KSRTC ಪುತ್ತೂರು ವಿಭಾಗದಲ್ಲಿ ‘ನೌಕರರ ಕೂಟ ಸಂಘಟನೆ’ ಸ್ಥಾಪನೆ – ಸ್ಥಾಪಕ ಅಧ್ಯಕ್ಷರಾಗಿ ಜೀವನ್ ಸಂತೋಷ್ ಮಾರ್ಟಿಸ್ ಆಯ್ಕೆ

KSRTC ಪುತ್ತೂರು ವಿಭಾಗದಲ್ಲಿ ‘ನೌಕರರ ಕೂಟ ಸಂಘಟನೆ’ ಜನವರಿ 25ರಂದು ಸ್ಥಾಪನೆ ಆಯಿತು. ಪುತ್ತೂರಿನ ಲಕ್ಷ್ಮಿ ಹೋಟೆಲ್ ನ ಸಭಾಂಗಣದಲ್ಲಿ ನಡೆದ ಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. KSRTC ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಜೀವನ್ ಸಂತೋಷ್ ಮಾರ್ಟಿಸ್ ಇವರನ್ನು ಪುತ್ತೂರು ವಿಭಾಗದ ನೌಕರರ ಕೂಟದ ಸ್ಥಾಪಕ ಅಧ್ಯಕ್ಷರಾಗಿ ಸರ್ವಾನುತದಿಂದ ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಗಳಾಗಿ ಯೊಗೇಂದ್ರ ಬಡಿಗೇರ ಪುತ್ತೂರು, ಉಪಾಧ್ಯಕ್ಷರುಗಳಾಗಿ ಮಧು ಗೌಡ ಮಡಿಕೇರಿ ಮತ್ತು ರಿಜ್ವಾನ್ ಪಾಷ ಧರ್ಮಸ್ಥಳ, ಸಂಘಟನಾ ಕಾರ್ಯದರ್ಶಿಗಳಾಗಿ ಯೊಗೇಶ್ ಗೌಡ, ಜಂಟಿ ಕಾರ್ಯದರ್ಶಿಗಳಾಗಿ ಶ್ರೀಧರ್ ಚಾಲಕರು ಧರ್ಮಸ್ಥಳ ಮತ್ತು ರಾಚಪ್ಪ ಮೋದಿ ಬಿ.ಸಿ. ರೋಡ್ ಇವರೆಲ್ಲರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪುತ್ತೂರು ವಿಭಾಗಕ್ಕೆ ಒಳಪಟ್ಟ ಮಡಿಕೇರಿ, ಧರ್ಮಸ್ಥಳ, ಪುತ್ತೂರು, ಸುಳ್ಯ, ಬಿ.ಸಿ.ರೋಡ್ ಘಟಕವಾರು ಪದಾಧಿಕಾರಿಗಳನ್ನು ಕೂಡ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾದ ಜೀವನ್ ಮಾರ್ಟಿಸ್ ರವರು ಪ್ರಾಸ್ತಾವಿಕ ಭಾಷಣ ಮಾಡಿ, ಸತ್ಯ, ಧರ್ಮ, ನಿಷ್ಠೆ ಮತ್ತು ಪ್ರಾಮಾಣಿಕತೆಯ ಧ್ಯೇಯದೊಂದಿಗೆ “ಕರ್ತವ್ಯವೇ ದೇವರು” ಎಂಬ ಘೋಷಣೆಯಿಂದ ಇಂದು ಪುತ್ತೂರಿನಲ್ಲಿ ಸಂಘಟನೆ ಪ್ರಾರಂಭವಾಗಿದೆ. ಪುತ್ತೂರು ವಿಭಾಗದಲ್ಲಿ ಅಧಿಕಾರಿಗಳು ಮತ್ತು ಎಲ್ಲಾ ವರ್ಗದ ಸಿಬ್ಬಂದಿಗಳು ಪರಸ್ಪರ ಸಮನ್ವಯದಿಂದ ಇರಬೇಕು. ಯಾವುದೇ ರೀತಿಯ ಭೃಷ್ಟಚಾರ ಮತ್ತು ಅವೈಜ್ಞಾನಿಕ ವ್ಯವಸ್ಥೆಗಳಿಗೆ ಆಸ್ಪದ ಕೊಡದೆ ಒಬ್ಬರಿಗೊಬ್ಬರು ಗೌರವದಿಂದ ಕರ್ತವ್ಯ ನಿರ್ವಹಿಸಿದರೆ ಪುತ್ತೂರು ವಿಭಾಗ, ಕೇಂದ್ರ ಮಟ್ಟದಲ್ಲಿ ಉನ್ನತ ಸ್ಥಾನಕ್ಕೆ ಹೋಗುವುದರಲ್ಲಿ ಸಂಶಯವೇ ಇಲ್ಲ ಎಂದು ಸದಸ್ಯರಿಗೆ ಧೈರ್ಯ ತುಂಬುವ ಸಂದೇಶವನ್ನು ನೀಡಿದರು.
ಸಭೆಗೆ ಪುತ್ತೂರು ವಿಭಾಗದ ಭದೃತಾ ಅಧೀಕ್ಷಕರಾದ ಮಧುಸೂದನ್ ರವರು ಹಾಜಾರಾಗಿ ಪದಾಧಿಕಾರಿಗಳ ಆಯ್ಕೆಯ ವೀಕ್ಷಣೆ ಮಾಡಿದರು.
ಹಾಜರಿದ್ದ ಎಲ್ಲಾ ಸದಸ್ಯರು ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ತಮ್ಮ ಮುಂದಿನ ಸೇವಾ ಕಾರ್ಯಕ್ಕೆ ಶುಭಾಶಯಗಳನ್ನು ಕೋರಿದರು. ಸಭೆಯ ಬಳಿಕ ನೆರೆದ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.