ಸೂರಿಕುಮೇರು ಬದ್ರಿಯಾ ಜುಮಾ ಮಸೀದಿ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ
ಮಾಣಿ : ಸೂರಿಕುಮೇರು ಬದ್ರಿಯಾ ಜುಮಾ ಮಸೀದಿಯ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಜನವರಿ 31ರಂದು ಶುಕ್ರವಾರ ಮದ್ರಸಾ ಹಾಲ್ ನಲ್ಲಿ ನಡೆಯಿತು. ಖತೀಬ್ ಹಸೈನಾರ್ ಸಅದಿ ದುಆ ನೆರವೇರಿಸಿದರು.
ಹಾಜಿ ಅಬ್ದುಲ್ ಹಮೀದ್ ಸೂರಿಕುಮೇರುರವರ ಅಧ್ಯಕ್ಷತೆಯಲ್ಲಿ ಮುಹಮ್ಮದ್ ಅಲೀ ಮುಸ್ಲಿಯಾರ್ ಸೂರಿಕುಮೇರು ಸ್ವಾಗತಿಸಿದರು. ಕಾರ್ಯದರ್ಶಿ ಅಮೀರುದ್ದೀನ್ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಬಳಿಕ ಸಭೆಯ ಅನುಮೋದನೆ ಪಡೆದು ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿ ರಚಿಸಲಾಯಿತು.
ಅದರಂತೆ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಸೂರಿಕುಮೇರು, ಉಪಾಧ್ಯಕ್ಷರಾಗಿ ಹಂಝ ಸೂರಿಕುಮೇರು, ಪ್ರಧಾನ ಕಾರ್ಯದರ್ಶಿಯಾಗಿ ಅಮೀರುದ್ದೀನ್, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಕರೀಂ ಸೂರಿಕುಮೇರು, ಕೋಶಾಧಿಕಾರಿಯಾಗಿ ಯೂಸುಫ್ ಹಾಜಿ ಸೂರಿಕುಮೇರು, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹಾಜಿ ಅಬ್ದುಲ್ ಹಮೀದ್, ಮುಹಮ್ಮದ್ ಅಲಿ ಮುಸ್ಲಿಯಾರ್, ಅಝೀಂ ಸೂರಿಕುಮೇರು, ಅಬ್ದುಲ್ ರಹ್ಮಾನ್ ಪುತ್ತು, ಮೂಸಾ ಕರೀಂ ಮಾಣಿ, ಅಶ್ರಫ್ ಮಾಣಿ, ಅಬ್ದುಲ್ ಖಾದರ್ ಮಾಣಿ, ಬಶೀರ್ ಮಾಣಿ, ಸಲೀಂ ಮಾಣಿ, ಯಾಸಿರ್ ಯಾಚಿ, ಅಶ್ರಫ್ ಸಖಾಫಿ, ಹಫೀಲ್ ಬರಿಮಾರು ಆಯ್ಕೆಯಾದರು. ಲೆಕ್ಕಪರಿಶೋಧಕರು ಮತ್ತು ಚುನಾವಣಾ ವೀಕ್ಷಕರಾಗಿ ಹಾಜಿ ಮುಹಮ್ಮದ್ ಬಂಡಾಡಿ ಹಾಗೂ ಹಾಜಿ ಎಸ್.ಎ. ಉಮ್ಮರ್ ಸೂರಿಕುಮೇರು ಕಾರ್ಯ ನಿರ್ವಹಿಸಿದರು.