ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ “ಕರ್ನಾಟಕದ ದರ್ಶನ’ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ
![](https://karavalisuddi.com/wp-content/uploads/2025/01/pravasa.webp)
ಬಂಟ್ವಾಳ : ಕರ್ನಾಟಕ ಪ್ರವಾಸೋದ್ಯಮ ಇಲಾಖೆ ರಾಜ್ಯ ಶಿಕ್ಷಣ ಮತ್ತು ಸಾಕ್ಷಾರತ ಇಲಾಖೆ, ಕ್ಷೇತ್ರ ಶಿಕ್ಷಣಧಿಕಾರಿಗಳ ಕಚೇರಿ ಬಂಟ್ವಾಳ ವತಿಯಿಂದ 2024 25 ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರ ಯೋಚಿಸಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಏರ್ಪಡಿಸಿರುವ “ಕರ್ನಾಟಕದ ದರ್ಶನ’ ಎಂಬ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಕಾರ್ಯಕ್ರಮವು ಬಂಟ್ವಾಳ ತಾಲೂಕಿನಿಂದ ಹಮ್ಮಿಕೊಳ್ಳಲಾಯಿತು.
ದೇಶ ಸುತ್ತು ಕೋಶ ಓದು ಎಂಬ ಮಾತಿನಂತೆ ತರಗತಿ ಕೋಣೆಗಳಿಂದ ಹೊರಗೆ ಶೈಕ್ಷಣಿಕ ವಿಚಾರವಾಗಿ ಅನುಭವವನ್ನು ಪಡೆಯಲು ರಾಜ್ಯ ಸರ್ಕಾರವು ಹಮ್ಮಿಕೊಂಡಿರುವ ಈ ಮಹತ್ತರವಾದ ಕಾರ್ಯಕ್ರಮವನ್ನು ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಿ ಹಾಗೂ ಶಿಕ್ಷಣಕ್ಕೆ ಪೂರಕವಾದ ಇಂತಹ ಚಟುವಟಿಕೆಗಳು ಹೆಚ್ಚು ಆಸಕ್ತಿಯನ್ನು ತಂದುಕೊಡುತ್ತವೆ ಎಂಬುದಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥನ್ ಎಮ್.ಜಿ. ಇವರು ಶುಭ ಹಾರೈಸಿ ಶೈಕ್ಷಣಿಕ ಪ್ರವಾಸದ ಬಸ್ಸಿಗೆ ಹಸಿರು ನಿಶಾನೆ ತೋರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಕ್ಕಳಿಗೆ 5 ದಿನದ ಪ್ರವಾಸವಾಗಿದ್ದು ಬೇಲೂರು, ಹಳೇಬೀಡು, ಹಂಪಿ, ಆಲಮಟ್ಟಿ, ವಿಜಯಪುರ, ಕೂಡಲಸಂಗಮ, ಐಹೊಳೆ, ಪಟ್ಟದಕಲ್ಲು ಬಾದಾಮಿ, ಅಂಜನಾದಿ, ಮೊದಲಾದ ಕ್ಷೇತ್ರಗಳ ವೀಕ್ಷಣೆ ಮಾಡಲಿರುವರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಪ್ರಸಾದ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಇದರ ಅಧೀಕ್ಷಕ ಪುಷ್ಪರಾಜ್, ಶಿಕ್ಷಣ ಸಂಯೋಜಕರಾದ ಪ್ರತಿಮಾ ವೈ, ಸುಜಾತ, ಸುಧಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಸಂತೋಷ್, ಪ್ರಥಮ ದರ್ಜೆ ಸಹಾಯಕ ಕಿಶೋರ್, ಕಚೇರಿ ಸಿಬ್ಬಂದಿ ಕಾರ್ತಿಕ್, ಸಮೂಹ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ರಘು, ಹಾಗೂ 75 ವಿದ್ಯಾರ್ಥಿಗಳನ್ನೊಳಗೊಂಡ ತಂಡದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಶಿಕ್ಷಕಿ ವಿಜಯಲಕ್ಷ್ಮಿ, ಚಿತ್ರಕಲಾ ಶಿಕ್ಷಕ ಮುರಳಿದರ ಆಚಾರ್ಯ ಹಾಗೂ ಸತ್ಯಶಂಕರ ಉಪಸ್ಥಿತರಿದ್ದರು.