ಅನುಮತಿ ಪಡೆದರೂ ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಅಬಕಾರಿ ಇಲಾಖೆಯವರ ಕಿರುಕುಳ
ಅಬಕಾರಿ ಸಚಿವರಿಗೆ ಪತ್ರ ಬರೆದ MLC ಮಂಜುನಾಥ್ ಭಂಡಾರಿ
ಕರ್ನಾಟಕ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮದುವೆ ಆರತಕ್ಷತೆ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಔತಣಕೂಟಗಳನ್ನು ಏರ್ಪಡಿಸುತ್ತಿದ್ದು ಅಬಕಾರಿ ಇಲಾಖೆಯಿಂದ ಪರವಾನಿಗೆ ಪಡೆದು ಮಧ್ಯವನ್ನು ಸರಬರಾಜು ಮಾಡಲಾಗುತ್ತದೆ.
ಆದರೆ ಇಂಥಹ ಔತಣಕೂಟಗಳಿಗೆ ಅಬಕಾರಿ ಇಲಾಖೆಯಿಂದ ಪರವಾನಿಗೆ ಪಡೆಯುವಾಗ ಮಧ್ಯವನ್ನು ಸರಬರಾಜು ಅನುಮತಿಗೆ ಅಬಕಾರಿ ಇಲಾಖೆಯು ನಿಯಮಾನುಸಾರ ವಿಧಿಸಬೇಕಾದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ಸಂಗ್ರಹಿಸುತ್ತಿರುವ ಬಗ್ಗೆ ಕೆಲವು ಸಮುದಾಯದ ಮುಖಂಡರು MLC ಮಂಜುನಾಥ್ ಭಂಡಾಯಿಯವರ ಗಮನಕ್ಕೆ ತಂದಿರುತ್ತಾರೆ.
ಹೀಗೆ ಕಾರ್ಯಕ್ರಮಗಳಿಗೆ ಮಧ್ಯವನ್ನು ಸರಬರಾಜು ಮಾಡಲು ಅನುಮತಿಯನ್ನು ಅಬಕಾರಿ ಇಲಾಖೆಯಿಂದ ಪಡೆದುಕೊಂಡಿರುವ ನಂತರವೂ ಸಮಾರಂಭ ನಡೆಯುತ್ತಿರುವ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಸಮವಸ್ತ್ರ ಧರಿಸಿ ಆ ಕಾರ್ಯಕ್ರಮಕ್ಕೆ ಮಧ್ಯವನ್ನು ಸರಬರಾಜು ಮಾಡಿದ ಮೂಲ ಹಾಗೂ ಇತರ ವಿಚಾರಗಳ ವಿಚಾರಣೆ/ಪರಿಶೀಲನೆ ನೆಪದಲ್ಲಿ ಕಾರ್ಯಕ್ರಮ ಆಯೋಜಕರಿಗೆ ಅನವ್ಯಶಕವಾಗಿ ಕಿರುಕುಳ ಕೊಡುತ್ತಿರುವ ಬಗ್ಗೆ ಸಮುದಾಯದವರು ಅಳಲು ತೋಡಿಕೊಂಡಿರುತ್ತಾರೆ.
ಅದಲ್ಲದೆ ಕಾರ್ಯಕ್ರಮಗಳಿಗೆ ಸಮಾರಂಭ ನಡೆಯುತ್ತಿರುವ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಸಮವಸ್ತ್ರ ಧರಿಸಿ ಬೇಟಿ ನೀಡಿ ಔತಣಕೂಟವನ್ನು ಕಾನೂನು ಬಾಹಿರ ಚಟುವಟಿಕೆಯಂತೆ ಬಿಂಬಿಸಿ ಔತಣಕೂಟ ಆಯೋಜಿಸಿದವರಿಗೆ ಅವಮಾನವಾಗುವ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆ ಕೆಲವು ಧರ್ಮ ಮತ್ತು ಸಮುದಾಯದವರು ಅಸಮಾದಾನ ವ್ಯಕ್ತಪಡಿಸಿರುತ್ತಾರೆ.
ಈ ಕುರಿತಂತೆ ತಮ್ಮ ಇಲಾಖೆಯ ಮೂಲಕ ಸೂಕ್ತ ಕ್ರಮವಹಿಸಿ ನಿಯಾಮಾನುಸಾರ ಔತಣಕೂಟ ಏರ್ಪಡಿಸಿದವರಿಗೆ ಆಗುತ್ತಿರುವ ಅವಮಾನವನ್ನು ತಪ್ಪಿಸುವಂತೆ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿಯವರು ಅಬಕಾರಿ ಸಚಿವರಿಗೆ ಪತ್ರವನ್ನು ಬರೆದಿದ್ದಾರೆ.