ಸೂರಿಕುಮೇರುವಿನಲ್ಲಿ ಮರ್ಹೂಮ್ ಮೊಹಮ್ಮದ್ ಸರ್ಫ್ರಾಝ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ
SKSSF ಮಾಣಿ, ಸೂರಿಕುಮೇರು, ನೀರಪಾದೆ ಯೂನಿಟ್ ಹಾಗೂ ಎಮರ್ಜೆನ್ಸಿ ಹೆಲ್ಪ್ ಲೈನ್ ಬಂಟ್ವಾಳ, ಯೆನಪೋಯ ಆಸ್ಪತ್ರೆ ದೇರಳಕಟ್ಟೆ ಸಹಭಾಗಿತ್ವದಲ್ಲಿ 2025 ಜನವರಿ 5ರಂದು ಆದಿತ್ಯವಾರ ಸೂರಿಕುಮೇರುವಿನಲ್ಲಿರುವ ಬದ್ರಿಯಾ ಜುಮ್ಮಾ ಮಸ್ಜಿದ್ ವಠಾರದಲ್ಲಿ ಬೆಳಿಗ್ಗೆ ಗಂಟೆ 9ರಿಂದ ಮಧ್ಯಾಹ್ನ 2ಗಂಟೆಯ ತನಕ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈ ರಕ್ತದಾನ ಶಿಬಿರಕ್ಕೆ ತಾವು ಬಂದು ತಮ್ಮವರನ್ನು ಕರೆತಂದು ರಕ್ತವನ್ನು ನೀಡಿ ಇನ್ನೊಂದು ಜೀವವನ್ನು ಉಳಿಸಿ. ಸ್ರಷ್ಟಿಕರ್ತನು ನೀಡಿದ ಈ ನನ್ನ ಶರೀರದ ಒಂದು ಹನಿ ರಕ್ತದಿಂದ ಇನ್ನೊಂದು ಜೀವ ಉಳಿಯುವುದಾದರೆ ನನ್ನ ಒಂದು ಹನಿ ರಕ್ತವನ್ನು ನೀಡಲು ನಾನು ಸಿದ್ದನ್ನಾಗಿದ್ದೇನೆ ನೀವು ಕೂಡ ಬನ್ನಿ. ರಕ್ತವನ್ನು ನೀಡುವ ಜೀವಧಾನಿಗಳಿಗೆ ಸುಸ್ವಾಗತ ಮತ್ತು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಯುನಿಟ್ ಅಧ್ಯಕ್ಷ ಬಶೀರ್ ಮಾಣಿ ತಿಳಿಸಿದ್ದಾರೆ.