ರಾಜ್ಯ ಮಟ್ಟದ ತ್ರೋಬಾಲ್ ನಲ್ಲಿ ದ್ವಿತೀಯ ಸ್ಥಾನ ಪಡೆದ ದರ್ಬೆ ಬೆಥನಿ ಶಾಲೆ ವಿದ್ಯಾರ್ಥಿಗಳಿಗೆ ಸನ್ಮಾನ

ಪುತ್ತೂರು : ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೋಲಾರ ಜಿಲ್ಲೆಯ ಕೆಜಿಎಫ್ ಪ್ರೌಢ ಶಾಲೆಯಲ್ಲಿ ಜನವರಿ 8 ಮತ್ತು 9ರಂದು ನಡೆದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ಪುತ್ತೂರು ದರ್ಬೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರು ದ್ವಿತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಾದ ಆದ್ಯ ಕೆ., ಶಾನ್ವಿ ಪ್ರೀಷ್ಮ, ಫಾತಿಮಾತ್ ಮುನವರ, ಫಾತಿಮಾತ್ ಝುಲ್ಫ, ನಿರೀಕ್ಷಾ ಎಚ್. ಶೆಟ್ಟಿ, ಸ್ನಿಗ್ಧ, ಆಯಿಷಾತ್ ಹಿಬಾ ಸಮನ್ವಿ, ಹಿತಾಶ್ರೀ, ಜೆರುಷ, ರೇಯ ಇವರಿಗೆ ಶಾಲಾ ಸಂಚಾಲಕಿ ಭಗಿಣಿ ಪ್ರಶಾಂತಿ ಬಿ. ಎಸ್. ಇವರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರುಗಳು, ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಎರಡು ವಿಭಾಗದ ಮುಖ್ಯೋಪಾಧ್ಯಾಯರುಗಳು ಹಾಗೂ ರಾಜ್ಯಮಟ್ಟದಲ್ಲಿ ಸಾಧನೆಗೈದ ಮಕ್ಕಳ ಪೋಷಕರು ಕೂಡ ಭಾಗವಹಿಸಿದ್ದರು. ಮಕ್ಕಳು ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆಯನ್ನು ಮಾಡಲು ಕಾರಣಕರ್ತರದ ಸಂಸ್ಥೆಯ ದೈಹಿಕ ಶಿಕ್ಷಕರಾದ ನಿರಂಜನ್, ಅಕ್ಷಯ್ ಹಾಗೂ ಹರೀಶ್ ಇವರನ್ನು ಕೂಡ ಸನ್ಮಾನಿಸಲಾಯಿತು.
ಶಿಕ್ಷಕಿ ಪವಿತ್ರ ಇವರು ಸ್ವಾಗತ ಮಾಡಿದರು. ಅನಿತಾ ರೊಡ್ರಿ ಗಸ್ ವಂದನಾರ್ಪಣೆ ಗೈದರು. ಶಿಕ್ಷಕಿ ಸೌಮ್ಯ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.