ಜನವರಿ 5ರಂದು ಮಂಗಳೂರು ಧರ್ಮಕ್ಷೇತ್ರದ ಪರಮ ಪವಿತ್ರ ಪ್ರಸಾದದ ಮೆರವಣಿಗೆ
ಮಂಗಳೂರು ಧರ್ಮಕ್ಷೇತ್ರದ ಪರಮ ಪವಿತ್ರ ಪ್ರಸಾದದ ಮೆರವಣಿಗೆಯು ಜನವರಿ 5ರಂದು ಸಂಜೆ ನಡೆಯಲಿದೆ. ಅಪರಾಹ್ನ 3.30 ಕ್ಕೆ ಮಿಲಾಗ್ರಿಸ್ ಚರ್ಚ್ ನಲ್ಲಿ ದಿವ್ಯ ಬಲಿಪೂಜೆ ನಡೆದ ಬಳಿಕ ಅಲ್ಲಿಂದ ಪರಮ ಪವಿತ್ರ ಪ್ರಸಾದದ ಮೆರವಣಿಗೆಯು ರೊಜಾರಿಯೊ ಕ್ಯಾಥೆಡ್ರಲ್ ಗೆ ತೆರಳಲಿದೆ.
ರೊಜಾರಿಯೊ ಕ್ಯಾಥೆಡ್ರಲ್ ನ ತೆರೆದ ಮೈದಾನದಲ್ಲಿ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಇವರ ನೇತೃತ್ವದಲ್ಲಿ ಪರಮ ಪವಿತ್ರ ಪ್ರಸಾದದ ಆರಾಧನೆ, ಪ್ರವಚನ ಹಾಗೂ ಆಶೀರ್ವಚನ ನೆರವೇರಲಿದೆ ಎಂದು ಧರ್ಮಕ್ಷೇತ್ರದ ಪ್ರಕಟಣೆ ತಿಳಿಸಿದೆ.