September 3, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಾಣಿ ಬದಿಗುಡ್ಡೆ ನಿವಾಸಿ ಸುಶ್ಮಿತಾ ಶೆಟ್ಟಿ SI ಹುದ್ದೆಗೆ ನೇಮಕ

ಕೃಷಿಕರಾದ ರಾಧಾಕೃಷ್ಣ ಮತ್ತು ಶಾಂತ ಶೆಟ್ಟಿ ದಂಪತಿಯ ಕಿರಿಯ ಪುತ್ರಿ

ಬಂಟ್ವಾಳ: ಮಾಣಿ ಗ್ರಾಮದ ಬದಿಗುಡ್ಡೆ ನಿವಾಸಿ ಕೃಷಿಕರಾದ ರಾಧಾಕೃಷ್ಣ ಮತ್ತು ಶಾಂತ ಶೆಟ್ಟಿಯವರ ಮೂವರು ಮಕ್ಕಳಲ್ಲಿ ಕಿರಿಯವರಾದ ಸುಶ್ಮಿತಾ ಶೆಟ್ಟಿ ಸಬ್ ಇನ್ಸ್ ಪೆಕ್ಟರ್ ನೇಮಕಾತಿಯ ಪರೀಕ್ಷೆ ಬರೆದು ಉತ್ತೀರ್ಣರಾಗಿ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ.

ಮೈಸೂರಿನಲ್ಲಿ ತರಬೇತಿಯನ್ನು ಪಡೆಯುವ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕಲ್ಕಡ್ಕದಲ್ಲಿನ ಶ್ರೀರಾಮ ಶಾಲೆಯಲ್ಲಿ ಮುಗಿಸಿ, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಬಿ.ಕಾಂ. ಪದವಿಯನ್ನು ಪಡೆದು, ಮಂಗಳೂರಿನಲ್ಲಿರುವ ರೋಷನಿ ನಿಲಯ ಕಾಲೇಜಿನಲ್ಲಿ ಎಂ.ಎಸ್.ಡಬ್ಲ್ಯೂ. ಹಾಗೂ ಕೋಲಾರದ ಬಂಗಾರ ಪೇಟೆಯಲ್ಲಿ ಬಿ.ಎಡ್. ಶಿಕ್ಷಣವನ್ನು ಪಡೆಯುತ್ತಿರುವಾಗಲೇ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆಯನ್ನು ಬರೆದ ಇವರು ಉತ್ತೀರ್ಣಗೊಂಡು ನೇಮಕಗೊಂಡಿದ್ದಾರೆ. ಇವರ ಸಹೋದರ ರಾಜೇಶ್ ಶೆಟ್ಟಿ ಮಾಣಿಯಲ್ಲಿ ಸ್ವ ಉದ್ಯಮ ನಡೆಸುತ್ತಿದ್ದು, ಸಹೋದರಿ ರಶ್ಮಿತಾ ಶೆಟ್ಟಿ ಇಂಜಿನೀಯರ್ ಆಗಿರುತ್ತಾರೆ.

ಸುಶ್ಮಿತ ರೈ ಇವರ ಸಾಧನೆಗೆ ಮಾಣಿ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಹಾಗೂ ಮುಂದಿನ ಪೊಲೀಸ್ ಇಲಾಖೆಯ ಸೇವೆಗೆ ಶುಭವನ್ನು ಕೋರಿದ್ದಾರೆ.

You may also like

News

ಮಂಗಳೂರಿನಲ್ಲಿ ರಾಗಗಳ ರಸದೌತಣ: ಸೆಪ್ಟೆಂಬರ್ 6ರಂದು ‘ರಾಗ ಸುಧಾ’ ಸಂಗೀತ ಸಂಭ್ರಮ

ಖ್ಯಾತ ಹಿಂದೂಸ್ತಾನಿ ಗಾಯಕ ಆದಿತ್ಯ ಮೋದಕ್ ಸೇರಿದಂತೆ ರಾಷ್ಟ್ರೀಯ ಖ್ಯಾತಿಯ ಮೂವರು ಕಲಾವಿದರಿಂದ ಅಪರೂಪದ ಸಂಗೀತ ಪ್ರಸ್ತುತಿ; ಸಂಗೀತಾಸಕ್ತರಿಗೆ ಉಚಿತ ಪ್ರವೇಶ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸುಮಧುರ
News

ಮಂಗಳೂರು ಧರ್ಮಕ್ಷೇತ್ರದ ಕಥೊಲಿಕ ಶಿಕ್ಷಣ ಮಂಡಳಿಯಿಂದ ಅದ್ದೂರಿ 37ನೇ ಶಿಕ್ಷಕರ ದಿನಾಚರಣೆ

“ಶಿಕ್ಷಕರ ಮಾರ್ಗದರ್ಶನ ವಿದ್ಯಾರ್ಥಿ ಜೀವನಕ್ಕೆ ದಾರಿದೀಪ” – ಬಿಷಪ್ ಡಾ. ಪೀಟರ್ ಪಾವ್ಲ್ ವಿದ್ಯಾರ್ಥಿಯ ಜೀವನವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಕರ ಮಾರ್ಗದರ್ಶನ ಹಾಗೂ

You cannot copy content of this page