ಬಂಟ್ವಾಳದ ಬರಿಮಾರು ನೇತ್ರಾವತಿ ನದಿಯಲ್ಲಿ ಅಂಬಿಗ ನಾಪತ್ತೆ
ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಜನರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ದೋಣಿ ನಡೆಸುವ ಅಂಬಿಗನೋರ್ವ ನಾಪತ್ತೆಯಾಗಿದ್ದು, ಸ್ಥಳೀಯರು ಹುಡುಕಾಟ ನಡೆಸುತ್ತಿರುವ ಬಗ್ಗೆ ಇಂದು ಜನವರಿ 3ರಂದು ಶುಕ್ರವಾರ ಮಾಹಿತಿ ಲಭ್ಯವಾಗಿದೆ.
ಬಂಟ್ವಾಳ ತಾಲೂಕಿನ ಬರಿಮಾರು ಕಡವಿನಬಾಗಿಲು ನಿವಾಸಿ ಅಂಬಿಗ ದಿವಾಕರ ನಾಪತ್ತೆಯಾದವರು. ದಿವಾಕರ ಕಳೆದ ಸುಮಾರು 30 ವರ್ಷಗಳಿಂದ ನೇತ್ರಾವತಿ ನದಿಯಲ್ಲಿ ಜನರ ಪಾಲಿಗೆ ಸೇತುವೆಯಾಗಿದ್ದು, ಅಂಬಿಗ ಕೆಲಸ ಮಾಡಿಕೊಂಡಿದ್ದು, ನುರಿತ ಈಜುಗಾರರಾಗಿದ್ದರು. ಎಂದು ತಿಳಿದು ಬಂದಿದೆ.