ಮಂಗಳೂರಿನ ಎಸಿ ಹರ್ಷವರ್ಧನ್ ಅವರಿಗೆ ಅತ್ಯುತ್ತಮ ಎಲೆಕ್ಟ್ರೋಲ್ ರಿಟರ್ನಿಂಗ್ ಆಫಿಸರ್ ಪ್ರಶಸ್ತಿ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರಾದ ಹರ್ಷವರ್ಧನ್ ಅವರಿಗೆ ರಾಷ್ಟ್ರೀಯ ಮತದಾರರ ದಿನದಂದು ಅತ್ಯುತ್ತಮ ಎಲೆಕ್ಟ್ರೋಲ್ ರಿಟರ್ನಿಂಗ್ ಆಫೀಸರ್ ಪ್ರಶಸ್ತಿ ಲಭಿಸಿದೆ.
ಇಂದು ಜನವರಿ 25ರಂದು ಶನಿವಾರ ಬೆಂಗಳೂರಿನಲ್ಲಿ ಘನತವೆತ್ತ ರಾಜ್ಯಪಾಲರಾದ ತಾವರ್‌ಚಂದ್ ಗೆಹ್ಲೋಟ್ ರವರಿಂದ ಈ ಪ್ರಶಸ್ತಿಯನ್ನು ಎಸಿ ಹರ್ಷವರ್ಧನ್ ಸ್ವೀಕರಿಸಿದರು.