July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬ್ಯಾರಿ ಭವನಕ್ಕೆ ಅತೀ ಶೀಘ್ರದಲ್ಲಿ ಮರು ಶಿಲಾನ್ಯಾಸ – ಪಬ್ಲಿಕ್ ವಾಯ್ಸ್ ನಿಯೋಗಕ್ಕೆ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ಭರವಸೆ

ಮಂಗಳೂರು : ಬಿಜೆಪಿ ಸರಕಾರದ ಅವಧಿಯಲ್ಲಿ  ತೊಕ್ಕೊಟ್ಟಿನಲ್ಲಿ ಶಂಕುಸ್ಥಾಪನೆಯಾದ ನೂತನ ಬ್ಯಾರಿ ಭವನವನ್ನು ಅಸೈಗೋಳಿ ಸಮೀಪದ ತಿಪ್ಲ ಪದವಿಗೆ ಸ್ಥಳಾಂತರ ಗೊಳಿಸಿದ್ದು ಇದರ ನಿರ್ಮಾಣ ಕಾರ್ಯ ಅತೀ ಶೀಘ್ರದಲ್ಲಿ ಪೂರ್ಣ ಗೊಳಿಸಲಾಗುವುದು ಎಂದು ಕರ್ನಾಟಕ ವಿಧಾನ ಸಭಾ ಸ್ಪೀಕರ್ ಆಗಿರುವ ಸನ್ಮಾನ್ಯ ಯು.ಟಿ. ಖಾದರ್ ಪಬ್ಲಿಕ್ ವಾಯ್ಸ್ ವಾಟ್ಸಾಪ್ ಬಳಗದ ನಿಯೋಗಕ್ಕೆ ಭರವಸೆ ನೀಡಿದರು.

ಈ ಹಿಂದೆ ನಿಗದಿ ಪಡಿಸಲಾದ ಜಾಗ ತೀರಾ ಕಿರಿದಾಗಿದ್ದು ಕೆಲವು ಮಂದಿ ಪ್ರತಿಭಟನೆ ಮೂಲಕ ಸ್ಥಳಾಂತರಕ್ಕೆ ಒತ್ತಾಯವನ್ನೂ ಮಾಡಿದ್ದರು. ಆದರೆ ನಾವು ಯಾವುದೇ ಒತ್ತಾಯಕ್ಕೆ ಮಣಿದಿಲ್ಲ ಬದಲಾಗಿ ಹಿಂದಿನ ಅಕಾಡೆಮಿ ಅಧ್ಯಕ್ಷರು ಪರ್ಯಾಯವಾಗಿ ಗುರುತಿಸಿ ಕಾದಿರಿಸಿದ ಜಾಗ ವಿಶಾಲವಾಗಿದ್ದು ಎಲ್ಲಾ ಅನುಕೂಲತೆ ಹೊಂದಿರುವುದರಿಂದ ಈ ಜಾಗ ಸೂಕ್ತ ಎಂದು ಪರಿಗಣಿಸಿ ನೂತನ ಕಟ್ಟಡಕ್ಕೆ ಬೇಕಾದ ನೀಲನಕ್ಷೆ ತಯಾರಿಸಿದ್ದು ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಗಳಿಂದ ಶಿಲಾನ್ಯಾಸ ನಡೆಸಲಾಗುಗುದು ಎಂದು ನಿಯೋಗಕ್ಕೆ ತಿಳಿಸಿದ್ದಾರೆ.

ಫಾರೂಕ್ ಉಳ್ಳಾಲ್ ನೇತೃತ್ವದ ನಿಯೋಗದಲ್ಲಿ ಪಬ್ಲಿಕ್ ವಾಯ್ಸ್ ತಂಡದ ಪ್ರತಿನಿಧಿಗಳಾದ ಸಲಾಮ್ ಉಚ್ವಿಲ್, ಇಲ್ಯಾಸ್ ಮಂಗಳೂರು, ರಫೀಕ್ ಪರ್ಲಿಯಾ, ಸಂಶುದ್ದೀನ್ ತಲೆಮೊಗರು, ಅಬ್ದುಲ್ ರವೂಫ್ ಕೊಳವೂರು, ಯೂಸುಫ್ ಸುಲ್ತಾನ್, ವನ್ಹರ್ ಕುಪ್ಪೆ ಪದವು ಮುಂತಾದವರು ಉಪಸ್ಥಿತರಿದ್ದರು.

ನಿಯೋಗದ ಆಯೋಜಕರಾದ ಸಲೀಂ ಪರಂಗಿ ಪೇಟೆ, ಇಮ್ತಿಯಾಜ್ ಕೆದುಂಬಾಡಿ, ಹಾರೂನ್ ರಶೀದ್, ಅಡ್ನಾಡಿ, ಹೌಸೈನ್ ಮದನಿ ನಗರ, ಮೊಹಮದ್ ಇರ್ಫಾನಿ ಶೇಕ್, ಹನೀಫ್ ತೊಕ್ಕೋಟು, ಸಿದ್ದೀಕ್ ಕೊಳಕೆ, ಸಿದ್ದೀಕ್ ಕಯ್ಯೋರು, ಎಂ.ಕೆ. ಜಮಾಲ್ ಪುತ್ತೂರು ಇವರ ಮಾರ್ಗದರ್ಶನದಲ್ಲಿ  ನಿಯೋಗವು ಸ್ಪೀಕರ್ ರವರಲ್ಲಿ ಬ್ಯಾರಿ ಭವನದ ರೂಪುರೇಷೆಯ ಕುರಿತು ಚರ್ಚೆ ನಡೆಸಲಾಯಿತು.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page