ಮಕ್ಕಳಿಗೆ ಭಾಷಣ ಸ್ಪರ್ಧೆಯೊಂದಿಗೆ ನಾಗರಿಕ ಹಾಗೂ ಸರ್ಕಾರಿ ಸೇವೆಗಳಲ್ಲಿ ಉನ್ನತ ಹುದ್ದೆ ಪಡೆಯುವಂತೆ ಮಕ್ಕಳನ್ನು ಪ್ರೇರೇಪಿಸಬೇಕು – ಫಾದರ್ ಐವನ್ ಎಂ. ರೊಡ್ರಿಗಸ್

ಮಂಗಳೂರು ಧರ್ಮಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಧರ್ಮಕೇಂದ್ರಗಳ ಮಕ್ಕಳಿಗೆ ಭಾಷಣ ಸ್ಪರ್ಧೆ
ಕ್ರೈಸ್ತ ಸಮುದಾಯದ ಮಕ್ಕಳನ್ನು ಸಮಾಜದಲ್ಲಿ ಉತ್ತಮ ಭಾಷಣಕಾರರನ್ನಾಗಿ ರೂಪಿಸುವ ಸಲುವಾಗಿ ವರ್ಷಂಪ್ರತಿ ಮಂಗಳೂರು ಧರ್ಮಕ್ಷೇತ್ರದ ಎಲ್ಲಾ ಧರ್ಮಕೇಂದ್ರಗಳ ಮಕ್ಕಳಿಗಾಗಿ ಭಾಷಣ ಸ್ಪರ್ಧೆಯನ್ನು ಕೊಂಕಣಿ ಮತ್ತು ಕನ್ನಡ ಭಾಷೆಗಳಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇವರು ಆಯೋಜಿಸುತ್ತಾರೆ. 2024-25ನೇ ಸಾಲಿನ ಈ ಸ್ಪರ್ಧೆಯು ವಿಟ್ಲ ವಲಯದ ವಿಟ್ಲದಲ್ಲಿನ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜನವರಿ 19ರಂದು ಭಾನುವಾರ ಬಹಳ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ವಿಟ್ಲ ವಯಲಯದ ಶ್ರೇಷ್ಟ ಗುರು ಹಾಗೂ ಕಥೊಲಿಕ್ ಸಭಾ ವಿಟ್ಲ ವಯಲದ ಆಧ್ಯಾತ್ಮಿಕ ನಿರ್ದೇಶಕರಾದ ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಇವರು ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಿದರು. ವರ್ಷಂ ಪ್ರತಿ ನಡೆಸುವ ಭಾಷಣ ಸ್ಪರ್ಧೆಯ ಆಯೋಜಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಕೇವಲ ಭಾಷಣ ಸ್ಪರ್ಧೆ ಮಕ್ಕಳಿಗೆ ಆಯೋಜಿಸಿದರೆ ಸಾಲದು. ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ಸರಕಾರಿ ಸೇವೆಗಳಲ್ಲಿ ಉನ್ನತ ಹುದ್ದೆಯನ್ನು ಪಡೆಯುವಂತೆ ಶಿಕ್ಷಣವನ್ನು ನೀಡಿ ಪ್ರೇರೇಪಿಸಬೇಕು ಎಂದು ಕರೆನೀಡಿ, ಸ್ಪರ್ಧೆಗೆ ಬಂದ ಎಲ್ಲಾ ಮಕ್ಕಳಿಗೆ ಶುಭ ಕೋರಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಆಧ್ಯಾತ್ಮಿಕ ನಿರ್ದೇಶಕರಾದ ಅತೀ ವಂದನೀಯ ಡಾ| ಜೆ.ಬಿ. ಸಲ್ಡಾನ್ಹಾ ಇವರು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲಾ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ವಿಟ್ಲ ವಲಯದ ಕಥೊಲಿಕ್ ಸಭಾದ ಅಧ್ಯಕ್ಷ ರೋಷನ್ ಬೊನಿಫಾಸ್ ಮಾರ್ಟಿಸ್, ಸೂರಿಕುಮೇರು ಬೊರಿಮಾರ್ ಇವರು ನೆರೆದ ಎಲ್ಲರಿಗೂ ಸ್ವಾಗತಿಸಿದರು ಹಾಗೂ ಕೇಂದ್ರೀಯ ಭಾಷಣ ಸ್ಪರ್ಧೆಯನ್ನು ವಿಟ್ಲ ವಲಯದಲ್ಲಿ ಆಯೋಜಿಸಲು ಅವಕಾಶವನ್ನು ಕಲ್ಪಿಸಿದ ಕೇಂದ್ರೀಯ ಕಾರ್ಯಕಾರಿ ಸಮಿತಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಥೊಲಿಕ್ ಸಭಾ ಮಂಗ್ಳುರ್ ಪದೇಶ್ (ರಿ.) ಇದರ ಕೇಂದ್ರೀಯ ಅಧಕ್ಷ ಆಲ್ವಿನ್ ಡಿಸೋಜಾ ಪಾನೀರ್ ಇವರು ಸ್ಪರ್ಧೆಗೆ ಬಂದ ಎಲ್ಲಾ ಮಕ್ಕಳನ್ನು ಹುರಿದುಂಬಿಸಿ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ| ಡಿಂಪಲ್ ಜೆನಿಫರ್ ಫೆರ್ನಾಂಡಿಸ್, ಹಿಂದಿ ವಿಭಾಗ ಮುಖ್ಯಸ್ಥರು, ಪುತ್ತೂರು ಸಂತ ಫಿಲೊಮಿನಾ ಕಾಲೇಜು (ಸ್ವಾಯತ್ತ) ಮತ್ತು ವಿಟ್ಲ ವಯಲದ ಪಾಲನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೆಸಿಂತಾ ಮಸ್ಕರೇನ್ಹಸ್ ಆಗಮಿಸಿದ್ದರು.
ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತ, ಕೇಂದ್ರೀಯ ಕಾರ್ಯದರ್ಶಿ ಎ.ಪಿ. ಮೊಂತೇರೊ, ಕಥೊಲಿಕ್ ಸಭಾ ವಿಟ್ಲ ವಲಯದ ಕಾರ್ಯದರ್ಶಿ ವೀಣಾ ಡಿ ಸೋಜಾ, ವಿಟ್ಲ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಿಜಯ್ ಪಾಯ್ಸ್, ಕಾರ್ಯದರ್ಶಿ ಶ್ವೇತಾ ಪಾಯ್ಸ್, ಕಥೊಲಿಕ್ ಸಭಾ ವಿಟ್ಲ ವಲಯದ ಅಧ್ಯಕ್ಷೆ ಜೆಸಿಂತಾ ಫೆರ್ನಾಂಡಿಸ್, ಕಾರ್ಯದರ್ಶಿ ತೋಮಸ್ ಮಸ್ಕರೇನ್ಹಸ್, ಕೇಂದ್ರೀಯ ನಿಕಟ ಪೂರ್ವ ಅಧ್ಯಕ್ಷ ಸ್ಟ್ಯಾನಿ ಲೋಬೊ, ಉಪಾಧ್ಯಕ್ಷ ಸ್ಟೀವನ್ ಡಿಸೋಜ, ಸಹ ಖಜಾಂಚಿ ವಿಲ್ಫ್ರೆಡ್ ಅಲ್ವಾರಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಾಷಣ ಸ್ಪರ್ಧೆಯ 2024-25 ನೇ ಸಾಲಿನ ಕೇಂದ್ರೀಯ ಸಂಚಾಲಕಿ ಶಿಕ್ಷಕಿ ಲವೀನಾ ಪಿಂಟೊ ಇವರು ಸುಸೂತ್ರವಾಗಿ ಮಕ್ಕಳಿಗೆ ಭಾಷಣ ಸ್ಪರ್ಧೆಯನ್ನು ನೆರವೇರಿಸಿದರು. ಇವರಿಗೆ ನೋರ್ಬರ್ಟ್ ಮಿಸ್ಕಿತ್ ಸುರತ್ಕಲ್ ಮತ್ತು ಸಂತೋಷ್ ಡಿಸೋಜಾ ಬಜ್ಪೆ ಸಹಕಾರವನ್ನು ನೀಡಿದರು. ನೋರ್ಬರ್ಟ್ ಮಿಸ್ಕಿತ್ ಧನ್ಯವಾದವಿತ್ತರು. ವಿಟ್ಲದ ದಿಲ್ ರೋಯ್ ಮಸ್ಕರೇನ್ಹಸ್ ಕಾರ್ಯಕ್ರಮವನ್ನು ನಿರೂಪಿಸಿದರು.