ಮಾತೃ ಭಾಷೆ ಉಳಿವಿಗಾಗಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಗತ್ಯಗಳು ಎಲ್ಲಾ ಭಾಷೆಗಳಿಗೆ ಇದೆ – ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಅಭಿಮತ.
ಜನರು ಮಾತೃಭಾಷೆಗಳನ್ನು ಉಪಯೋಗ ಮಾಡುತ್ತಿಲ್ಲ ಎಂದು ಕೊರಗುವ ಬದಲು ಇಂಗ್ಲಿಷ್ ಕಲಿಯುವ ಅನಿವಾರ್ಯದ ಜೊತೆಯಲ್ಲಿ ಮಾತೃಭಾಷೆಯ ವಿವಿಧ ಆಕರ್ಷಕ ಕಾರ್ಯಕ್ರಮಗಳವನ್ನು ಇಟ್ಟು ಮಾತೃಭಾಷೆಯ ಶಬ್ದಗಳನ್ನು ಕಲಿಕೆಯ ಸಂಗಡ ಉಪಯೋಗಿಸುವ ಹಾಗೆ ಶಿಕ್ಷಣ ಸಂಸ್ಥೆಗಳು ಮಾಡಬೇಕು ಎಂದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ನುಡಿದರು.
ಅವರು ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇವರ ಐವತ್ತೊಂದನೆಯ ಸ್ಥಾಪನಾ ದಿನದ ಪ್ರಯುಕ್ತ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಮತ್ತು ಅವರ ಕೊಂಕಣಿ ಸಂಸ್ಥೆಯ ಜೊತೆಯಲ್ಲಿ ನಡೆದ ಒಂದು ದಿನದ ಪ್ರಥಮ ಕೊಂಕಣಿ ವಿಧ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ಗುಮಟ್ ಬಡಿದು ತೋಣಿ ಹೊಡೆದು ಉದ್ಘಾಟನೆ ಮಾಡಿ ಮಾತನಾಡಿದರು. ಮುಂದೊರೆಸುತ್ತಾ ಅವರು ವಿಧ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ಮಾತೃಭಾಷೆಯ ಕಲಿಕೆಯಲ್ಲಿ ತೊಡಗಲು ಸಂತ ಅಲೋಶಿಯಸ್ ಸಂಸ್ಥೆಯ ಎಂದೆಂದೂ ಸಹಕಾರ ಇದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗೋವಾ ಅಕಾಡೆಮಿಯ ಕಾರ್ಯನಿರ್ವಾಹಕ ಅಧ್ಯಕ್ಷ ವಸಂತ ಭಾಗವತ್ ಸಾವಂತ್ ಸನ್ಮಾನ ಪಡೆದು ಮಾತನಾಡಿ ಕರ್ನಾಟಕ ಗೋವಾದ ಭಾಷೆಯ ಕೊಂಕಣಿ ಬೇರೆಬೇರೆ ಮಾತುಗಳು ಹೊಂದಿದೆ ಅದಕ್ಕೆ ಸಮಾನ ಅರ್ಥ ಪದಗಳ ಕೆಲಸ ಮಾಡಲಾಗುವುದು ಎಂದರು.
ಅಕಾಡೆಮಿ ಸಂಶೋಧನಾ ಸಹಾಯಕ ದತ್ತರಾಜ ನಾಯ್ಕ, ಕಾರ್ಯದರ್ಶಿ ಪರಾಗ್ ನಗರ್‌ಸೇಕರ್ ಸನ್ಮಾನ ಪಡೆದು ಶುಭಾಶಯ ಹೇಳಿದರು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾಕ್ಟರೇಟ್ ರೊನಾಲ್ಡ್ ನಜ್ರೆತ್ ಮಾತನಾಡಿ ಕಾಲೇಜು ಕೊಂಕಣಿ ಉನ್ನತ ಶಿಕ್ಷಣಕ್ಕಾಗಿ ಅವಕಾಶಗಳನ್ನು ಕೊಡಲಿದೆ ಎಂದರು. ಕೆಬಿಎಮ್‌ಕೆ ಅಧ್ಯಕ್ಷ ಕೆ. ವಸಂತ ರಾವ್ ಮಾತನಾಡಿದರು. ಮೊದಲಿಗೆ ಕಾರ್ಯಕ್ರಮ ಸಂಚಾಲಕ, ಕೊಂಕಣಿ ಭಾಷಾ ಮಂಡಲ ಕರ್ನಾಟಕ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ಸ್ವಾಗತಿಸಿ ಸಂಯೋಜಕಿ ಡೊ. ಸೆವ್ರಿನ್ ಪಿಂಟೊ ವಂದಿಸಿದರು. ಕೊಂಕಣಿ ವಿಭಾಗ ಮುಖ್ಯಸ್ಥರಾದ ಪ್ಲೊರಾ ಕಾಸ್ತೆಲಿನೊ ಸಹಕರಿಸಿದರು.
ನಿರೂಪಣೆ ವಿದ್ಯಾರ್ಥಿ ಕ್ಲೆವಿಟಾ ಡಿಸೋಜ ಮಾಡಿದರು ವಿದ್ಯಾರ್ಥಿ ಜೀತನ್ ಡಿಸೋಜ, ಪ್ರಫುಲ್ಲ ನೊರೊನಾ ವೇದಿಕೆಯಲ್ಲಿ ಇದ್ದರು. ನಂತರ ಕೊಂಕಣಿ ವಿದ್ಯಾರ್ಥಿಗಳು ತಮ್ಮ ಸ್ವರಚಿತ ಸಾಹಿತ್ಯದ ಸಾಧಾರೀಕರಣ ಮಡಿದರು. ವಿದ್ಯಾರ್ಥಿ ಸಾಧಕರಿಗೆ ವೇದಿಕಯಾಗಿ ವಿವಿಧ ಊರಿನಲ್ಲಿ ಶಿಕ್ಷಣ ಪಡೆಯುತ್ತಾ ಬಹುಮುಖ ಪ್ರತಿಭೆಯ ಆರು ವಿದ್ಯಾರ್ಥಿ ಆನ್ ಲೈನ್ ಹಾಗೂ ಆಫ್‌ಲೈನ್ ವೇದಿಕೆಯಲ್ಲಿ ಸಂವಾದ ನಡೆಸಿದರು. ಕೆಬಿಎಮ್‌ಕೆ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ಶಬ್ದುಲಿಂ ಎನ್ನುವ ಕಾರ್ಯವನ್ನು ನಡೆಸಿ ಗೋವಾ ಮತ್ತು ಕರ್ನಾಟಕದ ವಿವಿಧ ಬೋಲಿಗಳಲ್ಲಿ ಕೊಂಕಣಿ ಸಮಾನ ಅರ್ಥದ ಪದಗಳ ವ್ಯತ್ಯಾಸವನ್ನು ವಿದ್ಯಾರ್ಥಿಗಳು ತಿಳಿಯಲು ಸಹಕಾರ ಮಾಡಿದರು.
ಅಂತರ್ ಶಾಲಾ ಮತ್ತು ಕಾಲೇಜು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ ಅವರಿಗೆ ನಗದು ಬಹುಮಾನ, ಪ್ರಮಾಣ ಪತ್ರ, ಟ್ರೊಫಿ ನೀಡಲಾಯಿತು. ಸಂಜೆಗೆ ಸಮಾರೋಪ ಕಾರ್ಯಕ್ರಮ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ವಂದನೀಯ ಫಾದರ್ ಮೆಲ್ವಿನ್ ಡಿಕೂನಾ ಜೆಸ ಅವರ ಅಧ್ಯಕ್ಷ ಆಗಿ ನಡೆಯಿತು. ಅಲೋಶಿಯಸ್ ಕಾಲೇಜಿನಲ್ಲಿ ಮೂವತ್ತು ವರ್ಷಗಳ ಮೊದಲು ಕೊಂಕಣಿ ವಿಭಾಗ ಆರಂಭಿಸಿದ ವಂದನೀಯ ಫಾದರ್ ಪ್ರಶಾಂತ ಮಾಡ್ತ ಜೆಸ ಅವರಿಗೆ ಸನ್ಮಾನ ಮಾಡಲಾಯಿತು. ಸಮಾರೋಪ ಭಾಷಣ ಮಾಡಿದ ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾಕ್ಟರೇಟ್ ರೊಟೇರಿಯನ್ ಆಲ್ವಿನ್ ಡೆಸಾ ಅವರು ಇಡೀ ದಿನದ ಮೊದಲ ಕೊಂಕಣಿ ಸಾಹಿತ್ಯ ಸಮ್ಮೇಳನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಆಯೋಜಿಸಿದ ಬಗ್ಗೆ ಅದರ ಅಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಧನ್ಯವಾದ ನೀಡಿದರು ಮತ್ತು ಇಂತಹ ಪ್ರಯೋಗಗಳನ್ನು ವಿದ್ಯಾರ್ಥಿ ಪ್ರಯೋಜನಕ್ಕೆ ನೀಡಲು ಕಾಲೇಜು ಯಾವುದೇ ರೀತಿಯ ಸಹಕಾರ ನೀಡಲು ಇದೆ ಎಂದರು.
ಗೋವಾದ ಎಂಇಎಸ್ ಕಾಲೇಜಿನ ಪ್ರಾಧ್ಯಾಪಕ ಸತ್ಯವಾನ್ ನಾಯ್ಕ್, ವಿದ್ಯಾರ್ಥಿಗಳಾದ ಅಲೋಶಿಯಸ್ ಕಾಲೇಜಿನ ಜೀತನ್ ಮತ್ತು ನೊಯೆಲ್ ಸಾಂತುಮಾಯೊರ್ ಹಾಗೂ ಪದ್ವಾ ಕಾಲೇಜಿನ ಜೊಶ್ವಾ ಅವರು ಸಮ್ಮೇಳನದ ಅನುಭವ ಹಂಚಿಕೊಂಡರು. ಮೊದಲಿಗೆ ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ವಿಭಾಗ ಮುಖ್ಯಸ್ಥರಾದ ಪ್ಲೊರಾ ಕಾಸ್ತೆಲಿನೊ ಸ್ವಾಗತಿಸಿ ವಿದ್ಯಾರ್ಥಿ ಪ್ರಪುಲ್ಲ ವಂದಿಸಿದರು. ಇಶಿತ ಬೆನ್ನಿಸ್ ನಿರೂಪಿಸಿದರು. ಕೆಬಿಎಮ್‌ಕೆ ಅಧ್ಯಕ್ಷ ಕೆ. ವಸಂತ ರಾವ್, ಕಾರ್ಯದರ್ಶಿ ರೇಮಂಡ್ ಡಿಕೂನಾ ತಮ್ಮ ಅನಿಸಿಕೆಗಳನ್ನು ಹೇಳಿದರು.
ಸಂಯೋಜಕರಾದ ಡಾ. ಸೆವ್ರಿನ್ ಪಿಂಟೊ ವಿದ್ಯಾರ್ಥಿ ಜೀತನ್ ಡಿಸೋಜ, ಪ್ರಪುಲ್ಲ ನೊರೊನ್ಹಾ ವೇದಿಕೆಯಲ್ಲಿ ಇದ್ದರು. ಸಾಧರಿಕರಣ ಹಾಗೂ ಅಂತರ್ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮಗಳ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಟ್ರೊಫಿ ಕೆಬಿಎಮ್‌ಕೆ ವತಿಯಿಂದ ಕೊಡಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಹಾಜರಾತಿ ಮತ್ತು ಭಾಗವಹಿಸಿದ ಪ್ರಮಾಣ ಪತ್ರವನ್ನು ನೀಡಲಾಯಿತು.