಅಬ್ದುರ್ರಹ್ಮಾನ್ ಮಂಗಳೂರು, ಪ್ರಧಾನ ಕಾರ್ಯದರ್ಶಿ ನೌಶಾದ್ ಮಲಾರ್, ಕೋಶಾಧಿಕಾರಿ ರಿಯಾಝ್ ಹರೇಕಳ, ಮುಸ್ಲಿಂ ಲೀಗ್ ಹಿರಿಯ ಮುಖಂಡರಾದ ಅಡ್ವಕೇಟ್ ಎಸ್. ಸುಲೈಮಾನ್ ಮಂಗಳೂರು, ಇಬ್ರಾಹಿಂ ಹಾಜಿ ಬೆಂಗರೆ, ಎಚ್. ಇಸ್ಮಾಯಿಲ್,  ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಅಧ್ಯಕ್ಷರಾದ ಫಯಾಝ್ ಜೆಪ್ಪು, ಸಿದ್ಧೀಖ್ ಅಬ್ದುಲ್ ಖಾದರ್ ಬಂಟ್ವಾಳ, ಅಬ್ದುರ್ರಹ್ಮಾನ್ ದಾರಿಮಿ ತಬೂಕ್, ಮಾಜಿ ಕಾರ್ಯದರ್ಶಿಗಳಾದ ಇಸ್ಮಾಯಿಲ್ ಬಿ.ಸಿ. ರೋಡ್, ಮುಸ್ಲಿಂ ಯೂತ್ ಲೀಗ್ ಜಿಲ್ಲಾಧ್ಯಕ್ಷರಾದ ಹನೀಫ್ ಕುಂಜತ್ತೂರು, ಮುಖಂಡರಾದ ಶಬೀರ್ ತಲಪಾಡಿ, ನಿಸಾರ್ ಬೆಂಗರೆ, ಸಿದ್ದೀಖ್ ಹಿರಿಯ ಮುಸ್ಲಿಂ ಲೀಗ್ ಮುಖಂಡ ಕೆ.ಎಸ್.ಎಚ್. ಹಾಜಿ ಹಮೀದ್ ಕೊರಂದೂರು, ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಮುಸ್ತಫಾ ಅಲೀ ಬೆಂಗಳೂರು, ಸಯ್ಯಿದ್ ಸಿದ್ದೀಖ್ ತಂಗಳ್ ಬೆಂಗಳೂರು, ಮುಸ್ಲಿಂ ಯೂತ್ ಲೀಗ್ ರಾಷ್ಟ್ರೀಯ ಉಪಾಧ್ಯಕ್ಷರಾದ ಸಿರಾಜುದ್ಧೀನ್ ನದ್ವಿ ಉತ್ತರ ಪ್ರದೇಶ, ಮುಸ್ಲಿಂ ಲೀಗ್ ಜಿಲ್ಲಾ ಉಪಾಧ್ಯಕ್ಷರಾದ ಸಯ್ಯಿದ್ ಬಂಗೇರುಕಟ್ಟೆ, ಎಂ.ಎಸ್. ಸಿದ್ದೀಖ್ ಫರಂಗಿಪೇಟೆ,  ಎಮ್.ಎಸ್.ಎಫ್. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಝುಲ್ಛಿಕರ್ ಅಲೀ ಎಚ್. ಕಲ್ಲು, ಕಾರ್ಯದರ್ಶಿ ಅನಸ್ ಗೂಡಿನಬಳಿ, ಕೋಶಾಧಿಕಾರಿ ಇರ್ಶಾನ್ ಸವಣೂರು ಲತೀಫ್ ಕುಂಡಾಲ ಮತ್ತಿತ್ತರರು ತೀವ್ರ ಸಂತಾಪ ಸೂಚಿಸಿರುತ್ತಾರೆ .

You may also like

News

ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಮಂಜೇಶ್ವರ, ಕಾಸರಗೋಡು, ಹೊಸದುರ್ಗ ತಾಲೂಕು ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ

ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು ಇದರ ಕೇರಳ ಗಡಿನಾಡ ಘಟಕವಾದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ 2001ರಲ್ಲಿ ಶಿವರಾಮ ಕಾಸರಗೋಡು ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ
News

Youth Red Cross Awards to Padua College

Padua College of commerce and Management, Nanthur Mangaluru recieved 5 prestigious awards Vedavyasa Kamath – MLA of Mangalore North, during

You cannot copy content of this page