ಮಗ್ಗಿ ಹೇಳುವಾಗ ತಪ್ಪಿತ್ತೆಂದು ವಿದ್ಯಾರ್ಥಿಗೆ ಹೊಡೆದ ಶಿಕ್ಷಕ – ಪಾಪೆಮಜಲು ಸರಕಾರಿ ಶಾಲೆಯಲ್ಲಿ ಘಟನೆ

ಪುತ್ತೂರು : 8ನೇ ತರಗತಿ ವಿದ್ಯಾರ್ಥಿ ಮಗ್ಗಿ ಹೇಳುವಾಗ ತಪ್ಪಿತ್ತೆಂದು ವಿದ್ಯಾರ್ಥಿಗೆ ಶಿಕ್ಷಕರೋರ್ವರು ಹೊಡೆದು ವಿದ್ಯಾರ್ಥಿಯ ಎಡ ಕೈ ಮೂಳೆಗೆ ಗಾಯವಾದ ಘಟನೆ ಪಾಪೆಮಜಲು ಸರಕಾರಿ ಶಾಲೆಯಲ್ಲಿ ನಡೆದಿದೆ.
ಶಾಲೆಯಲ್ಲಿ ಗಣಿತ ಶಿಕ್ಷಕರ ಮುಂದೆ ವಿದ್ಯಾರ್ಥಿ ಮಗ್ಗಿ ಹೇಳುವಾಗ ತಪ್ಪಿದ್ದಕ್ಕೆ ಅವರು ಬೆತ್ತದಿಂದ ಹೊಡೆದಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ವಿದ್ಯಾರ್ಥಿ ಮನೆಯಲ್ಲಿ ತಾಯಿ ಮತ್ತು ಅಜ್ಜ ರವರಲ್ಲಿ ಈ ವಿಚಾರ ತಿಳಿಸಿ ಕೈ ನೋವು ಆಗುತ್ತಿರುವುದಾಗಿ ಹೇಳಿದ್ದರು. ಬಳಿಕ ಅಜ್ಜರವರು ಮೊಮ್ಮಗನನ್ನು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಕೈ ಮೂಳೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಕೈ ಊನಗೊಂಡಿದೆ ಎಂದು ತಿಳಿದುಬಂದಿದೆ.