ಶ್ರೀ ಮಹಾಭಾರತ ಸರಣಿಯ 62ನೇ ತಾಳಮದ್ದಳೆ

ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘ ಉಪಿನಂಗಡಿ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 62ನೇ ತಾಳಮದ್ದಳೆ ಕನಕಾಂಗಿ ಕಲ್ಯಾಣ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು. ಡಾ. ಹನೀಶ್ ಕಿರಣ್ ಪಿ.ಟಿ. ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.
ಭಾಗವತರಾಗಿ ಪದ್ಮನಾಭ ಕುಲಾಲ್, ಕಿಶೋರ್ ಶೆಟ್ಟಿ ಮೂಡಾಯಿರು, ಹರೀಶ್ ಆಚಾರ್ಯ ಬಾರ್ಯ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಬಾರ್ಯ ಅರ್ಥದಾರಿಗಳಾಗಿ ಪಾತಾಳ ಅಂಬಾ ಪ್ರಸಾದ್ (ಸುಭದ್ರೆ1) ಹರೀಶ ಆಚಾರ್ಯ ಬಾರ್ಯ (ಅಭಿಮನ್ಯು) ಪ್ರದೀಪ ಚಾರ (ಕೌರವ) ಗೀತಾ (ಬಲರಾಮ) ಪುಷ್ಪಾ ತಿಲಕ್ (ಶ್ರೀಕೃಷ್ಣ) ಶ್ರುತಿ ವಿಸ್ಮಿತ್ (ಘಟೋತ್ಕಚ) ದಿವಾಕರ ಆಚಾರ್ಯ ಗೇರುಕಟ್ಟೆ (ಸುಭದ್ರೆ 2) ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ನಿವೃತ ಶಿಕ್ಷಕ, ಪ್ರವಚನಕಾರ, ಯಕ್ಷಗಾನ ಅರ್ಥದಾರಿ ಬರೆ ಕೇಶವಭಟ್ಟ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.