March 26, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಥೊಲಿಕ್ ಸಭಾ ಶಂಭೂರು ಘಟಕದ ಬೆಳ್ಳಿಹಬ್ಬ ಸಂಭ್ರಮದಿಂದ ಆಚರಣೆ

ಸೇವೆ, ತ್ಯಾಗ ಮತ್ತು ಒಗ್ಗಟ್ಟು ಶಂಭೂರು ಚರ್ಚ್ ನಲ್ಲಿ ಎದ್ದು ಕಾಣುತ್ತಿದೆ  – ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್

ಮಂಗಳೂರು ಧರ್ಮಕ್ಷೇತ್ರದ ಸೈಂಟ್ ಜೋನ್ ಪಾವ್ಲ್ ದ್ವಿತೀಯ ವಿಟ್ಲ ವಲಯದ ಕಥೊಲಿಕ್ ಸಭಾ ಶಂಭೂರು ಘಟಕದ ಬೆಳ್ಳಿಹಬ್ಬದ ಸಂಭ್ರಮಾಚರಣೆಯು ಜನವರಿ 12ರಂದು ಭಾನುವಾರ ಶಂಭೂರು ಚರ್ಚ್ ನಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಯಿತು.

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ವಿಟ್ಲ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ಹಾಗೂ ವಿಟ್ಲ ವಲಯದ ಶ್ರೇಷ್ಠ ಗುರು ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್, ವಲಯದ ಚರ್ಚ್ ಗಳ ಧರ್ಮಗುರುಗಳು ಹಾಗೂ ಕಥೊಲಿಕ್ ಸಭಾ ವಿಟ್ಲ ವಲಯದ ಮುಖ್ಯಸ್ಥರೊಂದಿಗೆ ಹಾಗೂ ಶಂಭೂರು ಘಟಕದ ಸದಸ್ಯರೊಂದಿಗೆ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕಥೊಲಿಕ್ ಸಭಾ ಶಂಭೂರು ಘಟಕದ ಮುಖಾಂತರ ನಡೆದ ಎಲ್ಲಾ ಕಾರ್ಯಗಳಿಗೆ ಮತ್ತು ದೇವರು ನೀಡಿದ ಆಶೀರ್ವಾದಗಳಿಗೆ ಕೃತಜ್ಞತಾ ಪೂರ್ವಕವಾಗಿ ದಿವ್ಯ ಬಲಿಪೂಜೆಯನ್ನು ಶಂಭೂರು ಚರ್ಚ್ ನಲ್ಲಿ ನಡೆಸುವ ಮುಖಾಂತರ ಬೆಳ್ಳಿಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಲಿಪೂಜೆಯ ಬಳಿಕ  ಚರ್ಚ್ ವಠಾರದಲ್ಲಿ ಭವ್ಯ ಸಭಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶಂಭೂರು ಚರ್ಚ್ ಧರ್ಮಗುರು ವಂದನೀಯ ಫಾದರ್ ಸಂತೋಷ್ ಡಿಸೋಜ, ಅಧ್ಯಕ್ಷತೆಯನ್ನು ವಹಿಸಿ ದೀಪ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಳೆದ ಇಪ್ಪತ್ತೈದ ವರ್ಷಗಳಲ್ಲಿ ನಡೆದ ಕಾರ್ಯಕ್ರಮಗಳ ಸವಿಸ್ತಾರ ವರದಿಯನ್ನು ಕಾರ್ಯದರ್ಶಿ ಲೂವಿಸ್ ಬುಕೆಲ್ಲೊ ಇವರು ವಾಚಿಸಿದರು.

 

 

 

ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಟ್ಲ ವಲಯದ ಶ್ರೇಷ್ಠ ಗುರು ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಸಭೆಯನ್ನು ಉದ್ದೇಶಿಸಿ, ಸೇವೆಯ ಮನೋಭಾವ, ತ್ಯಾಗದ ಉತ್ಸಾಹ ಮತ್ತು ಒಗ್ಗಟ್ಟು ನಮ್ಮಲ್ಲಿ ಇದ್ದರೆ ಮಾತ್ರ ಕಥೊಲಿಕ್ ಸಭಾ ಮುಖಾಂತರ ಯಾವುದೇ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯ. ಇದು ಶಂಭೂರು ಚರ್ಚ್ ನಲ್ಲಿ ಎದ್ದು ಕಾಣುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಬಲಿಷ್ಟವಾದ ಒಗ್ಗಟ್ಟು ಮತ್ತು ಒಮ್ಮನಸ್ಸಿನಿಂದ ಸೇವೆಯನ್ನು ನೀಡಲು ಕರೆ ನೀಡಿದರು.  ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಶಂಭೂರು ಘಟಕದಲ್ಲಿ ಕಥೊಲಿಕ್ ಸಭಾ ಸಂಘಟನೆಯ ಮುಖಾಂತರ ನಿಷ್ಠಾವಂತ ಸೇವೆಯನ್ನು ನೀಡಿದ ಆಧ್ಯಾತ್ಮಿಕ ನಿರ್ದೇಶಕರು, ಅಧ್ಯಕ್ಷ ಹಾಗೂ ಕಾರ್ಯದರ್ಶಿ, ಕೇಂದ್ರೀಯ ಪ್ರತಿನಿಧಿಗಳು ಮತ್ತು ಕಥೊಲಿಕ್ ಸಭಾದ ಮುಖ್ಯಸ್ಥರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ವಲಯ ಅಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್ ಇವರು ಕಥೊಲಿಕ್ ಸಭಾ ಶಂಭೂರು ಘಟಕದ ಸ್ಥಾಪಕ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಸ್ಟ್ಯಾನಿ ಲೋಬೊ ಹಾಗೂ ಸ್ಥಾಪಕ ಅದ್ಯಕ್ಷ ಡೇನಿಯಲ್ ಪಿಂಟೊ ಇವರಿಂದ ಪ್ರಸ್ತುತ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಸಂತೋಷ್ ಡಿಸೋಜ ಮತ್ತು ಪ್ರಸ್ತುತ ಅಧ್ಯಕ್ಷ ಹೆರಾಲ್ಡ್ ಮೊಂತೇರೊ ಇವರ ತನಕ ಸೇವೆಯನ್ನು ಸಲ್ಲಿಸಿದವರಿಗೆ ಕೃತಜ್ಞತೆಗಳನ್ನು ಅರ್ಪಿಸಿ, ಮುಂದಿನ ದಿನಗಳಲ್ಲಿ ಇನ್ನೂ ಶಂಭೂರು ಘಟಕವು ಬಲಿಷ್ಟವಾಗಲಿ ಎಂದು ಶುಭ ಹಾರೈಸಿದರು.

 

 

 

 

 

 

 

ಗೌರವ ಅತಿಥಿಗಳಾಗಿ ಆಗಮಿಸಿದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಸನ್ಮಾನವನ್ನು ಸ್ವೀಕರಿಸಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕಥೊಲಿಕ್ ಸಭಾ ಶಂಭೂರು ಘಟಕದ ಅಭಿವೃದ್ಧಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಕಥೊಲಿಕ್ ಸಭಾ ಸಂಘಟನೆಯು ಮಂಗಳೂರು ಧರ್ಮಕ್ಷೇತ್ರದಲ್ಲಿ ಧರ್ಮಾಧ್ಯಕ್ಷರ ಮಾರ್ಗದರ್ಶನದಲ್ಲಿ ನಡೆಯುವ ಅತೀ ದೊಡ್ಡ ಸಂಘಟನೆ. ಈ ಸಂಘಟನೆಯು ಹಲವಾರು ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಿ ಜನರ ಮನಸ್ಸುಗಳನ್ನು ಗೆದ್ದು ಜಗತ್ ಪ್ರಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಒಳ್ಳೆಯ ಕಾರ್ಯಕ್ರಮಗಳು ನಡೆಯಲಿ ಎಂದು ಶಂಭೂರು ಚರ್ಚ್ ನ ಧರ್ಮಗುರು ವಂದನೀಯ ಫಾದರ್ ಸಂತೋಷ್ ಡಿಸೋಜ ಮತ್ತು ಕಥೊಲಿಕ್ ಸಭೆಯ ಎಲ್ಲಾ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಬೆಳ್ಳಿಹಬ್ಬಕ್ಕೆ ಶುಭ ಹಾರೈಸಿದರು.

 

ಶಂಭೂರು ಘಟಕದ ಇಪ್ಪತ್ತೈದು ವರ್ಷಗಳ ಬೆಳ್ಳಿಹಬ್ಬ ಆಚರಣೆಯ ಸವಿನೆನಪಿಗೆ ಮಕ್ಕಳ ಶಿಕ್ಷಣಾಭಿವೃದ್ಧಿಗೋಸ್ಕರ ಶಂಭೂರು ಘಟಕದಿಂದ ಒಗ್ಗೂಡಿಸಿದ ರೂಪಾಯಿ 1 ಲಕ್ಷ ಮೌಲ್ಯದ ಚೆಕ್ಕನ್ನು ಶಂಭೂರು ಚರ್ಚ್ ಧರ್ಮಗುರುಗಳಿಗೆ ಕಥೊಲಿಕ್ ಸಭಾ ವತಿಯಿಂದ ಹಸ್ತಾಂತರಿಸಲಾಯಿತು.

ಶಂಭೂರು ಘಟಕದ ಅಧ್ಯಕ್ಷ ಹೆರಾಲ್ಡ್ ಮೊಂತೇರೊ ಎಲ್ಲರನ್ನೂ ಸ್ವಾಗತಿಸಿದರು. ಸದಸ್ಯ ಇಗ್ನೇಶಿಯಸ್ ಡಿಸೋಜ ಧನ್ಯವಾದ ಸಮರ್ಪಿಸಿದರು. ಗಿಲ್ಬರ್ಟ್ ಪಿಂಟೊ ಮತ್ತು ಸರಿತಾ ಫೆರಾವೊ ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆಯಲ್ಲಿ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೊ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಲ್ಯಾನ್ಸಿ ಕ್ರಾಸ್ತಾ, ಐಸಿವೈಯಂ ಶಂಭೂರು ಘಟಕದ ಅಧ್ಯಕ್ಷ ರೋಯ್ ಪಾಷನ್  ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ವಲಯದ ಘಟಕಗಳ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಮುಖ್ಯಸ್ಥರು ಹಾಜರಿದ್ದರು. ಕಾರ್ಯಕ್ರಮದ ಬಳಿಕ ಐಸಿವೈಯಂ ಸಂಘಟನೆಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ನೆರೆದ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

You may also like

News

ದಲಿತ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ಮುಖಂಡ ಮಹೇಶ್ ಭಟ್ ಬಂಧನಕ್ಕೆ ಡಿಎಚ್ಎಸ್ ಒತ್ತಾಯ – ಕಠಿಣ ಕ್ರಮಕ್ಕೆ ಆಗ್ರಹ

ಬಂಟ್ವಾಳ ತಾಲೂಕಿನ ವಿಟ್ಲದ ಮುರುವ ಎಂಬಲ್ಲಿ ದಲಿತ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬವನು ನಿರಂತರ ಲೈಂಗಿಕ ಕಿರುಕುಳ ನೀಡುವ ಮೂಲಕ ಮಾನಸಿಕ
News

ನೇತ್ರದಾನದಿಂದ ಇನ್ನೊಬ್ಬರ ಬಾಳಿಗೆ ಬೆಳಕು – ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ

ಮಂಗಳೂರು : ಇನ್ನೊಬ್ಬರ ಬಾಳಿಗೆ ಬೆಳಕಾಗುವ ನೇತ್ರದಾನ ಶ್ರೇಷ್ಠ ದಾನವಾಗಿದ್ದು, ನೇತ್ರದಾನಿಗಳ ಬದ್ಧತೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ ಹೇಳಿದರು. ದಕ್ಷಿಣ ಕನ್ನಡ

You cannot copy content of this page