September 2, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪೋಪ್ ಫ್ರಾನ್ಸಿಸ್‍ರವರಿಗೆ `ಮೆಡಲ್ ಆಫ್ ಫ್ರೀಡಂ’ ಗೌರವ ನೀಡಿದ ಅಮೆರಿಕದ ನಿರ್ಗಮಿತ ಅಧ್ಯಕ್ಷ ಬೈಡನ್

ವಾಷಿಂಗ್ಟನ್: ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಜನವರಿ 11ರಂದು ಶನಿವಾರ ಫೋನ್ ಕರೆಯಲ್ಲಿ ಪೋಪ್ ಫ್ರಾನ್ಸಿಸ್ ಅವರಿಗೆ ಅಧ್ಯಕ್ಷೀಯ `ಸ್ವಾತಂತ್ರ್ಯ ಪದಕ’ ಪ್ರದಾನ ಮಾಡಿದರು ಎಂದು ಶ್ವೇತಭವನದ ಅಧಿಕಾರಿಗಳನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಜೋ ಬೈಡನ್ ಅಧ್ಯಕ್ಷರಾಗಿ ತನ್ನ ಕೊನೆಯ ಸಾಗರೋತ್ತರ ಪ್ರವಾಸವಾಗಿ ರೋಮ್‍ಗೆ ಭೇಟಿ ನೀಡಿ ಪೋಪ್ ಫ್ರಾನ್ಸಿಸ್‍ರವರಿಗೆ ವೈಯಕ್ತಿಕವಾಗಿ ಪದಕ ಪ್ರದಾನ ಮಾಡುವ ಕಾರ್ಯಕ್ರಮವಿತ್ತು. ಆದರೆ ಲಾಸ್ ಏಂಜಲೀಸ್‍ನಲ್ಲಿ ಹರಡುತ್ತಿರುವ ಭೀಕರ ಕಾಡ್ಗಿಚ್ಚಿನ ನಿಯಂತ್ರಣ ಕಾರ್ಯದ ಮೇಲೆ ನಿಗಾ ವಹಿಸಬೇಕಿರುವುದರಿಂದ ರೋಮ್ ಪ್ರವಾಸ ರದ್ದಾಗಿದೆ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ. `ಪೋಪ್ ಫ್ರಾನ್ಸಿಸ್, ನಿಮ್ಮ ನಮ್ರತೆ ಮತ್ತು ನಿಮ್ಮ ಕಾರ್ಯವಿಧಾನವು ಪದಗಳನ್ನು ಮೀರಿದೆ. ಎಲ್ಲರ ಬಗ್ಗೆಯೂ ಪ್ರೀತಿ ತೋರುವ ನಿಮ್ಮ ಕಾಳಜಿಗೆ ಸಾಟಿಯಿಲ್ಲ. ಜನರ ಪೋಪ್ ಆಗಿ ನೀವು ನಂಬಿಕೆ, ಭರವಸೆ ಮತ್ತು ಪ್ರೀತಿಯ ಬೆಳಕಾಗಿದ್ದೀರಿ’ ಎಂದು ಬೈಡನ್ `ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

You may also like

News

ಕಲ್ಲುಗುಂಡಿ ದರೋಡೆ ಪ್ರಕರಣದಲ್ಲಿ ಶ್ರೀನಿವಾಸ ದೋಷಮುಕ್ತ

ಆರೋಪಿ ಪರ ಪ್ರಖ್ಯಾತ ವಕೀಲರಾದ ಪುತ್ತೂರು ಮಹೇಶ್ ಕಜೆ ಯಶಸ್ವಿ ವಾದ ಪುತ್ತೂರು: ಸುಮಾರು 13 ವರ್ಷಗಳ ಹಿಂದೆ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕಲ್ಲುಗುಂಡಿ ಎಂಬಲ್ಲಿ
News

ಪುತ್ತೂರು ಪ್ರೆಸ್ ಕ್ಲಬ್ ಎದುರು ಸಾರ್ವಜನಿಕ ಶಾಂತಿಗೆ ಭಂಗ – ಮೂವರ ವಿರುದ್ಧ ಎಫ್‌ಐಆರ್ ದಾಖಲು

ಪುತ್ತೂರು: ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರಿ ಗಲಾಟೆ ನಡೆಸಿ, ಸಾರ್ವಜನಿಕ ಶಾಂತಿಗೆ ಭಂಗ ತಂದಿರುವ ಘಟನೆಗೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳು ಸೇರಿದಂತೆ ಇತರರ ವಿರುದ್ಧ ಪುತ್ತೂರು ನಗರ

You cannot copy content of this page