June 8, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನಿವೃತ್ತ ನ್ಯಾಯಮೂರ್ತಿಯನ್ನೇ ವಂಚಿಸಿದ ಸೈಬರ್ ಖದೀಮರು

90 ಲಕ್ಷ ರೂಪಾಯಿ ಟೊಪ್ಪಿ ಹಾಕಿಸಿಕೊಂಡ ನಿವೃತ್ತ ಜಡ್ಜ್‌!

ಸ್ವತಃ ನಿವೃತ್ತ ನ್ಯಾಯಮೂರ್ತಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದ ಸುದ್ದಿ ಇದೀಗ ಬಯಲಾಗಿದೆ. ಸೈಬರ್ ವಂಚನೆಯಿಂದ ಮೋಸಕ್ಕೆ ಒಳಗಾದವರು ಬೇರಾರೂ ಅಲ್ಲ, ಕೇರಳದ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಂ. ಸಸಿಧರನ್ ನಂಬಿಯಾರ್. ವಂಚಕರ ಮಾತಿಗೆ ಮರುಳಾಗಿ ಅವರು ಬರೋಬ್ಬರಿ 90 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಹಿಲ್ ಪ್ಯಾಲೇಸ್ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಥಮ ಮಾಹಿತಿ ವರದಿ ಪ್ರಕಾರ, ನ್ಯಾಯಮೂರ್ತಿ ನಂಬಿಯಾರ್ ಅವರು ಆದಿತ್ಯ ಬಿರ್ಲಾ ಇಕ್ವಿಟಿ ಲರ್ನಿಂಗ್ ಗ್ರೂಪ್ ಎಂಬ ವಾಟ್ಸಾಪ್ ಗುಂಪಿನ ಮೂಲಕ ಈ ವಂಚನೆಗೊಳಗಾಗಿದ್ದಾರೆ.

ಆಯನಾ ಜೋಸೆಫ್ ಮತ್ತು ವರ್ಷಾ ಸಿಂಗ್ ಎಂಬವರ ನೇತೃತ್ವದ ಮಹಿಳಾ ಗುಂಪು ಸಸಿಧರನ್ ಅವರನ್ನು ವಂಚನಾ ಜಾಲಕ್ಕೆ ಬೀಳಿಸಿತ್ತು. ವಂಚಕರ ಮಾತಿನ ಪ್ರಕಾರ, ಆದಿತ್ಯ ಬಿರ್ಲಾ ಇಕ್ವಿಟಿ ಲರ್ನಿಂಗ್ ಗ್ರೂಪ್ ಎಂಬ ವಾಟ್ಸಾಪ್ ಗುಂಪಿನ ಮೂಲಕ ನಕಲಿ ಶೇರು ವ್ಯಾಪಾರ ಅಪ್ಲಿಕೇಶನ್ ನಲ್ಲಿ ಹೂಡಿಕೆ ಮಾಡಲು ಸಸಿಧರನ್ ಹಣ ವರ್ಗಾಯಿಸಿದ್ದಾರೆ. ವಾಟ್ಸಪ್ ಗ್ರೂಪಿಗೆ ಸೇರಿದವರಿಗೆ ಆನ್ಲೈನ್ ಷೇರು ಮಾರುಕಟ್ಟೆಯ ಮೂಲಕ ಶೇಕಡ 850 ಆದಾಯ ನೀಡುವುದಾಗಿ ವಂಚಕರು ಭರವಸೆ ನೀಡಿದ್ದರು.

ಆದರೆ, ಅದೊಂದು ವಂಚನೆ ಎಂದು ತಿಳಿಯದೆ 2024ರ ಡಿಸೆಂಬರ್ 4ರಿಂದ ಡಿಸೆಂಬರ್ 30ರ ನಡುವೆ ಸುಮಾರು 90 ಲಕ್ಷ ರೂಪಾಯಿ ಹಣವನ್ನು ಅವರು ವರ್ಗಾವಣೆ ಮಾಡಿದ್ದಾರೆ. ಈ ಮೂಲಕ ತಾವು ವಂಚನೆಗೆ ಒಳಗಾಗಿದ್ದೇನೆ ಎಂದು ನಂಬಿಯಾರ್ ತಮ್ಮ ದೂರಿನಲ್ಲಿ ಹೇಳಿದ್ದಾರೆ. ವಂಚನೆಯ ದೂರು ದಾಖಲಾಗುತ್ತಿದ್ದಂತೆ ವಂಚಕರ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿವೆ. ಅವರು ದಾಖಲಿಸಿರುವ ದೂರಿನಲ್ಲಿ ಜೋಸೆಫ್ ಮತ್ತು ವರ್ಷ ಸಿಂಗ್ ಎಂಬ ಹೆಸರಿನ ಇಬ್ಬರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 316 (2) ಕ್ರಿಮಿನಲ್ ನಂಬಿಕೆ ದ್ರೋಹ ಮತ್ತು 318(4) (ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಡಿ (ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಿಕೊಂಡು ಸೋಗು ಹಾಕಿ ವಂಚನೆ) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಸಸಿಧರನ್ ಅವರು ವರ್ಗಾಯಿಸಿರುವ ಬ್ಯಾಂಕ್ ಖಾತೆಗಳು ಉತ್ತರ ಭಾರತಕ್ಕೆ ಸೇರಿದ್ದಾಗಿದೆ. ಈ ಖಾತೆಗಳ ಮೂಲವನ್ನು ಈಗಾಗಲೇ ಪತ್ತೆ ಹಚ್ಚಲಾಗಿದ್ದು, ಹಣವನ್ನು ಮರಳಿಸುವ ಭರವಸೆಯನ್ನು ತನಿಖಾಧಿಕಾರಿ ಯೇಸುದಾಸ್ ನೀಡಿದ್ದಾರೆ.

You may also like

News

ಕಂಬಳ ಕೋಣಗಳ ಮಾಲೀಕನಿಗೆ ಹಲ್ಲೆ, ಸುಲಿಗೆ ಯತ್ನ ಪ್ರಕರಣ – ಮೂವರು KCOCA ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು

ಪುತ್ತೂರಿನ ಕಜೆ ಲಾ ಚೇಂಬರ್ಸ್ ಇದರ ಪ್ರಖ್ಯಾತ ವಕೀಲರಾದ ಮಹೇಶ್ ಕಜೆ ಅವರು ಮಂಡಿಸಿದ ವಾದ ಕಂಬಳದಲ್ಲಿ ಗೆದ್ದ ಕೋಣಗಳ ಮಾಲೀಕನಿಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ
News

ಮಂಗಳೂರಿನ ದೇರಳಕಟ್ಟೆಯ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ವೀಣಾ ಡೇಸಾ ಇನ್ನಿಲ್ಲ

ಮಂಗಳೂರಿನ ದೇರಳಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ರಾಣಿಪುರದ 49 ವರ್ಷ ಪ್ರಾಯದ ವೀಣಾ ಡೇಸಾ ಅವರು ಜೂನ್ 7ರಂದು ಭಾನುವಾರ

You cannot copy content of this page