ಕಳ್ಳನನ್ನು ಹಿಡಿದು ವಿಟ್ಲ ಪೊಲೀಸ್ ಠಾಣೆಗೆ ಒಪ್ಪಿಸಿದ ಅನಂತಾಡಿ ಗ್ರಾಮಸ್ಥರು

ಬಂಟ್ವಾಳ: ಜನವರಿ 30ರಂದು ರಾತ್ರಿ 11 ಗಂಟೆಗೆ ಬಂಟ್ಟಾಳ ತಾಲೂಕಿನ ಅನಂತಾಡಿ ಗ್ರಾಮದ ಡೊಡ್ಡಮನೆ ಎಂಬಲ್ಲಿಗೆ ಕಳ್ಳನೊಬ್ಬ ಪ್ರವೇಶಿಸಲು ಹೊಂಚುಹಾಕುತ್ತಿದ್ದ ಸಮಯದಲ್ಲಿ, ಆತನನ್ನು ಗ್ರಾಮಸ್ಥರು ಹಿಡಿದು ವಿಟ್ಲ ಪೋಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಬಹು ಪುರಾತನವೂ ಕಾರಣಿಕ ಕ್ಷೇತ್ರವೂ ಆದ ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಬೆಳ್ಳಿಯ ಮುಖವಾಡ, ಬಂಗಾರದ ಮುಖವಾಡದಂತಹ ಆಭರಣ, ಹಲವಾರು ಬಂಗಾರ, ಬೆಳ್ಳಿಯ ಆಭರಣಗಳು ಅಲ್ಲಿದ್ದವು.
ಹಲವಾರು ದಿನಗಳಿಂದ ಅನಂತಾಡಿ ಹಾಗೂ ನೆಟ್ಲಮುಡ್ನೂರು ಗ್ರಾಮದಲ್ಲಿ ಕಳ್ಳರು ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಇದ್ದು ಗ್ರಾಮಸ್ಥರು ಎಚ್ಚರಿಕೆಯಿಂದ ಇದ್ದರು. ವಿಟ್ಲ ಪೋಲೀಸರು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.