August 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ಹೋಬಳಿ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ರೇಮಂಡ್ ಡಿಕೂನಾ ತಾಕೊಡೆ ನಿಯುಕ್ತಿ

ಬಹುಭಾಷಾ ಸಾಹಿತಿಗಳು, ಹದಿನೈದು ಪುಸ್ತಕಗಳ ಪ್ರಕಾಶನ ಮಾಡಿದ, ಕಳೆದ ನಲ್ವತ್ತು ವರ್ಷಗಳ ಹಿರಿಯ ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ ಇವರನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ಹೋಬಳಿ ಅಧ್ಯಕ್ಷರನ್ನಾಗಿ ಮಾಡಿ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಶ್ರೀನಾಥ್ ಆದೇಶ ನೀಡಿದ್ದಾರೆ.

“ಪತಿ ಪತ್ನಿ ಸುತಾಲಯ” (ಡೈವರ್ಸ್ ಆಗದ ಹಾಗೆ ಸೂತ್ರಗಳು) ಬಹುಚರ್ಚಿತ ಲೈಬ್ರರಿ ಸ್ವೀಕೃತ ಹಾಗೂ ಕೊಂಕಣಿ, ತುಳು, ಬ್ಯಾರಿ ಭಾಷೆಯಲ್ಲಿ ವಿಮರ್ಶೆಗೆ ಬೇಡಿಕೆಯ ಪುಸ್ತಕವೂ ಸೇರಿದಂತೆ ಸಕಲಾಭರಣ, ಆಭರಣಗಳು ಗದ್ಯ ಪುಸ್ತಕಗಳನ್ನು ಹಾಗೂ ನನ್ನವಳ ಕವಳ ಕವಿತಾ ಸಂಗ್ರಹವು ಕನ್ನಡದ ಇವರ ಬಹುಬೇಡಿಕೆಯ ಇತರ ಕೃತಿಗಳು.

ಮಾತೃಭಾಷೆ ಕೊಂಕಣಿಯಲ್ಲಿ ಎಂಟು ಕೃತಿಗಳು ಪ್ರಕಟವಾಗಿವೆ. ತುಳುವಿನ ಮೊದಲ ಕೃತಿ ಮುದ್ರಣದಲ್ಲಿ ಇದೆ. ಕಳೆದ ವರ್ಷ 26ನೇ ಮಂಗಳೂರು ಪುರಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಆಹ್ವಾನ ಪತ್ರಿಕೆಯಲ್ಲಿ ಮುದ್ರಿತ ಸಮಯದಲ್ಲಿ ಸಮ್ಮೇಳನದ ಎಲ್ಲಾ ಕಾರ್ಯಕ್ರಮಗಳನ್ನು ಆರಂಭ ಮತ್ತು ಸಮಾರೋಪವನ್ನು ಡಾ. ಮೀನಾಕ್ಷಿ ರಾಮಚಂದ್ರ ಜೊತೆಗೆ ಸೇರಿ ಮಾಡಿ ಸಾಹಿತ್ಯ ಮತ್ತು ಸಂಘಟಕರ ಮೆಚ್ಚುಗೆ ಗಳಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿ ಸದಸ್ಯರಾಗಿ ನೇಮಕಗೊಂಡ ನಿಕಟಪೂರ್ವ ಅಧ್ಯಕ್ಷ ಪ್ರೊಫೆಸರ್ ಪುಷ್ಪರಾಜ್ ಶುಭಾಶಯ ಕೋರಿ ಹರ್ಷ ವ್ಯಕ್ತಪಡಿಸಿದ್ದಾರೆ.

You may also like

News

CODP Extends Education Aid to Students, Spreads Awareness on Government Welfare Schemes

The Canara Organisation for Development and Peace (CODP) organised an Education Aid Cheque Distribution Programme along with an awareness session
News

ಮುದರಂಗಡಿ ಉದ್ಯಮಿ ಡೇವಿಡ್ ಡಿಸೋಜ ಹತ್ಯೆ – ಕೆಲವೇ ಗಂಟೆಗಳಲ್ಲಿ ಉಡುಪಿ ಪೊಲೀಸರಿಂದ ಆರೋಪಿ ರಾಜು ಬಂಧನ

ಮುದರಂಗಡಿ ಪೇಟೆಯಲ್ಲಿ ಹಾಡಹಗಲೇ ಉದ್ಯಮಿ ಡೇವಿಡ್ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧನದ

You cannot copy content of this page