ವಲೆನ್ಸಿಯಾದ ಮಹಿಳಾ ಮತ್ತು ಮಕ್ಕಳ ಅಭಿವೃಧಿ ಇಲಾಖೆಯಲ್ಲಿ ವಿಕಲಚೇತನರ ಬಗ್ಗೆ ಅರಿವು ಮೂಡಿಸಲು ಅಂಗನವಾಡಿ ಶಿಕ್ಷಕಿಯರಿಗೆ ಕಾರ್ಯಗಾರ

ಮಂಗಳೂರು : ವಲೆನ್ಸಿಯಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ವೆರೋನಿಕಾ ವಿಹಾರ್ ಘಟಕ, ಕಾರ್ಮೆಲ್ ಸೇವಾ ಟ್ರಸ್ಟ್ ಮಂಗಳೂರು ವತಿಯಿಂದ ಸುರತ್ಕಲ್, ಕಾವೂರು, ಕುಲ್ಶೆಕರ ಹೀಗೆ ಮೂರು ವಲಯದಿಂದ 70 ಮಂದಿ ಅಂಗನವಾಡಿ ಶಿಕ್ಷಕಿಯರಿಗೆ ವಿಕಲಚೇತನರ ಬಗ್ಗೆ ಅರಿವು ಮೂಡಿಸುವ ಕಾರ್ಯಗಾರವು ನಡೆಯಿತು.
ಸೈಂಟ್ ಆಗ್ನೆಸ್ ಇನ್ಸಿಟ್ಯೂಟ್ ಫೊರ್ ಸ್ಪೆಷಲ್ ಎಡ್ಯುಕೇಶನ್ ಸಂಸ್ಥೆಯ ಶಿಕ್ಷಕಿಯರಾದ ಶಾಂತಿ, ಪಾಯಲ್ ಹಾಗೂ ಫಾತಿಮಾ ಹಮಿಶಾ ಈ ಕಾರ್ಯಗಾರವನ್ನು ನಡೆಸಿಕೊಟ್ಟರು. ಕಾರ್ಮೆಲ್ ಸೇವಾ ಟ್ರಸ್ಟ್ ಇದರ ಪ್ರೊಜೆಕ್ಟ್ ಮ್ಯಾನೇಜರ್ ಹಾಗೂ ಸಂಯೋಜಕಿ ಸಿಸ್ಟರ್ ಫ್ರೀಡಾರವರು ಎಲ್ಲರನ್ನೂ ಸ್ವಾಗತಿಸಿ, ಆಗಮಿಸಿದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರಾದ ಫಾತಿಮಾರವರು, ಅಂಗವಿಕಲತೆ ಎಂದರೇನು? ಅಂಗವಿಕಲತೆಯ ವಿಧಗಳ್ಯಾವುವು? ಇದರ ಕಾರಣಗಳೇನು? ಎನ್ನುವುದರ ಕುರಿತು ಅವರ ವಿಕಲಚೇತನ ಮಗುವಿನ ಲಾಲನೆ ಪೋಷಣೆ ಮಾಡಿ ಅವರ ಕಾಲಿನ ಮೇಲೆ ನಿಲ್ಲಲು ಸಹಕರಿಸಿದ ಬಗ್ಗೆ ಅವರ ಅನಿಸಿಕೆಗಳು ಮತ್ತು ಹೇಗೆ ಇದನ್ನು ತಡೆಗಟ್ಟಬಹುದು ಎಂಬುವುದರ ಬಗ್ಗೆ ಜಾಗೃತಿ ಮೂಡಿಸಿದರು. ಸಂಸ್ಥೆಯ ಸದಸ್ಯೆ ಪ್ರೀಯಾ ಎಲ್ಲರನ್ನೂ ವಂದಿಸಿದರು.