May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದೇವಮಾತಾ ಚರ್ಚ್ ಮೊಗರ್ನಾಡ್ ಇದರ 250ನೇ ವರ್ಷಾಚರಣೆಗೆ ಚಾಲನೆ

ವಿಟ್ಲ: ಸುದೀರ್ಘ ವರ್ಷಗಳ ಇತಿಹಾಸವನ್ನು ಹೊಂದಿರುವ ಮಂಗಳೂರು ಧರ್ಮಕ್ಷೇತ್ರದ ಅಮ್ಟೂರು ಗ್ರಾಮದ ಮೊಗರ್ನಾಡ್ ದೇವಮಾತಾ ಧರ್ಮಕೇಂದ್ರದ 250ನೇ ವರ್ಷಾಚರಣೆಗೆ ಮೊಗರ್ನಾಡ್ ಚರ್ಚ್ ನಲ್ಲಿ ಡಿಸೆಂಬರ್ 24ರಂದು ರಾತ್ರಿ ಕ್ರಿಸ್ಮಸ್ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅದ್ದೂರಿಯ ಚಾಲನೆ ನೀಡಲಾಯಿತು.

ಈ ದಿವ್ಯ ಸಮಾರಂಭದಲ್ಲಿ ಮಂಗಳೂರು ಸೈಂಟ್ ಜೋಸೆಫ್ ಇಂಜಿನೀಯರಿಂಗ್ ಕಾಲೇಜಿನ ನಿರ್ದೇಶಕರಾದ ವಂದನೀಯ ಫಾದರ್ ವಿಲ್ಫ್ರೆಡ್ ಪ್ರಕಾಶ್ ಡಿಸೋಜ ಇವರು ಚರ್ಚ್ ನ 250ನೇ ವರ್ಷಾಚರಣೆಯ ಲಾಂಛನವನ್ನು ಅನಾವರಣಗೊಳಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲಿಗೆ ಚಾಲನೆ ನೀಡಿದರು. ಚರ್ಚ್ ವ್ಯಾಪ್ತಿಯ ಭಕ್ತರು ಐತಿಹಾಸಿಕ ಕ್ಷಣವನ್ನು ಸ್ಮರಣೀಯಗೊಳಿಸುವ ಜತೆಗೆ ಏಕತೆ, ನಂಬಿಕೆ ಮತ್ತು ಕೃತಜ್ಞತೆಯ ಸಂಕೇತವಾಗಿ 250 ಕ್ಯಾಂಡಲ್‌ಗಳನ್ನು 250 ಸಂಖ್ಯೆಯ ಆಕಾರದಲ್ಲಿ ಜೋಡಿಸಿ ಬೆಳಗಿಸಿ ಸಂಭ್ರಮಿಸಿದರು.

ಮೊಗರ್ನಾಡ್ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ಅನಿಲ್ ಕೆನ್ಯುಟ್ ಡಿಮೆಲ್ಲೊ ಇವರು ವರ್ಷಪೂರ್ತಿ ನಡೆಯುವ 250ನೇ ವರ್ಷಾಚರಣೆ ಕಾರ್ಯಕ್ರಮದ ಪಟ್ಟಿಯನ್ನು ಅನಾವರಣಗೊಳಿಸಿದರು. ಆವರಣೆ ಹಾಗೂ ಕೃತಜ್ಞತೆಯಾಗಿ ವರ್ಷಾಚರಣೆಯ ಥೀಮ್ ಹಾಡನ್ನು ಪ್ರಸ್ತುತ ಪಡಿಸಲಾಯಿತು.

ಐತಿಹಾಸಿಕ ವರ್ಷಾಚರಣೆಯಲ್ಲಿ ಆಧ್ಯಾತ್ಮಿಕತೆ, ಸಮುದಾಯ ಸಂಘಟನೆ, ಸಾಂಸ್ಕೃತಿಕ ವೈಭವ ಸೇರಿದಂತೆ ಚರ್ಚ್ ನ ಗೌರವಯುತ ಪರಂಪರೆಯನ್ನು ಮುಂದುವರಿಸುವ ದೃಷ್ಟಿಯಿಂದ ಹತ್ತಾರು ಕಾರ್ಯಕ್ರಮಗಳನ್ನು ನಡೆಸುವ ಕುರಿತು ಈ ಸಂದರ್ಭದಲ್ಲಿ ವಿವರಿಸಲಾಯಿತು. ಸಂಭ್ರಮಾಚರಣೆಯಲ್ಲಿ ಸರ್ವರೂ ಪಾಲ್ಗೊಂಡು ಮುಂಬರುವ ಪ್ರತಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ದೃಷ್ಟಿಯಿಂದ ಸಹಕರಿಸಲು ವಿನಂತಿಸಲಾಯಿತು.

ಕಾರ್ಯಕ್ರಮದಲ್ಲಿ ದೇವ ಮಾತ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೋ, ವಂದನೀಯ ಫಾದರ್ ಓಸ್ಟಿನ್ ಫೆರ್ನಾಂಡಿಸ್, ವಂದನೀಯ ಡಿಕನ್ ಮೆಲ್ವಿನ್ ಡಿಕುನ್ಹಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ರೆಡ್ ಲೋಬೊ, ಸರ್ವ ಆಯೋಗಗಳ ಸಂಚಾಲಕಿ ಎಮಿಲಿಯಾ ಡಿಕುನ್ಹಾ ಹಾಗೂ ಜ್ಯುಬಿಲಿ ಸಂಚಾಲಕ ನವೀನ್ ರಾಜೇಶ್ ಡಿಕುನ್ಹಾ ಉಪಸ್ಥಿತರಿದ್ದರು. ಸಾವಿರಾರು ಭಕ್ತಾಧಿಗಳು 250ನೇ ವರ್ಷಾಚರಣೆಯ ಚಾಲನಾ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

 

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page