January 15, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

“ಉಮ್ರಾ ಯಾತ್ರೆಯಲ್ಲಿ ಗೊಲ್ಮಾಲ್ ಮಾಡುವವರ ಬಗ್ಗೆ ಜನರೇ ಎಚ್ಚರಿಕೆ ವಹಿಸಬೇಕು” – ಮೊಯಿದೀನ್ ಬಾವಾ

ಮಂಗಳೂರು : ನಮ್ಮ ಜಿಲ್ಲೆಯ ಕಬಕದಲ್ಲಿರುವ ಮಹಮ್ಮದಿಯಾ ಟ್ರಾವೆಲ್ ಏಜೆನ್ಸಿಯಾದ ಆಶ್ರಫ್ ಸಖಾಫಿ ಪರ್ಪುಂಜೆ ಎಂಬವರು ಉಮಾ ಯಾತ್ರೆಗಾಗಿ ಸುಮಾರು 172 ಜನರನ್ನು ಪವಿತ್ರ ಮಕ್ಕಾಕ್ಕೆ ಕರೆದುಕೊಂಡು ಹೋಗಿ ನಂತರ ಮದೀನದಲ್ಲಿ ಈ 172 ಮಂದಿ ಯಾತ್ರಾರ್ಥಿಗಳನ್ನು ಬಿಟ್ಟು ಅಲ್ಲಿಂದ ಭಾರತಕ್ಕೆ ಪಲಾಯಣ ಮಾಡಿದ್ದು ಈ 172 ಮಂದಿ ಯಾತ್ರಾರ್ಥಿಗಳು ಮದೀನದಲ್ಲಿ ಅನ್ನಾಹಾರವಿಲ್ಲದೇ ಹಾಗೂ ವಸ್ತವ್ಯದ ವ್ಯವಸ್ಥೆಯಿಲ್ಲದೇ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿರುವುದು ನನ್ನ ಗಮನಕ್ಕೆ ಬಂದಿದ್ದು  ಕೂಡಲೇ ಸೌದಿ ರಾಷ್ಟ್ರದಲ್ಲಿರುವ ನನ್ನ ಸ್ನೇಹಿತರನ್ನು ಸಂಪರ್ಕಿಸಿ ಈ ಎಲ್ಲಾ ಯಾತ್ರಾರ್ಥಿಗಳನ್ನು ಕ್ಷೇಮವಾಗಿ ತಾಯ್ಯಾಡಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿರುತ್ತೇನೆ ಎಂದು ಮಾಜಿ ಶಾಸಕ ಮೊಯಿದೀನ್ ಬಾವಾ ತಿಳಿಸಿದ್ದಾರೆ.

ಈ ಯಾತ್ರಾರ್ಥಿಗಳಲ್ಲಿ ಕೆಲವುಯ ಜನರು ತಮ್ಮ ಸ್ವಂತ ಖರ್ಚಿನಲ್ಲಿ ರಿಟರ್ನ್ ಟಿಕೇಟ್ ಪಡಕೊಂಡು ಬಂದಿದ್ದರೆ ಇನ್ನುಳಿದ 58 ಜನ ಯಾತ್ರಾರ್ಥಿಗಳಿಗೆ ನನ್ನ ಸ್ನೇಹಿತರ ಮುಖಾಂತರ ಟಿಕೆಟ್ ತೆಗೆಸಿ ಊರಿಗೆ ಮರಳಿಸುವ ವ್ಯವಸ್ಥೆಯನ್ನು ಮಾಡಿರುತ್ತೇನೆ ಎಂದು ಹೇಳಿದ್ದಾರೆ. ರಿಟರ್ನ್ ಟಿಕೇಟ್ ಪಡೆಯದೇ ಬರೇ ಡಮ್ಮಿ ಟಿಕೇಟ್ ಪಡೆದುಕೊಂಡು ವಂಚಿಸುವ ಇಂತಹ ಟ್ರಾವೆಲ್ ಏಜೆನ್ಸಿಯ ವಿರುದ್ದ ಹಾಗೂ ಇದಕ್ಕೆ ಅನುವು ಮಾಡಿಕೊಡುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕಾಗಿಯೂ ಹಾಗೂ ಸಾರ್ವಜನಿಕರನ್ನು ವಂಚಿಸುವ ಇಂತಹ ಟ್ರಾವೆಲ್ ಏಜೆನ್ಸಿಗಳ ಲೈಸೆನ್ಸ್ ರದ್ದುಪಡಿಸಬೇಕಾಗಿಯೂ ಈ ಮೂಲಕ ಒತ್ತಾಯಿಸುತ್ತಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

“ಉಮ್ರಾ ಯಾತ್ರಾರ್ಥಿಗಳ ಪರಿಸ್ಥಿತಿ ತೀರಾ ಕೆಟ್ಟದ್ದಾಗಿತ್ತು. ಶುಗರ್ ಕ್ಯಾನ್ಸರ್ ಇತ್ಯಾದಿ ಖಾಯಿಲೆಯಿಂದ ಬಳಳುತ್ತಿದ್ದವರಿಗೆ ಸೂಕ್ತ ಮದ್ದು ಚಿಕಿತ್ಸೆ ಯಾವುದೂ ಸಿಕ್ಕಿರಲಿಲ್ಲ. ನಾಮ್ ಕೆ ವಾಸ್ತೆ ಫಲಕ ಹಾಕಿಕೊಂಡು ಕಡಿಮೆ ಖರ್ಚಿಗೆ ಉಮ್ರಾ ಕರೆದುಕೊಂಡು ಹೋಗುತ್ತೇವೆ ಎಂದು ಜನರನ್ನು ಮಂಗ ಮಾಡುತ್ತಾರೆ. ಬುದ್ಧಿವಂತ ಜಿಲ್ಲೆಯ ಜನರು ಇದನ್ನು ನಂಬಬಾರದು. ರಿಟರ್ನ್ ಟಿಕೆಟ್ ಖಚಿತ ಪಡಿಸಿಕೊಂಡೇ ಹೋಗಬೇಕು. ಯಾವುದೇ ರೀತಿಯಲ್ಲಿ ಜನ ಮೋಸ ಹೋಗಬಾರದು. ದೇಶದಲ್ಲೇ ಈ ರೀತಿಯಾದರೆ ಪರವಾಗಿಲ್ಲ ವಿದೇಶಕ್ಕೆ ಕರೆದುಕೊಂಡು ಹೋಗಿ ಮೋಸ ಮಾಡಿದರೆ ಇದಕ್ಕೆ ಹೊಣೆ ಯಾರು? ಇದರ ವಿರುದ್ಧ ಜಿಲ್ಲಾಡಳಿತ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಕರೆದುಕೊಂಡು ಹೋದ ಜನ ಊರಲ್ಲಿ ಬಂದು ಎಲ್ಲವನ್ನು ತಾನೇ ನಿಭಾಯಿಸಿದ್ದಾಗಿ ಹೇಳುತ್ತಾರೆ. ಇದು ಖಂಡನೀಯ” ಎಂದು ಬಾವಾ ಕಿಡಿಕಾರಿದ್ದಾರೆ.

 

You may also like

News

ಎಸಿ ನ್ಯಾಯಾಲಯಗಳಲ್ಲಿ ಅವಧಿ ಮೀರಿದ ಎಲ್ಲಾ ಪ್ರಕರಣಗಳನ್ನು ಮುಂದಿನ 6 ತಿಂಗಳಲ್ಲಿ ಇತ್ಯರ್ಥ –  ಕೃಷ್ಣ ಬೈರೇಗೌಡ

ಉಪ ವಿಭಾಗಾಧಿಕಾರಿಗಳ (ಎಸಿ) ನ್ಯಾಯಾಲಯಗಳಲ್ಲಿ ಅವಧಿ ಮೀರಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಮುಂದಿನ ಆರು ತಿಂಗಳ ಒಳಗಾಗಿ ನ್ಯಾಯಯುತ ಇತ್ಯರ್ಥಕ್ಕೆ ಒಳಪಡಿಸಬೇಕು ಎಂದು ಕಂದಾಯ ಸಚಿವ
News

ಎರಡು ಬೈಕ್ ಗಳ ಮುಖಮುಖಿ ಡಿಕ್ಕಿ – ಸಹ ಪ್ರಯಾಣಿಕೆ ಬಾಲಕಿ ಇಸ್ಮತ್ ಆಯಿಶಾ ಮೃತ್ಯು

ಬಂಟ್ವಾಳ : ಎರಡು ಬೈಕ್ ಗಳ ನಡುವೆ ನಡೆದ ಬೀಕರ ಅಪಘಾತದಿಂದಾಗಿ ಸಹ ಪ್ರಯಾಣಿಕೆಯಾಗಿದ್ದ ಬಾಲಕಿ ಮೃತಪಟ್ಟ ಘಟನೆ ಜನವರಿ 14ರಂದು ಮಂಗಳವಾರ ರಾತ್ರಿ ಮಂಗಳೂರು –

You cannot copy content of this page