ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರ್ ನಲ್ಲಿ ಒಂದು ಕೋಟಿ ರೂಪಾಯಿ ಪತ್ತೆ

ಕಾರವಾರ: ರಾಷ್ಟ್ರೀಯ ಹೆದ್ದಾರಿ 63ರಲ್ಲಿ ರಾಮನಗುಳಿ ಬಳಿ ನಿಲ್ಲಿಸಿದ್ದ ಕಾರ್ ನಲ್ಲಿ ಒಂದು ಕೋಟಿ ರೂಪಾಯಿ ಪತ್ತೆಯಾಗಿದೆ. ಕಾರ್ ನಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ. ಕಾರ್ ಗೆ ಹಾಕಿದ ನಂಬರ್ ಪ್ಲೇಟ್ ಫೇಕ್ ಎಂದು ಗೊತ್ತಾಗಿದೆ. ಕಾರ್ ಮಂಗಳೂರು ಮೂಲದವರದ್ದು ಎಂದು ಇದೀಗ ತನಿಖೆಯಿಂದ ಬೆಳಕಿಗೆ ಬಂದಿದೆ. ಅಂಕೋಲಾದಿಂದ ಬಂದ ಪೊಲೀಸರು ಕಾರ್ ವಶಕ್ಕೆ ಪಡೆದು ಅದರಲ್ಲಿನ ಒಂದು ಕೋಟಿ ವಶಪಡಿಸಿಕೊಂಡಿದ್ದಾರೆ.
ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಯಲ್ಲಾಪುರ ಅಂಕೋಲಾ ನಡುವಿನ ಹೆದ್ದಾರಿಯಲ್ಲಿ ರಾಮನಗುಳಿ ಗ್ರಾಮ ಇದೆ. ಇಲ್ಲಿ ಜನವರಿ 28ರಂದು ಮಂಗಳವಾರ ಸಂಜೆ ನಿರ್ಜನ ಪ್ರದೇಶದಲ್ಲಿ ಯಾರು ಕಾರು ನಿಲ್ಲಿಸಿ ಹೋದರು ಎಂಬುದು ಬೆಳಕಿಗೆ ಬರಬೇಕಿದೆ.