ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾಗಿ ಅಬ್ಬಾಸ್ ನೇರಳಕಟ್ಟೆ ಆಯ್ಕೆ

ಬಂಟ್ವಾಳದ ಮಾಣಿ ಸಮೀಪದ ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಅಬ್ಬಾಸ್ ನೇರಳಕಟ್ಟೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಸೀದಿಯ ಗೌರವಾಧ್ಯಕ್ಷ ಸಯ್ಯಿದ್ ಅಲೀ ತಂಙಳ್ ಕುಂಬೋಳ್ ಅವರ ನೇತೃತ್ವದಲ್ಲಿ ಮಸೀದಿಯಲ್ಲಿ ನಡೆದ ಮಹಾ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಸಿದ್ದೀಕ್ ಪರ್ಲೊಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎಂ. ರಫೀಕ್ ಹಾಜಿ ನೇರಳಕಟ್ಟೆ, ಕಾರ್ಯದರ್ಶಿಯಾಗಿ ಸಾಹುಲ್ ಹಮೀದ್ (ಅಮ್ಮಿ) ಪರ್ಲೊಟ್ಟು, ಕೋಶಾಧಿಕಾರಿಯಾಗಿ ಪಿ.ಕೆ. ಅಬ್ಬಾಸ್ ಪರ್ಲೊಟ್ಟು ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲತೀಫ್ ನೇರಳಕಟ್ಟೆ, ಹಬೀಬ್ ಕೊಡಾಜೆ, ಫಾರೂಕ್ ಗೋಳಿಕಟ್ಟೆ ಹಾಗೂ ಇಸ್ಮಾಯಿಲ್ ನೇರಳಕಟ್ಟೆ ಅವರನ್ನು ಸಭೆಯಲ್ಲಿ ಆರಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಇಬ್ರಾಹಿಂ ರಾಜ್ ಕಮಲ್ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಹಕರಿಸಿದರು. ಇಲ್ಯಾಸ್ ನೇರಳಕಟ್ಟೆ ಸ್ವಾಗತಿಸಿದರು. ನವಾಝ್ ಭಗವಂತ ಕೋಡಿ ವರದಿ ವಾಚಿಸಿ, ಲೆಕ್ಕ ಪತ್ರ ಮಂಡಿಸಿದರು. ಎಸ್.ಎಂ. ರಫೀಕ್ ಹಾಜಿ ನೇರಳಕಟ್ಟೆ ವಂದಿಸಿದರು.