ಕೊಡಂಗೆ ಪಿ.ಎಂ.ಶ್ರೀ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಇದರ ಸುವರ್ಣ ಮಹೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಬಂಟ್ವಾಳ ಪುರಸಭಾ ಸದಸ್ಯ ಲುಕ್ಮಾನ್ ಕೈಕಂಬ ಆಯ್ಕೆ
ಬಂಟ್ವಾಳ : ಬಿ.ಸಿ. ರೋಡ್ ಸಮೀಪದ ಕೊಡಂಗೆ ಪಿ.ಎಂ.ಶ್ರೀ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಇದರ ಸುವರ್ಣ ಮಹೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಬಂಟ್ವಾಳ ಪುರಸಭಾ ಸದಸ್ಯ ಲುಕ್ಮಾನ್ ಕೈಕಂಬ ಆಯ್ಕೆಯಾದರು.
ಇತ್ತೀಚೆಗೆ ಶಾಲೆಯಲ್ಲಿ ಶಾಲಾ ಎಸ್ಡಿಎಂಸಿ ಅದ್ಯಕ್ಷ ಕೆ. ಹೈದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರುಗಳಾಗಿ ಕೆ. ಹೈದರ್, ಇಬ್ರಾಹಿಂ ಬೊಗೋಡಿ, ಬಾಸಿತ್ ಪರ್ಲಿಯ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಕೊಡಂಗೆ, ಜೊತೆ ಕಾರ್ಯದರ್ಶಿಗಳಾಗಿ ಸಗೀರ್ ಅಹಮದ್ ನಂದರಬೆಟ್ಟು ಇಕ್ಬಾಲ್ ಎನ್.ಬಿ., ಸಂಚಾಲಕರಾಗಿ ಇಕ್ಬಾಲ್ ಎ.ಕೆ., ಸಂಘಟನಾ ಕಾರ್ಯದರ್ಶಿಯಾಗಿ ನವೀದ್, ಜೊತೆ ಸಂಘಟನಾ ಕಾರ್ಯದರ್ಶಿಗಳಾಗಿ ಹುಸೈನ್, ಹನೀಫ್ ಟಿ., ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಬಿ.ಎಂ., ಹಾಗೂ ಫಕ್ರುದ್ದೀನ್ ಪರ್ಲಿಯ, ಪ್ರಚಾರ ಸಮಿತಿ ಕಾರ್ಯದರ್ಶಿಯಾಗಿ ಎನ್.ಎಂ. ಹನೀಫ್ ನಂದರಬೆಟ್ಟು ಆಯ್ಕೆಯಾದರು.
ಸದಸ್ಯರುಗಳಾಗಿ ನಬಿಲಾ, ಆಯಿಷಾ, ಲತೀಫಾ, ಶೈನಾಝ್, ಅನೀಷಾ, ಖತೀಜ, ಹಸೈನ್, ಶಾಫಿ, ಅಯ್ಯೂಬ್ ನಂದರಬೆಟ್ಟು, ಇಕ್ಬಾಲ್ ಫ್ಲವರ್, ಜುನೈದ್ ಮಂಡಾಡಿ, ಇಬ್ರಾಹಿಂ ಟಿ., ರಶೀದ್, ಅಶ್ರಫ್ ಶಾರ್ಜಾ, ಅಬ್ದುಲ್ ಜಲೀಲ್, ನೌಶೀನ್, ಅಕ್ಬರ್ ಸ್ಟಾರ್, ಅಹಮದ್ ಕುಂಞಿ, ಜಾಕಿರ್ ಹುಸೇನ್, ಕೆ.ಎಂ. ಫಾರೂಕ್, ಇಶಾಕ್, ಅಹಮದ್ ಬಾವ ಕಡಪಿಕರಿಯ ಹಾಗೂ ಮುಸ್ತಾಫ ಇವರುಗಳನ್ನು ಆಯ್ಕೆ ಮಾಡಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಸುಗುಣ ಸ್ವಾಗತಿಸಿ, ಸಹ ಶಿಕ್ಷಕಿ ವೀಣಾ ಪಿಂಟೊ ವಂದಿಸಿದರು.