ಮಂಗಳೂರಿನ ಕುಲಶೇಖರದ ಪ್ರತಿಭಾನ್ವಿತ ಯುವ ಗಾಯಕಿ ರೀಷಲ್ ಮೆಲ್ಬಾ ಕ್ರಾಸ್ತಾ ಇವರಿಗೆ ‘ಸೂಪರ್ ಸಿಂಗರ್ 5’ ರಲ್ಲಿ ಪ್ರಥಮ ಸ್ಥಾನ

ರೂಪಾಯಿ ಒಂದು ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ
ಬೆಂಗಳೂರಿನ ಗೋಪಾಲನ್ ಮಾಲ್ ಇವರು ಜನವರಿ 26ರಂದು ಬೆಂಗಳೂರಿನಲ್ಲಿ ಆಯೋಜಿಸಿದ ‘ಸೂಪರ್ ಸಿಂಗರ್ 5’ ಇದರಲ್ಲಿ ಮಂಗಳೂರಿನ ಕುಲಶೇಖರದ ಪ್ರತಿಭಾನ್ವಿತ ಯುವ ಗಾಯಕಿ ರೀಷಲ್ ಮೆಲ್ಬಾ ಕ್ರಾಸ್ತಾ ಇವರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಇವರು ರೂಪಾಯಿ ಒಂದು ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ತನ್ನದಾಗಿಸಿಕೊಂಡಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್, ಝೀ ಕನ್ನಡ ಹಾಗೂ ಸಂಗೀತ ದಿಗ್ಗಜರ ಸಮ್ಮುಖದಲ್ಲಿ ಈ ಸನ್ಮಾನ ನೀಡಲಾಗಿದೆ. ಮಂಗಳೂರಿನ ಪ್ರಖ್ಯಾತ ಗಾಯಕ ರೋನಿ ಕ್ರಾಸ್ತಾ ಹಾಗೂ ಮೆಟಿಲ್ಡಾ ಕ್ರಾಸ್ತಾ ದಂಪತಿಗಳ ಮಗಳಾದ ಇವರು ಪ್ರಸ್ತುತ ಸೈಂಟ್ ಎಲೋಶಿಯಸ್ ಕಾಲೇಜ್ ಮಂಗಳೂರು ಇಲ್ಲಿ ಪ್ರಥಮ ಪಿಯುಸಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿನಿಧಿಸಿದ ಇವರು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮುಂದಿನ ಎಲ್ಲಾ ಸಂಗೀತ ಕಾರ್ಯಕ್ರಮಗಳಲ್ಲಿ ವಿಜೇತೆಯಾಗಿ ಹೊರಹೊಮ್ಮಲಿ ಎಂದು ಸಂಗೀತ ಪ್ರೇಮಿಗಳು ಶುಭ ಹಾರೈಸಿದ್ದಾರೆ.