ದೂರು ನೀಡಲು ಬಂದ ಮಹಿಳೆಯೊಂದಿಗೆ ಕಚೇರಿಯಲ್ಲೇ ಮಧುಗಿರಿ ಡಿವೈಎಸ್ಪಿಯ ಕಾಮದಾಟ
ಗೃಹ ಸಚಿವರ ತವರು ಜಿಲ್ಲೆಯಲ್ಲೇ ಗೃಹ ಇಲಾಖೆ ತಲೆ ತಗ್ಗಿಸುವ ಘಟನೆ ನಡೆದಿದೆ. ದೂರು ನೀಡಲು ಬಂದ ಮಹಿಳೆಯೊಂದಿಗೆ ಕಚೇರಿಯಲ್ಲೇ ಡಿವೈಎಸ್ಪಿಯ ಕಾಮದಾಟದ ವಿಡಿಯೋ ವೈರಲ್ ಆಗಿದೆ.
ಮಧುಗಿರಿ ಡಿವೈಎಸ್‌ಪಿ ಕಚೇರಿಯಲ್ಲಿ ನಡೆದಿದೆ ಎನ್ನಲಾದ ವೀಡಿಯೋ ಇದೀಗ ವೈರಲ್ ಆಗಿದ್ದು ಡಿವೈಎಸ್‌ಪಿ ಕಚೇರಿಯಲ್ಲೇ ಮಹಿಳೆಯೊಂದಿಗೆ ಡಿವೈಎಸ್ಪಿ ರಾಸಲೀಲೆ ನಡೆಸಿದ ವಿಡಿಯೋ ಸೆರೆಹಿಡಿದಿದ್ದಾರೆ.
ದೂರು ನೀಡಲು ಬಂದ ಮಹಿಳೆಯೊಂದಿಗೆ ರಾಸಲೀಲೆ ನಡೆಸಿರುವ ಡಿವೈಎಸ್ಪಿಯನ್ನು ರಾಮಚಂದ್ರಪ್ಪ ಎಂದು ಗುರುತಿಸಲಾಗಿದೆ. ಪಾವಗಡದಿಂದ ಜಮೀನು ವ್ಯಾಜ್ಯದ ಬಗ್ಗೆ ದೂರು ಕೊಡಲು ಮಹಿಳೆ ಬಂದಿದ್ದು ಮಹಿಳೆಯನ್ನು ತನ್ನ ಕಚೇರಿಯ ವಿಶ್ರಾಂತಿ ಕೊಠಡಿಗೆ ಬರಲು ಹೇಳಿದ್ದು ಕೊಠಡಿಯಲ್ಲೇ ಅನೈತಿಕ ಚಟುವಟಿಕೆ ರಾಮಚಂದ್ರಪ್ಪ ಆರಂಭಿಸಿದ್ದು ಕಿಟಕಿಯ ಮೂಲಕ ಚಿತ್ರೀಕರಣಗೊಂಡ ವೀಡಿಯೋ ವೈರಲ್ ಆಗಿದೆ. ಇದೀಗ ಡಿವೈಎಸ್‌ಪಿ ರಾಮಚಂದ್ರಪ್ಪನ ಕಾಮದಾಟದ ವೀಡಿಯೋ ನೋಡಿ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.