ಮಗಳ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದ ಉದ್ಯಮಿ ಲl ಗಣೇಶ್ ಪೂಜಾರಿ

ಬಂಟ್ವಾಳ : ಹುಟ್ಟು ಹಬ್ಬದ ಆಚರಣೆಯಲ್ಲೂ ಪಾಶ್ಚ್ಯಾತ್ಯ ಸಂಸ್ಕೃತಿಯು ಆವರಿಸಿಕೊಂಡಿರುವ ಕಾಲಘಟ್ಟ ವಿದು. ಆಪ್ತೇಷ್ಟರನ್ನು ಕರೆದು ವೈಭವೋಪೇತವಾಗಿ ಹುಟ್ಟು ಹಬ್ಬವನ್ನು ಆಚರಿಸುವುದು ಎಲ್ಲಾ ಕಡೆಯೂ ಪ್ರಚಲಿತದಲ್ಲಿದೆ. ಆದರೆ “ಸೇವೆಯ ಕನಸುಗಳಿಗೆ ಭಾವಗಳು ನೂರಾರು” ಎಂಬ ಮಾತಿನಂತೆ ತನ್ನ ದುಡಿಮೆಯ ಸ್ವಲ್ಪ ಭಾಗವನ್ನು ಸಮಾಜ ಸೇವೆಗಾಗಿ ಮೀಸಲಿಸಿಕೊಳ್ಳಬೇಕೆಂಬ ಧ್ಯೇಯವನ್ನು ಹೊಂದಿರುವ ಬಂಟ್ವಾಳ ತಾಲೂಕಿನ ಶ್ರೀ ಸಾಯಿ ಇಂಜಿನಿಯರಿಂಗ್ ವರ್ಕ್ಸ್ ಕೊಡಾಜೆ ಇದರ ಮಾಲಕರಾದ ಲl ಗಣೇಶ್ ಪೂಜಾರಿ ಹಾಗೂ ಮನೆಯವರು ತಮ್ಮ ಮಗಳಾದ ಶಾರ್ವಿಯ ಇವಳ 5ನೇ ವರ್ಷದ ಹುಟ್ಟು ಹಬ್ಬವನ್ನು ಸರಕಾರಿ ಶಾಲೆಗಳಿಗೆ ಉಪಯುಕ್ತ ಸಾಮಗ್ರಿಗಳನ್ನು ನೀಡುವುದರೊಂದಿಗೆ ಅರ್ಥಪೂರ್ಣವಾಗಿ ಆಚರಿಸಿಕೊಂಡು ಎಲ್ಲರಿಗೂ ಮಾದರಿಯೆನಿಸಿಕೊಂಡಿದ್ದಾರೆ.
ಹುಟ್ಟು ಹಬ್ಬದ ಪ್ರಯುಕ್ತ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ, ಮಿತ್ತಪೆರಾಜೆ ಅಂಗನವಾಡಿ ಪುಟಾಣಿಗಳಿಗೆ ಊಟದ ತಟ್ಟೆ ಹಾಗೂ ಮಲ್ಲಡ್ಕ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸ್ಟೀಲ್ ಲೋಟಗಳನ್ನು ಕೊಡುಗೆಯಾಗಿ ನೀಡುವುದರೊಂದಿಗೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಏಮಾಜೆ ಕಿರಿಯ ಪ್ರಾಥಮಿಕ ಶಾಲೆಗೆ ತನ್ನ ಕುಟುಂಬ ಸಮೇತ ಭೇಟಿ ನೀಡಿ ಶಾಲೆಯ ಎಲ್ಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ, ವಿತರಿಸಿ, ಜೊತೆಗೆ ಮಕ್ಕಳಿಗೆ ಇಷ್ಟವಾದ ಕೋನ್ ಐಸ್ ಕ್ರೀಮ್ ನೀಡಿ ಸರಳ ಕಾರ್ಯಕ್ರಮದೊಂದಿಗೆ ಹುಟ್ಟುಹಬ್ಬ ಆಚರಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಡಾ. ತ್ರಿವೇಣಿ ರಮೇಶ್ ಸ್ವಾಗತಿಸಿ, ಸಹ ಶಿಕ್ಷಕ ಉದಯಚಂದ್ರರವರು ವಂದಿಸಿ ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿ. ಶಿಕ್ಷಕಿ ದೀಕ್ಷ ಸಹಕರಿಸಿದರು.