ಪತ್ನಿಯ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತಿ ಪೀಟರ್

ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ಪತ್ನಿಯ ಕಾಟಕ್ಕೆ ಬೇಸತ್ತು ಪತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.
ಪೀಟರ್ ಎಂಬವರು ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸಾವಿಗೂ ಮುನ್ನ ಪೀಟರ್ ಡೆತ್ ನೋಟ್ ಬರೆದಿದ್ದು, ಡ್ಯಾಡಿ ಆಯಮ್ ಸಾರಿ, ಪಿಂಕಿ ಇಸ್ ಕಿಲ್ಲಿಂಗ್ ಮೀ ಸೀ ವಾಂಟ್ ಮೈ ಡೆತ್ ಎಂದು ಬರೆದುಕೊಂಡಿದ್ದಾರೆ. ತನ್ನ ಶವಪೆಟ್ಟಿಗೆ ಮೇಲೆ ಪತ್ನಿ ಟಾರ್ಚರ್ ನಿಂದ ಸಾವು ಎಂದು ಬರೆಸುವಂತೆ ಡೆತ್ ನೋಟ್ ನಲ್ಲಿ ಬರೆಯಲಾಗಿದೆ. ಅವರ ಆಸೆ ಪ್ರಕಾರವೇ ಕುಟುಂಬಸ್ಥರು ಶವಪೆಟ್ಟಿಗೆಯಲ್ಲಿ ಬರೆಸಿದ್ದಾರೆ ಎಂದು ತಿಳಿದು ಬಂದಿದೆ.
ಪೀಟರ್ ಹಾಗೂ ಪತ್ನಿ ನಡುವೆ ವಿಚ್ಛೇದನದ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿತ್ತು. ಪತ್ನಿ 20 ಲಕ್ಷ ರೂಪಾಯಿ ಜೀವನಾಂಶಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.