ಎಸ್‌ವೈಎಸ್ ಮಾಣಿ ಸರ್ಕಲ್ ಸಮಿತಿಯಿಂದ ಸದಸ್ಯತ್ವ ಸಡಗರ ಪೋಸ್ಟರ್ ಪ್ರದರ್ಶನ
ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ಮಾಣಿ ಸರ್ಕಲ್ ಸಮಿತಿ ವತಿಯಿಂದ ಸದಸ್ಯತ್ವ ಸಡಗರದ ಸರ್ಕಲ್ ಕಾರ್ಯಾಗಾರ ಮತ್ತು ಪೋಸ್ಟರ್ ಪ್ರದರ್ಶನ ಕಾರ್ಯಕ್ರಮವು ಮಾಣಿ ದಾರುಲ್ ಇರ್ಶಾದ್ ಮದ್ರಸಾ ಹಾಲ್ ನಲ್ಲಿ ನಡೆಯಿತು. ಹೈದರ್ ಸಖಾಫಿ ಶೇರಾ ಅಧ್ಯಕ್ಷತೆ ವಹಿಸಿ ದುಆ ನಡೆಸಿದರು.
ಉಮರುಲ್ ಫಾರೂಕ್ ಹನೀಫಿ ಪರ್ಲೊಟ್ಟು ಸ್ವಾಗತಿಸಿ, ರಫೀಕ್ ಮದನಿ ಪಾಟ್ರಕೋಡಿ ಕಾರ್ಯಕ್ರಮ ಉದ್ಘಾಟಿಸಿದರು. ಡಿವಿಶನ್ ನಾಯಕರಾದ ಅಬ್ದುಲ್ ಅಝೀಝ್ ಚೆನ್ನಾರ್ ಕಾರ್ಯಾಗಾರ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಸಿಂ ಮುಸ್ಲಿಯಾರ್ ಸೂರ್ಯ, ಸಂಶುದ್ದೀನ್ ಮಿತ್ತೂರು, ಸಾಜಿದ್ ಪಾಟ್ರಕೋಡಿ, ಉಮ್ಮರ್ ಫಾರೂಕ್ ಸೂರಿಕುಮೇರು, ಕಲಂದರ್ ಬುಡೋಳಿ, ಮಜೀದ್ ಪಾಟ್ರಕೋಡಿ, ಅಶ್ರಫ್ ಬುಡೋಳಿ, ಅಬ್ದುಲ್ ಹಮೀದ್ ಶೇರಾ, ಜಲೀಲ್ ಮುಸ್ಲಿಯಾರ್ ಕೊಡಾಜೆ, ಝುಬೈರ್ ಪಾಟ್ರಕೋಡಿ ಸಹಿತ ಹಲವಾರು ವಿವಿಧ ಹುದ್ದೆಯ ನಾಯಕರುಗಳು ಭಾಗವಹಿಸಿದರು. ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.