April 27, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಜನಸಾಗರದಲ್ಲಿ ಸಂಪನ್ನಗೊಂಡ ಬಂಟ್ವಾಳ ತಾಲೂಕು ಮಟ್ಟದ ಕೋಟಿ ಚೆನ್ನಯ ಕ್ರೀಡೋತ್ಸವ

ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಯುವವಾಹಿನಿ ಬಂಟ್ವಾಳ ಹಾಗೂ ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿ ಸಹಕಾರದೊಂದಿಗೆ ಬಂಟ್ವಾಳ ತಾಲೂಕು ಮಟ್ಟದ ಕೋಟಿ ಚೆನ್ನಯ ಕ್ರೀಡೋತ್ಸವವು ಬಂಟ್ವಾಳ ಭಂಡಾರಿಬೆಟ್ಟು ಎಸ್‌ವಿಎಸ್‌ ಕ್ರೀಡಾಂಗಣದಲ್ಲಿ ಸಹಸ್ರಾರು ಸಂಖ್ಯೆಯ ಜನಸಾಗರದಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡಿತು.

ದೀಪ ಬೆಳಗುವುದರ ಮೂಲಕ ಕ್ರೀಡೋತ್ಸವ ಉದ್ಘಾಟಿಸಿದ ಭಾರತ ಸರಕಾರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ ಅತ್ಯಂತ ವ್ಯವಸ್ಥಿತವಾಗಿ ಕ್ರೀಡಾಕೂಟ ಆಯೋಜಿಸಿದ ಸಮಾಜದ ಸಂಘಕ್ಕೆ ಕೃತಜ್ಞತೆ ಅರ್ಪಿಸುತ್ತೇನೆ ಎಂದರು. ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಶಿಸ್ತುಬದ್ಧ ಕ್ರೀಡಾಜ್ಯೋತಿ ಮೆರವಣಿಗೆ :

ಬಿ.ಸಿ. ರೋಡ್ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಗುರುಪೂಜೆ ನಡೆದು ತಾಲೂಕು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಕ್ರೀಡಾಜ್ಯೋತಿ ಹಸ್ತಾಂತರ ಮಾಡಿದರು. ಬಳಿಕ 24 ಗ್ರಾಮ ಸಮಿತಿಗಳ ಕ್ರೀಡಾ ತಂಡಗಳು ಆಕರ್ಷಕ ಸಮವಸ್ತ್ರದ ಮೂಲಕ ಚೆಂಡೆ ವಾದ್ಯಗೋಷ್ಠಿಯೊಂದಿಗೆ ಬಂಟ್ವಾಳ ಎಸ್‌ವಿ‌ಎಸ್ ಕ್ರೀಡಾಂಗಣಕ್ಕೆ ಮೆರವಣಿಗೆ ಆಗಮಿಸಿತು.

ಕ್ರೀಡಾಭಿಮಾನಿಗಳ ಮನಸೂರೆಗೊಂಡ ಆಕರ್ಷಕ ಪಥಸಂಚಲನ:

24 ಗ್ರಾಮ ಸಮಿತಿಗಳ ತಂಡಗಳು ಕ್ರೀಡಾಂಗಣದಲ್ಲಿ ಆಕರ್ಷಕ ಪಥಸಂಚನ ನಡೆಸಿದವು. ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿ, ಕ್ರೀಡೆಯಿಂದ ಗೆಲುವು – ಸೋಲಿಗಿಂತಲೂ ಶಿಸ್ತಿವ ಜೀವನ ನಮ್ಮದಾಗಲಿದ್ದು ಕ್ರೀಡೆಯು ಜಾತಿ-ಧರ್ಮವನ್ನು ಮೀರಿದೆ ಎಂದರು. ಕ್ರೀಡೆಯಿಂದ ಮಕ್ಕಳು ಸಶಕ್ತಿಯಿಂದ ಬೆಳೆದು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವುದಕ್ಕೆ ಇದು ಸಹಕಾರಿಯಾಗುತ್ತದೆ. ಆಯೋಜಕರ ಶ್ರಮ ಸಾರ್ಥಕವಾಗಿದೆ ಎಂದರು. ಬಂಟ್ವಾಳ ಡಿವೈಎಸ್‌ಪಿ ಎಸ್. ವಿಜಯಪ್ರಸಾದ್ ಧ್ವಜಾರೋಹಣ ನೆರವೇರಿಸಿದರು.

ಕೋಟಿ ಚೆನ್ನಯರ ಹೆಸರಲ್ಲಿ ಜಿಲ್ಲೆಯಲ್ಲಿ ಕ್ರೀಡಾ ತರಬೇತಿ ಕೇಂದ್ರವಾಗಲಿ: ಕೋಟ ಶ್ರೀನಿವಾಸ ಪೂಜಾರಿ

ಕೋಟಿ ಚೆನ್ನಯರ ಹೆಸರಿನಲ್ಲಿ ಬಂಟ್ವಾಳ ತಾಲೂಕಿನ ಬಿಲ್ಲವ ಸಮಾಜ ಸೇವಾ ಸಂಘ ಕ್ರೀಡಾಕೂಟ ಏರ್ಪಡಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ, ಮುಂದೆ ಇದು ಶಾಶ್ವತವಾಗಿರಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾ ತರಬೇತಿ ಕೇಂದ್ರವಾಗಿ ರೂಪುಗೊಳ್ಳಲು ಸಹಕಾರಿಯಾಗಲಿ ಎಂದು ಸಮಾರಂಭದ ಮುಖ್ಯ ಅತಿಥಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಕೋಟಿ ಚೆನ್ನಯ ಕ್ರೀಡೋತ್ಸವ ಇತಿಹಾಸ ನಿರ್ಮಿಸಿದೆ : ಉಮನಾಥ ಕೋಟ್ಯಾನ್

ಕೋಟಿ ಚೆನ್ನಯ ಕ್ರೀಡೋತ್ಸವ ಇತಿಹಾಸದ ಪುಟ ಸೇರಿದೆ, ಆಯೋಜಕರ ರಾತ್ರಿ ಹಗಲಿನ ದುಡಿಮೆಯ ಫಲಿತಾಂಶ ಇದು, ಈ ಕ್ರೀಡೋತ್ಸವ ಯುವ ಸಮುದಾಯಕ್ಕೆ ಸ್ಫೂರ್ತಿ ನೀಡಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸದ ಮುಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದರು

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ  ಎಚ್. ಎಸ್. ಸಾಯಿರಾಮ್, ಕೋಶಾಧಿಕಾರಿ ಆರ್ ಪದ್ಮರಾಜ್, ಭಾರತ್ ಕೊ-ಅಪರೇಟಿವ್ ಬ್ಯಾಂಕ್ ಲಿ. ಮುಂಬೈ ಅಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ, ಬೆಂಗಳೂರು ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷ ವೇದಕುಮಾ‌ರ್, ಬಂಟ್ವಾಳ ಪುರಸಭೆಯ ಅಧ್ಯಕ್ಷ  ವಾಸು ಪೂಜಾರಿ ಲೊರೆಟ್ಟೊ, ಮಾಜಿ ಶಾಸಕ ರುಕ್ಕಯ ಪೂಜಾರಿ, ಕಟಪಾಡಿ ವಿಶ್ವಾನಾಥ ಕ್ಷೇತ್ರದ ಅಧ್ಯಕ್ಷ ಬಿ. ಎನ್. ಶಂಕರ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್,  ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಕೂಳೂರು, l ಶ್ರೀ ಕ್ಷೇತ್ರ ಗೆಜ್ಜೆಗಿರಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಬಿಲ್ಲವ ಬ್ರಿಗೇಡ್ ಅಧ್ಯಕ್ಷ  ಸದಾನಂದ ಪೂಜಾರಿ, ಉದ್ಯಮಿ ಸುನಿತ್ ಕಿಶನ್, ಇನ್‌ ಸ್ಪೆಕ್ಟರ್ ಆಫ್ ಪೋಲಿಸ್ ಶಾಂತಾರಾಮ್ ಕುಂದರ್, ಡೆಪ್ಯೂಟಿ ಸುಪರಿಂಟೆಂಡೆಂಟ್ ಆಫ್ ಎಕ್ಸೈಸ್ ಗಾಯತ್ರಿ ಎಂ. ಶಿವಕುಮಾರ್, ವೆನ್‌ಲಾಕ್ ಯುರೋಲಾಜಿ ವಿಭಾಗದ ಮುಖ್ಯಸ್ಥ ಡಾ. ಸದಾನಂದ ಪೂಜಾರಿ ಅಥಿತಿಗಳಾಗಿ ಭಾಗವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸಿ ಅಭಿನಂದಿಸಲಾಯಿತು.

ಕ್ರೀಡೋತ್ಸವದಲ್ಲೂ ಸಮಾಜಮುಖಿ ಚಿಂತನೆ : ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ‌ ಶಿಬಿರ ಆಯೋಜಿಸಲಾಗಿತ್ತು. ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷೆ ವಿದ್ಯಾ ರಾಕೇಶ್ ದೀಪ ಬೆಳಗುವುದರ ಮೂಲಕ ಶಿಬಿರ ಉದ್ಘಾಟಿಸಿದರು. ಶಿಬಿರದಲ್ಲಿ ಒಟ್ಟು 424 ಶಿಬಿರಾರ್ಥಿಗಳು ಆಧಾರ್ ತಿದ್ದುಪಡಿ ನೊಂದಣಿ ಹಾಗೂ ಅಂಚೆ ಇಲಾಖೆಯ ವಿಮಾ ಸೌಲಭ್ಯಗಳ ಪ್ರಯೋಜನ ಪಡೆದರು.

ಶುಚಿರುಚಿಯಾದ ಉಪಹಾರ ಊಟೋಪಚಾರ: ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷ ಭುವನೇಶ್ ಪಚ್ಚಿನಡ್ಕ ನೇತ್ರತ್ವದಲ್ಲಿ ನಿರಂತರವಾಗಿ ನಡೆದ ಶುಚಿರುಚಿಯಾದ ಉಪಹಾರ, ಊಟೋಪಚಾರ ಕ್ರೀಡಾಪಟು ಹಾಗೂ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಕೋಟಿ ಚೆನ್ನಯ ಕ್ರೀಡೋತ್ಸವದ ಸಮಗ್ರ ಪ್ರಶಸ್ತಿ ಪಟ್ಟ ಮುಡಿಗೇರಿಸಿಕೊಂಡ ಕುತ್ತಿಲ ಬಿಲ್ಲವ ಸಂಘ : ಸರ್ವಾಂಗೀಣ ಆಟ ಪ್ರದರ್ಶಿಸಿದ ಕುತ್ತಿಲ ಬಿಲ್ಲವ ಸಂಘವು ಕ್ರೀಡೋತ್ಸವದ ಸಮಗ್ರ ಪ್ರಶಸ್ತಿಗೆ ಪಾತ್ರವಾಯಿತು

ಫಲಿತಾಂಶ

ಪಥಸಂಚಲನ :   ಪ್ರಥಮ – ಸಜೀಪಮೂಡ,  ದ್ವಿತೀಯ – ಪುದು

ಕಬ್ಬಡಿ : ಪ್ರಥಮ – ಶಂಬೂರು ನರಿಕೊಂಬು, ದ್ವಿತೀಯ – ಕಲ್ಲಡ್ಕ

ವಾಲಿಬಾಲ್ : ಪ್ರಥಮ – ಮಾಣಿ, ದ್ವಿತೀಯ – ಬಿ. ಮೂಡ, ಬಿ. ಕಸ್ಬಾ ಪಾಣೆಮಂಗಳೂರು ವಲಯ

ಪುರುಷರ ಹಗ್ಗಜಗ್ಗಾಟ  : ಪ್ರಥಮ – ಸಜಿಪ ಮೂಡ, ದ್ವಿತೀಯ – ಮಣಿನಾಲ್ಕೂರು

ಮಹಿಳೆಯರ ಹಗ್ಗಜಗ್ಗಾಟ : ಪ್ರಥಮ – ನರಿಕೊಂಬು ಶಂಬೂರು, ದ್ವಿತೀಯ – ಸಜಿಪ ಮೂಡ

ತ್ರೋಬಾಲ್  : ಪ್ರಥಮ – ಬಡಗಬೆಳ್ಳೂರು, ದ್ವಿತೀಯ – ಸರಪಾಡಿ

ತೀರ್ಪುಗಾರರ ತಂಡ ಕಾರ್ಯ ಅನುಕರಣೀಯ : ಶ್ರೀನಿವಾಸ್ ಮೆಲ್ಕಾರ್

ಐತಪ್ಪ ಪೂಜಾರಿ ನೇತ್ರತ್ವದ ತಾಲೂಕಿನ 32 ಮಂದಿ ದೈಹಿಕ ಶಿಕ್ಷಣ ಶಿಕ್ಷಕರ ತಂಡದ ಶ್ರಮ ಇತರರಿಗೆ ಅನುಕರಣೀಯ ಮತ್ತು ಕ್ರೀಡೋತ್ಸವನ್ನು  ಶಿಸ್ತಿನಿಂದ ಸಂಘಟಿಸಲು ಸಾಧ್ಯವಾಯಿತು ಎಂದು ಕೋಟಿ ಚೆನ್ನಯ ಕ್ರೀಡೋತ್ಸವ ಸಮಿತಿಯ ಪ್ರದಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್ ತಿಳಿಸಿದರು. ತಾಲೂಕು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ತುಂಬೆ, ಆಂತರಿಕ ಲೆಕ್ಕ ಪರಿಶೋಧಕ ಹೇಮಂತ್ ಕುಮಾರ್ ಮೂರ್ಜೆ, ಕೋಟಿ ಚೆನ್ನಯ ಕ್ರೀಡೋತ್ಸವ ಸಮಿತಿಯ ಕೋಶಾಧಿಕಾರಿ ಗಣೇಶ್ ಪೂಂಜರೆಕೋಡಿ, ಜತೆ ಕಾರ್ಯದರ್ಶಿ ಹರೀಶ್ ಕೋಟ್ಯಾನ್ ಕುದನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಟಿ ಚೆನ್ನಯ ಕ್ರೀಡೋತ್ಸವ ಸಮಿತಿಯ ಸಂಚಾಲಕ ಬೇಬಿ ಕುಂದರ್ ಸ್ವಾಗತಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

You may also like

News

‘ಪಿದಾಯಿ’ ತುಳು ಚಿತ್ರ ಮೇ 9ಕ್ಕೆ ಬೆಳ್ಳಿತೆರೆಗೆ

ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ರವರು ನಿರ್ಮಾಣ ಮಾಡಿದ, ರಮೇಶ್ ಶೆಟ್ಟಿಗಾರ್ ಬರೆದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ
News

ಪರಮಪೂಜ್ಯ ಪೋಪ್ ಫ್ರಾನ್ಸಿಸ್‌ರವರಿಗೆ MCC ಬ್ಯಾಂಕ್ ವತಿಯಿಂದ ಗೌರವ ನಮನ

ಮಂಗಳೂರಿನ ಹಂಪನಕಟ್ಟೆಯಲ್ಲಿರುವ MCC ಬ್ಯಾಂಕ್ ಇದರ ಆಡಳಿತ ಕಛೇರಿಯಲ್ಲಿ ಕಥೊಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ ರವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಎಪ್ರಿಲ್ 24ರಂದು

You cannot copy content of this page