ಮಂಗಳೂರಿನ ಮೂಡ ಕಚೇರಿಯಲ್ಲಿ ಮಧ್ಯವರ್ತಿಗಳದ್ದೇ ಕಾರುಬಾರು – ಕಡತ ತಿದ್ದುತ್ತಿದ್ದ ವಿಡಿಯೋ ವೈರಲ್
ಸಾರ್ವಜನಿಕರಿಂದ ಭಾರೀ ಆಕ್ರೋಶ
ಮಂಗಳೂರು ಮುಡಾ ಕಚೇರಿಯಲ್ಲಿ ಮಧ್ಯವರ್ತಿಗಳದ್ದೇ ಕಾರುಬಾರು ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಮಧ್ಯವರ್ತಿಯೊಬ್ಬ ಕಡತ ಪರಿಶೀಲಿಸಿ ತನ್ನ ಪೆನ್‌ನಲ್ಲಿ ಕಡತ ತಿದ್ದುತ್ತಿರುವ ವೀಡಿಯೋ ವೈರಲ್ ಆಗಿದೆ. ಜನವರಿ 7ರಂದು ಮಧ್ಯಾಹ್ನ 1.30ಕ್ಕೆ ಸಿಸಿಟಿವಿಯಲ್ಲಿ ರೆಕಾರ್ಡ್ ಆದ ವೀಡಿಯೊದಲ್ಲಿ ಪತ್ತೆಯಾಗಿದೆ. ಮಧ್ಯವರ್ತಿಯೊಬ್ಬ ಮೂಡಾದ ಮೊದಲ ಮಹಡಿಯಲ್ಲಿರುವ ಕಚೇರಿಗೆ ಬಂದು, ಮಧ್ಯಾಹ್ನ ಊಟದ ಸಮಯವಾದ ಕಾರಣ ಅಲ್ಲಿ ಯಾರೂ ಇಲ್ಲದೇ ಇರುವುದನ್ನು ಗಮನಿಸಿ ಕಚೇರಿಯ ಒಳಗೆ ನುಗ್ಗಿ ಮೇಜಿನ ಮೇಲಿದ್ದ ಕಡತಗಳಲ್ಲಿ ತನಗೆ ಬೇಕಾದದ್ದನ್ನು ಆರಿಸಿ, ತನ್ನದೇ ಪೆನ್ ನಿಂದ ಕಡತದಲ್ಲಿರುವ ದಸ್ತಾವೇಜುಗಳನ್ನು ತಿದ್ದುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸಿರೆಹಿಡಿಯಲಾಗಿದೆ.
ಆದರೆ ಮಧ್ಯವರ್ತಿ ಅಕ್ರಮ ಪ್ರವೇಶದ ಬಗ್ಗೆ ಮುಡಾ ಅಧಿಕಾರಿಗಳು ಇನ್ನೂ ಪೊಲೀಸರಿಗೆ ದೂರು ನೀಡದಿರುವುದು ಸಾರ್ವಜನಿಕರಿಂದ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.