September 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಫೆಬ್ರವರಿ 21ಕ್ಕೆ “ಒಲವಿನ ಪಯಣ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಬಂಟ್ವಾಳ : “ಒಲವಿನ ಪಯಣ ಒಂದು ಹಳ್ಳಿಯ ಮಧ್ಯಮವರ್ಗದ ಕುಟುಂಬದ ಯುವಕನ ಬದುಕಿನ ಪಯಣದ ಕಥೆ. ಗೊತ್ತು ಗುರಿಯಿಲ್ಲದೆ ಪ್ರೀತಿ ಪ್ರೇಮ ಎಂದು ಓಡಾಡುತ್ತಿರುವ ಹುಡುಗನೊಬ್ಬ ತಾನು ಪ್ರೀತಿಸಿದ ಶ್ರೀಮಂತ ಹುಡುಗಿಯನ್ನು ಬಾಳಸಂಗಾತಿಯಾಗಿ ಪಡೆಯಲು ಅವಳ ತಂದೆಗೆ ಸವಾಲು ಹಾಕಿ ಕೊನೆಗೆ ಆ ಸವಾಲನ್ನು ಗೆದ್ದು ಮದುವೆಯಾಗಿ ಸುಖವಾಗಿ ಜೀವನ ಸಾಗಿಸಬೇಕೆನ್ನುವಾಗ ಅವನ ಜೀವನದಲ್ಲಿ ವಿಧಿಯಾಟದಿಂದ ನಡೆಯುವ ತಿರುವುಗಳನ್ನು ಹೊಂದಿದೆ“ ಎಂದು ಚಿತ್ರದ ನಿರ್ದೇಶಕ ಕಿಶನ್ ಬಲ್ನಾಡ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

”ಒಲವಿನ ಪಯಣ ಸಿನಿಮಾ ಫೆಬ್ರವರಿ 21ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಫ್ಯಾಮಿಲಿ ಒರಿಯೆಂಟೆಡ್ ಸಿನಿಮಾ ಇದಾಗಿದ್ದು ಕನ್ನಡ ಸಿನಿಮಾ ಪ್ರೇಮಿಗಳನ್ನು ರಂಜಿಸುವ ಎಲ್ಲ ಅಂಶಗಳು ಸಿನಿಮಾದಲ್ಲಿ ಇರಲಿವೆ“ ಎಂದರು.

ನಾಯಕನಟ ಸುನಿಲ್ ಮಾತಾಡಿ, ”ಸಿನಿಮಾದಲ್ಲಿ ಒಳ್ಳೆಯ ಕಥಾ ಸಾರಾಂಶವಿದೆ. ಇಬ್ಬರು ನಾಯಕಿಯರಿದ್ದು ಇಬ್ಬರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾ ಕತೆಯನ್ನು ಸಂಕ್ಷಿಪ್ತವಾಗಿ ಜನರ ಮುಂದಿಡುವ ಪ್ರಯತ್ನ ಮಾಡಿದ್ದೇವೆ. ಎಲ್ಲರೂ ಸಿನಿಮಾ ನೋಡಿ” ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಟ ನಾಗೇಶ್ ಮಯ್ಯ, ನಾಯಕಿ ನಟಿಯರಾದ ಖುಷಿ, ಪ್ರಿಯಾ ಹೆಗ್ಡೆ, ಮತ್ತಿತರರು ಉಪಸ್ಥಿತರಿದ್ದರು.

ಸಿನಿಮಾ ಕುರಿತು:

ನಿರ್ಮಾಣ ಸಂಸ್ಥೆ – ಮುಳಗುಂದ ಕ್ರಿಯೇಷನ್ಸ್

ನಿರ್ಮಾಪಕರು – ನಾಗರಾಜ್ ಎಸ್. ಮುಳಗುಂದ

ಛಾಯಗ್ರಾಹಕ – ಜೀವನ್ ಗೌಡ

ಸಂಕಲನ – ಕೀರ್ತಿರಾಜ್

ಕಲರಿಸ್ಟ್ – ಗುರುಪ್ರಸಾದ್

ಎಸ್ ಎಪ್ ಎಕ್ಸ್ – ನವೀನ್

ಸಂಗೀತ – ಸಾಯಿ ಸರ್ವೇಶ್

ನಾಯಕ – ಸುನೀಲ್

ನಾಯಕಿಯರು – ಖುಷಿ, ಪ್ರಿಯ ಹೆಗ್ಡೆ

ಪೊಷಕ ಕಲಾವಿದರು – ಪದ್ಮಜಾ ರಾವ್, ಬಲ ರಾಜ್ವಾಡಿ, ನಾಗೇಶ್ ಮಯ್ಯ, ಪೃಥ್ವಿರಾಜ್, ಸುಧಾಕರ್ ಬನ್ನಂಜೆ, ಸೂರ್ಯಕಿರಣ್, ಧನಂಜಯ್, ಸಮೀಕ್ಷಾ, ಬೇಬಿ ರಿಧಿ.

You may also like

News

ಮಂಗಳೂರಿನ ಸಿಒಡಿಪಿಯಲ್ಲಿ ಲಿಂಗ ಸಮಾನತಾ ತಂಡಕ್ಕೆ ಸಾಮರ್ಥ್ಯ ತರಬೇತಿ

ಮಹಿಳಾ ಸಬಲೀಕರಣ ಯೋಜನೆಯಡಿ 50 ಮಂದಿ ಭಾಗಿ ಮಹಿಳಾ ಸಬಲೀಕರಣ ಯೋಜನೆಯಡಿ ಬೆಂಗಳೂರು ಕ್ರಾಸ್ ಸಂಸ್ಥೆ ಹಾಗೂ ಮಂಗಳೂರು ಸಿಒಡಿಪಿ ಸಂಸ್ಥೆಗಳ ಸಹಯೋಗದಲ್ಲಿ ಲಿಂಗ ಸಮಾನತಾ ಪ್ರೇರಕ
News

Father Muller Homoeopathic Pharmaceutical Division and P.A. College of Pharmacy Sign MoU to Strengthen Academic–Industry Collaboration

Father Muller Homoeopathic Pharmaceutical Division (FMHPD), a unit of Father Muller Charitable Institutions, and P.A. College of Pharmacy, Mangaluru, entered

You cannot copy content of this page