February 12, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನೇರಳಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ

ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ 13ಮಂದಿ ಅಭ್ಯರ್ಥಿಗಳಿಗೆ ಗೆಲುವು

ಬಂಟ್ವಾಳ: ನೇರಳಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ಜನವರಿ 29ರಂದು ಸಂಘದ ವಠಾರದಲ್ಲಿ ನಡೆದಿದ್ದು, ಬಿಜೆಪಿ ಬಂಬಲಿತ ಸಹಕಾರ ಭಾರತಿಯ 13 ಮಂದಿ ಅಭ್ಯರ್ಥಿಗಳು ವಿಜೇತರಾಗಿದ್ದಾರೆ.

ಒಟ್ಟು 13 ಸ್ಥಾನಗಳಿಗೆ 38 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 2 ಮಂದಿ ನಾಮಪತ್ರ ಹಿಂಪಡೆದಿದ್ದರು. ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 13 ಹಾಗೂ ಕಾಂಗ್ರೆಸ್ ಬೆಂಬಲಿತ 13 ಅಭ್ಯರ್ಥಿಗಳು ಸೇರಿ ಒಟ್ಟು 26 ಮಂದಿ ಅಂತಿಮ ಕಣದಲ್ಲಿದ್ದರು.

ಸಾಮಾನ್ಯ ಸ್ಥಾನದಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳಾದ ಪುಷ್ಪರಾಜ್ ಚೌಟ, ನಾರಾಯಣ ಶೆಟ್ಟಿ, ರಾಘವ, ಸನತ್ ಕುಮಾರ್ ರೈ, ಶ್ರೀನಿವಾಸ ಪೂಜಾರಿ, ಅಶೋಕ್ ರೈ ಎನ್.ಕೆ., ಹಿಂದುಳಿದ ವರ್ಗ ‘ಎ’ ಕ್ಷೇತ್ರದಿಂದ ವೆಂಕಟೇಶ್ ಕೋಟ್ಯಾನ್, ಹಿಂದುಳಿದ ವರ್ಗ ‘ಬಿ’ ಕ್ಷೇತ್ರದಿಂದ ತನಿಯಪ್ಪ ಗೌಡ, ಮಹಿಳಾ ಮೀಸಲು ಕ್ಷೇತ್ರದಿಂದ ಭಾರತಿ, ಶಕೀಲಾ ಕೃಷ್ಣ ಪೂಜಾರಿ, ಎಸ್.ಸಿ. ಮೀಸಲು ಕ್ಷೇತ್ರದಿಂದ ಸಂಕಪ್ಪ ಜೆ., ಎಸ್.ಟಿ. ಮೀಸಲು ಕ್ಷೇತ್ರದಿಂದ ಸುಧಾಕರ ಪಿ. ಸಾಲಗಾರರಲ್ಲದ ಕ್ಷೇತ್ರದಿಂದ ಕೆ. ಅರುಣ್ ಕುಮಾರ್ ರವರು ಸ್ಪರ್ಧಿಸಿ ವಿಜೇತರಾದರು.

ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಅಹಮ್ಮದ್, ನಿರಂಜನ್ ರೈ ಕೆ., ಬಾಲಕೃಷ್ಣ ಆಳ್ವ, ರಾಮಣ್ಣ ಗೌಡ, ಶ್ರೀದರ, ಸುದೀಪ್ ಕುಮಾರ್ ಶೆಟ್ಟಿ, ಹಿಂದುಳಿದ ವರ್ಗ ‘ ಎ ‘ ಕ್ಷೇತ್ರದಿಂದ ಸತೀಶ್ ಯಾನೇ ಸಚ್ಚಿದಾನಂದ, ಹಿಂದುಳಿದ ವರ್ಗ ‘ಬಿ’ ಕ್ಷೇತ್ರದಿಂದ ಪುರಂದರ ಗೌಡ ಟಿ., ಮಹಿಳಾ ಮೀಸಲು ಕ್ಷೇತ್ರದಿಂದ ಜಯಂತಿ, ಮಂಜುಳಾ ಕೆ., ಎಸ್.ಸಿ. ಮೀಸಲು ಕ್ಷೇತ್ರದಿಂದ ಕಾಂತಪ್ಪ ಬಂಗೇರ ಬಿ., ಎಸ್.ಟಿ. ಮೀಸಲು ಕ್ಷೇತ್ರದಿಂದ ಸಂಜೀವ ನಾಯ್ಕ, ಸಾಲಗಾರರಲ್ಲದ ಕ್ಷೇತ್ರದಿಂದ ಶ್ರೀಧರ ಪೂಜಾರಿ ಸ್ಪರ್ದಿಸಿದ್ದರು.

ಸಹಕಾರ ಸಂಘಗಳ ಉಪನಿಂಬಂಧಕರ ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ವಿಲಾಸ್ ರಿಟರ್ನಿಂಗ್ ಅಧಿಕಾರಿಯಾಗಿ ಆಗಮಿಸಿ ಚುನಾವಣೆ ನಡೆಸಿಕೊಟ್ಟರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶೋಧ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

You may also like

News

ಕಥೊಲಿಕ್ ಸಭಾ ಸುರತ್ಕಲ್ ವಲಯದ ದಶಮಾನೋತ್ಸವ ಸಂಭ್ರಮ

ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ – ವೆಲೆಂಟೈನ್ ಡಿಸೋಜ ನಿವೃತ್ತ DSP   ಸುರತ್ಕಲ್ ಇಲ್ಲಿನ ಸೆಕ್ರೆಡ್ ಹಾರ್ಟ್ ಚರ್ಚ್ ಸಭಾಂಗಣದಲ್ಲಿ ಫೆಬ್ರವರಿ 8ರಂದು ಭಾನುವಾರ ಕಥೊಲಿಕ್
News

ಕಾಸರಗೋಡು ನಗರಸಭೆಯ 9ನೇ ವಾರ್ಡ್ ಸಭೆ ಯಶಸ್ವಿ

ಮಾದರಿ ನಗರಸಭೆ ನಿರ್ಮಾಣಕ್ಕೆ ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ ಸಂಕಲ್ಪ ಕಾಸರಗೋಡು ನಗರಸಭೆಯ 2026–27ನೇ ವಾರ್ಷಿಕ ಯೋಜನೆ ರೂಪಿಕರಣದ ಅಂಗವಾಗಿ 9ನೇ ವಾರ್ಡ್‌ನ ನುಳ್ಳಿಪಾಡಿ (ಅಣಂಗೂರು, ಜೆ.ಪಿ.

You cannot copy content of this page