August 8, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅಂತರಾಜ್ಯ ಮನೆ ಕಳ್ಳತನ ಆರೋಪಿಯನ್ನು ಬಂಧಿಸಿದ ಪುತ್ತೂರು ಗ್ರಾಮಾಂತರ, ವಿಟ್ಲ, ಕಡಬ ಪೊಲೀಸರು

ಚಿನ್ನಾಭರಣ ಸಮೇತ ರೂಪಾಯಿ 21 ಲಕ್ಷ ಮೌಲ್ಯದ ಸೊತ್ತು ವಶ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ವೆ ಗ್ರಾಮದ ಭಕ್ತಕೋಡಿ ಎಂಬಲ್ಲಿ 2024 ಡಿಸೆಂಬರ್ 20ರಂದು ಬೆಳಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆ ಮಧ್ಯೆ ಮನೆಯವರು ಇಲ್ಲದೇ ಇರುವ ಸಮಯದಲ್ಲಿ ಮನೆಯ ಹಿಂಬಾಗಿಲನ್ನು ಕಾಲಿನಿಂದ ಒದ್ದು ಬಾಗಿಲು ಮುರಿದು ಮನೆಯ ಒಳಗಿದ್ದ ಗೋಡ್ರೇಜನ್ನು ಮೀಟಿ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ರೀತಿಯ ಕಳ್ಳತನ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವು ಕಡೆ ಅಗುತಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಜಂಟಿ ಕಾರ್ಯಾಚರಣೆ ನಡೆಸಿ ಹಗಲು ಮನೆ ಕಳ್ಳತನ ನಡೆಸಿ ಯಾವುದೇ ಸುಳಿವು ನೀಡದೇ ಪರಾರಿಯಾಗುತ್ತಿದ್ದ ಆರೋಪಿಯನ್ನು  ಅಪರಾಧ ಪತ್ತೆ ತಂಡ 2025ನೇ ಜನವರಿ 10ರಂದು ಕಳ್ಳತನಕ್ಕೆ ಉಪಯೋಗಿಸುತ್ತಿದ್ದ ಕಾರು ಸಮೇತ ಆರೋಪಿಯನ್ನು ಬಂಧಿಸಿದ್ದು, ಆರೋಪಿಯನ್ನು ವಿಚಾರಿಸಲಾಗಿ  ಈತನು ಪುತ್ತೂರು  ಗ್ರಾಮಾಂತರ ಠಾಣಾ ಸರಹದ್ದಿನ ಸರ್ವೆ ಗ್ರಾಮದ ಭಕ್ತಕೋಡಿ ಹಾಗೂ ಈ ಹಿಂದೆ ಕಡಬ ಠಾಣಾ ಸರಹದ್ದಿನ ಆಲಂಗಾರು ಗ್ರಾಮದ ಕಲ್ಲೇರಿ, ಬಂಟ್ವಾಳ ಗ್ರಾಮಾಂತರ ಸರಹದ್ದಿನ ಇರಾ ಹಾಗೂ ವಿಟ್ಲ ಪೊಲೀಸ್‌ ಠಾಣಾ ಸರಹದ್ದಿನ ಕೊಲ್ನಾಡು ಗ್ರಾಮದ ಕುಂಟು ಕುಡೇಲು, ಮಂಕುಡೆ, ಕಾಡುಮಠ, ಇಡ್ಕಿದು ಗ್ರಾಮದ ಅಳಕೆ ಮಜಲು ಕಡೆಗಳಲ್ಲಿ ಹಗಲು ಸಮಯ ಕಳವು ಮಾಡಿದ ಪ್ರಕರಣಗಳಲ್ಲಿ  ಭಾಗಿಯಾಗಿರುವುದು ಪತ್ತೆಯಾಗಿರುತ್ತದೆ. ಇದೊಂದು ವಿಶೇಷ ಪ್ರಕರಣ ಆಗಿದ್ದು ಆರೋಪಿಯು ಕಳ್ಳತನ ಮಾಡಿ ಯಾವುದೇ ಸುಳಿವು ಸಿಗದೆ ಪರಾರಿಯಾಗುತ್ತಿದ್ದು ಈ ಬಗ್ಗೆ ವಿಶೇಷ ತಂಡ ರಚಿಸಿ ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿರುತ್ತದೆ.

ಬಂಧಿತ ಆರೋಪಿತನ ಹೆಸರು :- ಸೂರಜ್‌ ಕೆ. ಪ್ರಾಯ 36 ವರ್ಷ ತಂದೆ ದಿ| ಕುಮಾರ ಪಿ. ವಾಸ ಗುಡ್ಡೆಮನೆ ಮನೆ ಭಗವತಿ ದೇವಸ್ಥಾನ ಹತ್ತಿರ ಮನೆ ಉಪ್ಪಳ ಕಾಸರಗೋಡು ಜಿಲ್ಲೆ ಕೇರಳ ರಾಜ್ಯ (ಹಾಲಿ ವಾಸ;- ನವಿಲು ಗಿರಿ ಮನೆ ಮೂಡಂಬೈಲು ಗ್ರಾಮ ಹೊಸಂಗಡಿ ಮಂಜೇಶ್ವರ ಕಾಸರಗೋಡು ಜಿಲ್ಲೆ ಕೇರಳ ರಾಜ್ಯ)

 ಪತ್ತೆಯಾದ ಪ್ರಕರಣಗಳು:-

1.ಪುತ್ತೂರು ಗ್ರಾಮಾಂತರ ಠಾಣಾ ಅ,ಕ್ರ 147/2024 ಕಲಂ 305,331(3) ಬಿ ಎನ್‌ ಎಸ್‌ 2023

2.ಕಡಬ ಪೊಲೀಸ್‌ ಠಾಣಾ ಅ.ಕ್ರ 110/2024 ಕಲಂ 305,331(3) ಬಿ ಎನ್‌ ಎಸ್‌ 2023

3.ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 74/2024 ಕಲಂ 305,331(3) ಬಿ ಎನ್‌ ಎಸ್‌ 2023

4.ವಿಟ್ಲ ಪೊಲೀಸ್‌ ಠಾಣೆ ಅ,ಕ್ರ 146/2024 ಕಲಂ 305,331(3) ಬಿ ಎನ್‌ ಎಸ್‌ 2023

5.ವಿಟ್ಲ ಪೊಲೀಸ್‌ ಠಾಣಾ ಅ,ಕ್ರ  154/2024 ಕಲಂ 305,331(3) ಬಿ ಎನ್‌ ಎಸ್‌ 2023

6. ವಿಟ್ಲ ಪೊಲೀಸ್‌ ಠಾಣಾ ಅ,ಕ್ರ 156/2024 ಕಲಂ 305,331(3) ಬಿ ಎನ್‌ ಎಸ್‌ 2023

7. ವಿಟ್ಲ ಪೊಲೀಸ್‌ ಠಾಣಾ ಅ,ಕ್ರ 173/2024 ಕಲಂ 305,331(3) ಬಿ ಎನ್‌ ಎಸ್‌ 2023 .

ಈ ಮೇಲ್ಕಂಡ ಪ್ರಕರಣಗಳಿಗೆ ಸಂಬಂದಿಸಿದಂತೆ ತನಿಖೆ ನಡೆಸಿ ಆರೋಪಿಯು ಕಳ್ಳತನ ಮಾಡಿದ್ದ ಒಟ್ಟು ಅಂದಾಜು ಮೌಲ್ಯ ಹದಿನೆಂಟು ಲಕ್ಷ ರೂಪಾಯಿ ಮೌಲ್ಯದ 200ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ KL-14X-1915 ನಂಬ್ರದ ಮಾರುತಿ ಆಲ್ಟೋ ಕಾರು ಅಂದಾಜು ಮೌಲ್ಯ ರೂಪಾಯಿ 3 ಲಕ್ಷ ಆಗಿರುತ್ತದೆ. ಸ್ವಾಧಿನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 21 ಲಕ್ಷ ಆಗಿರುತ್ತದೆ.

ಸದ್ರಿ ಆರೋಪಿ ಪತ್ತೆ ಬಗ್ಗೆ ಕಾರ್ಯಾಚರಣೆಯನ್ನು ದಕ್ಷಿಣ ಕನ್ನಡ ಜಿಲ್ಲೆ ಅಧೀಕ್ಷಕರಾದ ಮಾನ್ಯ  ಯತೀಶ್‌ ಎನ್‌.ಐ.ಪಿ.ಎಸ್‌., ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ರಾಜೇಂದ್ರ ಡಿ.ಎಸ್‌. ರವರ ಮಾರ್ಗದರ್ಶನದಂತೆ ಪುತ್ತೂರು ಪೊಲೀಸ್‌ ಉಪಾಧಿಕ್ಷಕರಾದ ಅರುಣ್‌ ನಾಗೇಗೌಡ ಹಾಗೂ  ಬಂಟ್ವಾಳ ಪೊಲೀಸ್‌ ಉಪಾಧೀಕ್ಷಕರಾದ ವಿಜಯ್‌ ಪ್ರಸಾದ್‌  ರವರ ನಿರ್ದೇಶನದಂತೆ ಪುತ್ತೂರು  ಗ್ರಾಮಾಂತರ ನಿರೀಕ್ಷಕರಾದ ರವಿ ಬಿ.ಎಸ್‌., ವಿಟ್ಲ ಪೊಲೀಸ್‌ ನಿರೀಕ್ಷಕರಾದ ನಾಗರಾಜ್‌ ಹೆಚ್‌.ಇ. ರವರ ನೇತೃತ್ವದಲ್ಲಿ ಪೊಲೀಸ್‌ ಉಪ ನಿರೀಕ್ಷಕರಾದ ಜಂಬೂರಾಜ್‌ ಬಿ. ಮಹಾಜನ್‌, ಮಪಿ ಎಸ್‌.ಐ. ಸುಷ್ಮಾ ಜಿ. ಭಂಡಾರಿ, ಎಎಸ್‌ಐ ಮುರುಗೇಶ್‌ ಸಿಬ್ಬಂದಿಗಳಾದ ಉದಯ ರೈ, ರಾಧಾಕೃಷ್ಣ, ಪ್ರವೀಣ್‌ ರೈ ಪಾಲ್ತಾಡಿ, ಸ್ಕರಿಯ, ಅದ್ರಾಮ್‌, ಹರೀಶ್‌ಗೌಡ, ಹರಿಶ್ಚಂದ್ರ ಹರ್ಷಿತ್‌ ಗೌಡ, ಚಂದ್ರಶೇಖರ್‌ ಗೆಜ್ಜೆಳ್ಳಿ, ಶರಣಪ್ಪ ಪಾಟೇಲ್‌, ಶಂಕರ ಸಂಶಿ, ಗದಿಗಪ್ಪ, ವಿವೇಕ್‌, ಕುಮಾರ್‌ ಹೆಚ್‌., ನಾಗೇಶ್‌ ಕೆ.ಸಿ., ಗಣಕಯಂತ್ರ ವಿಭಾಗದ ದಿವಾಕರ್‌, ಸಂಪತ್‌ ಚಾಲಕರಾದ ಎಆರ್‌ಎಸ್‌ಐ ಯೋಗೇಶ್‌ ಹಾಗೂ ನಿತೇಶ್‌ ಕರ್ನೂರು ವಿಶೇಷ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ. ಪತ್ತೆ ತಂಡಕ್ಕೆ ಪೊಲೀಸ್‌ ಅಧೀಕ್ಷಕರು ವಿಶೇಷ ಬಹುಮಾನ ಘೋಷಿಸಿರುತ್ತಾರೆ.

You may also like

News

CODP Extends Education Aid to Students, Spreads Awareness on Government Welfare Schemes

The Canara Organisation for Development and Peace (CODP) organised an Education Aid Cheque Distribution Programme along with an awareness session
News

ಮುದರಂಗಡಿ ಉದ್ಯಮಿ ಡೇವಿಡ್ ಡಿಸೋಜ ಹತ್ಯೆ – ಕೆಲವೇ ಗಂಟೆಗಳಲ್ಲಿ ಉಡುಪಿ ಪೊಲೀಸರಿಂದ ಆರೋಪಿ ರಾಜು ಬಂಧನ

ಮುದರಂಗಡಿ ಪೇಟೆಯಲ್ಲಿ ಹಾಡಹಗಲೇ ಉದ್ಯಮಿ ಡೇವಿಡ್ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧನದ

You cannot copy content of this page