ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ ಗುರುವಾಯನಕೆರೆಯ ‘ಎಕ್ಸೆಲ್ ಶಿಕ್ಷಣ ಸಂಸ್ಥೆ’
ಬೆಳ್ತಂಗಡಿ : ಶಿಕ್ಷಕರೇ ಸೇರಿಕೊಂಡು ಕಟ್ಟಿದ ಶಿಕ್ಷಣ ಸಂಸ್ಥೆಯೊಂದು ದೇಶದಲ್ಲೇ ಹೆಸರು ಪಡೆಯುತ್ತಿದೆ. ಈ ವಿದ್ಯಾಸಂಸ್ಥೆ ಬೇರೆ ಯಾವುದು ಅಲ್ಲ ಶಿಕ್ಷಣ ಕಾಶಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ನಿಸರ್ಗ ರಮಣೀಯ ಕೆರೆಯ ಮುಂಭಾಗದ ಪ್ರದೇಶದಲ್ಲಿ ಮೈದೆಳೆದು ನಿಂತ ಎಕ್ಸೆಲ್ ಪದವಿ ಪೂರ್ವ ಕಾಲೇಜು, ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಸಾಧನೆ ಮಾಡಲು ಹೊರಟವರಿಗೆ ಯೋಗ್ಯ ಆಯ್ಕೆ.
ವಿದ್ಯಾಸಂಸ್ಥೆ ರೂವಾರಿ ಸುಮಂತ್ ಕುಮಾರ್ ಜೈನ್ ದಶಕಗಳಿಗೂ ಮೀರಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಸಂಪೂರ್ಣ ಅನುಭವ ಹೊಂದಿದವರು. ನೀಟ್, ಸಿಇಟಿ ಪರೀಕ್ಷೆಗಳ ತರಬೇತುದಾರರಾಗಿ ರಾಜ್ಯಾದ್ಯಂತ ಸುತ್ತಾಡಿ ಖ್ಯಾತಿ ಪಡೆದವರು. ಅನುಭವಿ ಉಪನ್ಯಾಸಕರು ಸ್ಥಾಪಿಸಿದ ಸಂಸ್ಥೆಯಾದ ಕಾರಣ ಅತ್ಯಂತ ಕಡಿಮೆ ಅವಧಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದು ದೇಶಾದ್ಯಂತ Rank ಪಟ್ಟಿಯಲ್ಲಿ ಕೀರ್ತಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಸುಮಂತ್ ಕುಮಾರ್ ಜೈನ್ ರ ಅಲ್ಪ ಸಮಯದ ಅಪಾರ ಸಾಧನೆಗೆ ಭೇಷ್ ಅನ್ನಲೇಬೇಕು.
ಪದವಿ ಪೂರ್ವ ಕಾಲೇಜು ಬೋರ್ಡ್ ಪರೀಕ್ಷೆಗಳಲ್ಲಿ ಉನ್ನತಿ ಪಡೆಯಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಒಳಗೊಂಡು ಆಧುನಿಕ ವೃತ್ತಿ ಪರ ಕೋರ್ಸ್ ಗಳಿಗೆ ಸುಲಭ ಪ್ರವೇಶಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದೆ. ಇದಲ್ಲದೆ ಬಿ.ಎಸ್ಸಿ., ಅಗ್ರಿಕಲ್ಚರ್, ಫಾರೆನ್ಸಿಕ್ ಸೈನ್ಸ್, ವಾಣಿಜ್ಯ ವಿಭಾಗದಲ್ಲಿ ಪ್ರವೇಶ ಪರೀಕ್ಷೆಗಳಿಗೂ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದೆ. ನೀಟ್ ಪರೀಕ್ಷೆಯಲ್ಲಿ ದೇಶದಲ್ಲೇ ಅದ್ವಿತೀಯ ಸಾಧನೆ ಮಾಡಿ, ಎಕ್ಸೆಲ್ ನ ಕೀರ್ತಿ ಪತಾಕೆಯನ್ನು ಗಗನದೆತ್ತರಕ್ಕೆ ಹಾರಿಸಿದ್ದಾರೆ. 720 ಅಂಕಗಳ ನೀಟ್ ನಲ್ಲಿ 710 ಪಡೆದ ಪ್ರಜ್ವಲ್ ಎಚ್.ಎಂ., 692 ಪಡೆದ ಆದಿತ್ ಜೈನ್, 689 ಪಡೆದ ರಾಹುಲ್, 649 ಅಂಕ ಪಡೆದ ಸಂಜನಾ ಅವರ ಸಾಧನೆ ಅಮೋಘ. ಸರಕಾರಿ ವೈದ್ಯಕೀಯ ಸೀಟುಗಳನ್ನು ಅತ್ಯಧಿಕ ಸಂಖ್ಯೆಯಲ್ಲಿ ಪಡೆದ ವಿದ್ಯಾಸಂಸ್ಥೆ ಹೆಗ್ಗಳಿಕೆ ಕೂಡ ಗುರುವಾಯನಕೆರೆ ಎಕ್ಸೆಲ್ ನದ್ದಾಗಿದೆ.
ಫಾರೆನ್ಸಿಕ್ ಸೈನ್ಸ್ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಅರ್ಹರಾಗಿರುವುದು ವಿಶೇಷ. 2023-24 ನೇ ಶೈಕ್ಷಣಿಕ ವರ್ಷದ ಪಿಯು ಬೋರ್ಡ್ ಪರೀಕ್ಷೆಯಲ್ಲಿ ಒಟ್ಟು 445 ವಿದ್ಯಾರ್ಥಿಗಳ ಪೈಕಿ 357 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ಉಳಿದ 88 ವಿಧ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇದರೊಂದಿಗೆ ರಾಜ್ಯ ಮಟ್ಟದ ಮೊದಲ 10 Rankಗಳನ್ನು ಪಡೆದ ಹಿರಿಮೆ ಸಂಸ್ಥೆಯಾದಾಗಿದೆ. ಇಬ್ಬರು ವಿದ್ಯಾರ್ಥಿಗಳು 600 ಅಂಕಗಳ ಪೈಕಿ 597 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ದ್ವಿತೀಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮಕ್ಕಳ ಸಾಧನೆಯಲ್ಲಿ ಅಗ್ರ ಗಣ್ಯವೆನಿಸುವ ದಕ್ಷ ಪ್ರಾಧ್ಯಾಪಕ ವರ್ಗವಿದೆ. ಪಠ್ಯ ಕ್ರಮದಲ್ಲಿ ಸುಮಾರು 10 ರಿಂದ 20 ವರ್ಷ ಅನುಭವವುಳ್ಳ ಪ್ರಾಧ್ಯಾಪಕ ವೃಂದ ಮಕ್ಕಳ ಸಾಧನೆ ಮತ್ತು ಏಳಿಗೆಗೆ ಶ್ರಮಿಸುತ್ತಿದೆ.
ಸುಸಜ್ಜಿತ ವಸತಿ ನಿಲಯ : ಕಾಲೇಜಿನಲ್ಲಿ ಸುಸಜ್ಜಿತ ವಸತಿ ನಿಲಯಗಳಿವೆ. ನಿತ್ಯವೂ ವಿದ್ಯಾರ್ಥಿಗಳ ಯೋಗ ಕ್ಷೇಮ ನೋಡಿಕೊಳ್ಳಲು 30 ವಿದ್ಯಾರ್ಥಿಗಳಿಗೆ ಒಬ್ಬರಂತೆ ನಿಲಯ ಪಾಲಕರು ಹಾಗೂ ಮೇಲ್ವಿಚಾರಕರು ನೇಮಿಸಲಾಗಿದೆ. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಮುಂಜಾನೆ 3ಕ್ಕೆ ಎದ್ದು ಪ್ರಾತರ್ವಿಧಿ ಪೂರೈಸಿ ಯೋಗ-ಧ್ಯಾನ-ಪ್ರಾರ್ಥನೆ ಮುಗಿಸಿ, 6ಕ್ಕೆ ಅಧ್ಯಯನಕ್ಕೆ ತೊಡಗುತ್ತಾರೆ. 6ರಿಂದ 8ರ ತನಕ ನೀಟ್/ಜೆಇಇ/ಸಿಇಟಿ ಕೋಚಿಂಗ್ ನಡೆಯುತ್ತದೆ. ತರಗತಿ ಮತ್ತು ಇಂಟಿಗ್ರೇಟೆಡ್ ಕೋಚಿಂಗ್ ಅವಧಿ ಮುಗಿದ ಬಳಿಕ ಸಂಜೆ 6 ರಿಂದ 8, ಊಟದ ಬಳಿಕ ರಾತ್ರಿ 11 ಗಂಟೆಗಳ ತನಕ ಅಧ್ಯಯನದ ವಿಷಯಗಳ ಸಂದೇಹ ನಿವಾರಣೆಗೆ ವಿಧ್ಯಾರ್ಥಿಗಳಿಗೆ ಅವಧಿ. ಅಧ್ಯಯನ ವೇಳೆ ಎಲ್ಲ ವಿಷಯಗಳ ಉಪನ್ಯಾಸಕರು ಆಯಾ ಪಠ್ಯಕ್ಕೆ ಲಭ್ಯವಾಗುವುದು ವಿಶೇಷ.
ಏರುತ್ತಲೇ ಇದೆ ಎಕ್ಸೆಲ್ ಮೈಲಿಗಲ್ಲು : ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎಕ್ಸೆಲ್ ಕಾಲೇಜು ವಾಣಿಜ್ಯ ವಿಭಾಗಕ್ಕೂ ವಿಸ್ತರಿಸಿಕೊಂಡಿದೆ. ಹತ್ತನೇ ತರಗತಿಯಲ್ಲಿ ಕಡಿಮೆ ಅಂಕ ಪಡೆದುಕೊಂಡವರೂ ಎಕ್ಸೆಲ್ ನಲ್ಲಿ ದ್ವಿತೀಯ ಪಿಯುಸಿ ಮುಗಿಸುವಾಗ ಡಿಸ್ಟಿಂಕ್ಷನ್ ಗಳಿಸುವುದು ಸಾಮಾನ್ಯ. 10ನೇ ತರಗತಿಯಲ್ಲಿ ಶೇ.49 ಪಡೆದು, ಎಕ್ಸೆಲ್ ನಲ್ಲಿ ವಿಜ್ಞಾನ ವಿಭಾಗಕ್ಕೆ ದಾಖಲಾದ ವಿದ್ಯಾರ್ಥಿ ದ್ವಿತೀಯ ಪಿಯುಸಿಯಲ್ಲಿ ಶೇ.92 ಪಡೆದು ಉತ್ತೀರ್ಣರಾಗಿದ್ದಾರೆ.
ದಾಖಲಾತಿ ಪ್ರಕ್ರಿಯೆ ಆರಂಭ:
2025 – 26ನೇ ಶೈಕ್ಷಣಿಕ ಸಾಲಿನ ಪ್ರಥಮ, ದ್ವಿತೀಯ ಪಿಯುಸಿ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. ಮುಂಗಡ ದಾಖಲಾದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಸಿಗುತ್ತದೆ. ವೆಬ್ ಸೈಟ್ ಮೂಲಕ ದಾಖಲು ಮಾಡಿಕೊಳ್ಳಬಹುದು. ಅಥವಾ 9880899769 / 8867242769 ಸಂಸ್ಥೆಯನ್ನು ಸಂಪರ್ಕಿಸಬಹುದು.
“ಎಕ್ಸೆಲ್ ಕಾಲೇಜಿನ ಯಶಸ್ಸಿಗೆ ಸಂಸ್ಥೆಯು ಹೊಂದಿರುವ ಶಿಕ್ಷಣ ವ್ಯವಸ್ಥೆಯೇ ಪ್ರಮುಖ ಕಾರಣ. ಹಾಸ್ಟೆಲ್ ಜೀವನದಲ್ಲಿ ಕಷ್ಟ ಬಂದರೂ ಭವಿಷ್ಯದಲ್ಲಿ ನಿರ್ಭೀತಿಯಿಂದ ಬದುಕಲು ಬೇಕಾದ ಜೀವನ ಪಾಠ ಕಲಿಸಿಕೊಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಯ ಪ್ರಗತಿಯ ಕಡೆಗೆ ವೈಯಕ್ತಿಕ ಕಾಳಜಿವಹಿಸಿ ಮೇಲ್ವಿಚಾರಣೆ ನಡೆಸಲಾಗುತ್ತದೆ”.
– ಸುಮಂತ್ ಕುಮಾರ್ ಜೈನ್, ಅಧ್ಯಕ್ಷ ಆಡಳಿತ ಮಂಡಳಿ