ಉಡುಪಿ – ಕಾಸರಗೋಡು – ಕಡಂದಲೆ 400 ಕೆ.ವಿ. ವಿದ್ಯುತ್ ಪ್ರಸರಣ ಯೋಜನೆಯನ್ನು ತಕ್ಷಣ ನಿಲ್ಲಿಸುವಂತೆ ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ

ಉಡುಪಿ – ಕಾಸರಗೋಡು – ಕಡಂದೆಲೆ 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ಮಾನ್ಯ ಮುಖ್ಯಮಂತ್ರಿಯವರು ಕರ್ನಾಟಕ ಕ್ರೀಡಾಕೂಟ 2025 ಇದರ ಉದ್ಘಾಟನೆಗೆ ಇಂದು ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಖುದ್ದಾಗಿ ಭೇಟಿ ಮಾಡಿ ಸವಿಸ್ತಾರವಾಗಿ ತಿಳಿಸಿ ಈ ನಿರ್ಮಾಣ ಯೋಜನೆಯನ್ನು ತಕ್ಷಣ ನಿಲ್ಲಿಸುವಂತೆ ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಇಂದು ಜನವರಿ 17ರಂದು ಶುಕ್ರವಾರ ಮನವಿಯನ್ನು ಸಲ್ಲಿಸಲಾಯಿತು. ಮುಖ್ಯಮಂತ್ರಿಯವರು ತಕ್ಷಣವೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ವರದಿಯನ್ನು ನೀಡುವಂತೆ ಆದೇಶಿಸಿದರು.
ಈ ಸಂದರ್ಭದಲ್ಲಿ MLC ಐವನ್ ಡಿಸೋಜ, ಮಾಜಿ ಸಚಿವರಾದ ರಮಾನಾಥ ರೈ ಹಾಗೂ ವಿನಯ ಕುಮಾರ್ ಸೊರಕೆ, ಉದ್ಯಮಿ ಪಿಯುಸ್ ಎಲ್. ರೊಡ್ರಿಗಸ್, ಹೋರಾಟ ಸಮಿತಿ ಅಧ್ಯಕ್ಷ ವಿಕ್ಟರ್ ಕಡಂದಲೆ, ಕಥೊಲಿಕ್ ಸಭಾ ಸಿಟಿ ವಲಯದ ಅಧ್ಯಕ್ಷ ಅರುಣ್ ಡಿಸೋಜ, ಕಥೊಲಿಕ್ ಸಭಾ ಪಾಲಡ್ಕ ಘಟಕದ ಅಧ್ಯಕ್ಷ ರಿಚ್ಚರ್ಡ್ ಡಿಸೋಜ, ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ವಿಟ್ಲ, ರಾಜೀವ್ ಗೌಡ ವಿಟ್ಲ, ಪತ್ರಕರ್ತರಾದ ನಿಶಾಂತ್ ಬಿಲ್ಲಂಪದವು, ಅಲೆಕ್ಸ್ ಸಿಕ್ವೇರಾ ಲೊರೆಟ್ಟೊ, ಅಗ್ರಾರ್ ನವರಾದ ಅರುಣ್ ಡಿಸೋಜ, ವಿನ್ಸೆಂಟ್ ಡೇಸಾ, ಜೆಸಿಂತಾ ಲೋಬೊ, ಬೆನೆಡಿಕ್ಟಾ ಕಾರ್ಲೊ, ಲ್ಯಾನ್ಸಿ ಕಾರ್ಲೊ, ರೂಪೇಶ್ ಮಸ್ಕರೇನ್ಹಸ್, ಜೋಸ್ಪಿನ್ ಮಸ್ಕರೇನ್ಹಸ್, ಉಡುಪಿ – ಕಾಸರಗೋಡು – ಕಡಂದಲೆ 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ಇನ್ನಾ, ಅಮರ್ ನಾಥ ಶೆಟ್ಟಿ ಇನ್ನಾ ಮತ್ತಿತರರು ಉಪಸ್ಥಿತರಿದ್ದರು.