ಪತ್ನಿಯನ್ನು ಕೊಂದದ್ದಲ್ಲದೇ ಕುಕ್ಕರ್ ನಲ್ಲಿ ಬೇಯಿಸಿ ಕೆರೆಗೆ ಎಸೆದ ಪತಿ

ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಶವವನ್ನು ತುಂಡು ತುಂಡು ಮಾಡಿ ಕುಕ್ಕರ್ ನಲ್ಲಿ ಬೇಯಿಸಿ ಕೆರೆಗೆ ಎಸೆದ ವಿಚಿತ್ರ ಘಟೆನೆಯು ರಂಗಾರೆಡ್ಡಿ ಜಿಲ್ಲೆಯ ಮೀರ್ ಪೇಟ್ ನಲ್ಲಿನ ನ್ಯೂ ವೆಂಕಟರಮಣ ಕಾಲೋನಿಯಲ್ಲಿ ನಡೆದಿದೆ. ಪತಿ ಗುರುಮೂರ್ತಿ ತಾಯಿ ಸುಬ್ಬಮ್ಮ ರವರೊಂದಿಗೆ ಸೇರಿ 2025 ಜನವರಿ 16ರಂದು ತನ್ನ ಪತ್ನಿ ವೆಂಕಟಮಾಧವಿ ಕಾಣೆಯಾಗಿದ್ದಾರೆ ಎಂದು ಮೀರ್ ಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ, ಕಳೆದ ಕೆಲ ದಿನಗಳಿಂದ ಗಂಡ ಹೆಂಡತಿಯ ನಡುವೆ ಜಗಳ ನಡೆಯುತ್ತಿದ್ದ ವಿಚಾರ ತಿಳಿದು ಪೊಲೀಸರು ಗುರುಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಬೆಳಕಿಗೆ ಬಂದಿದೆ.
ಪತಿ ಗುರುಮೂರ್ತಿ ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಮೃತ ದೇಹವನ್ನು ತುಂಡು ತುಂಡು ಮಾಡಿ ಕುಕ್ಕರ್ ನಲ್ಲಿ ಬೇಯಿಸಿ ನಂತರ ಜಿಲ್ಲೆಲಗುಡ ಕೆರೆಯಲ್ಲಿ ಎಸೆದಿದ್ದಾನೆ ಎಂದು ತಿಳಿಸಿದನು. ಸದ್ಯ ಪೊಲೀಸರು ಗುರುಮೂರ್ತಿ ಹೇಳಿದ್ದಕ್ಕೆ ಸಾಕ್ಷ್ಯ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮೃತದೇಹದ ಕುರುಹುಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಗುರುಮೂರ್ತಿ ಪ್ರಸ್ತುತ ಕಾಂಚನ್ ಬಾಗ್ ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದನು. 13 ವರ್ಷಗಳ ಹಿಂದೆ ಅವನು ವೆಂಕಟಮಾಧವಿ ರವರನ್ನು ವಿವಾಹವಾಗಿದ್ದನು. ಇವನಿಗೆ ಇಬ್ಬರು ಮಕ್ಕಳಿದ್ದಾರೆ. ವೆಂಕಟಮಾಧವಿ ನಾಪತ್ತೆ ಪ್ರಕರಣದ ತನಿಖೆ ಮುಂದುವರಿದಿದ್ದು, ಶೀಘ್ರವೇ ಸಂಪೂರ್ಣ ಮಾಹಿತಿ ಹೊರಬೀಳಲಿದೆ ಎಂದು ಮೀರ್ ಪೇಟ್ ಪೊಲೀಸರು ತಿಳಿಸಿದ್ದಾರೆ.