ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ ಸಂಪನ್ನ

ಬೆಳ್ತಂಗಡಿ : ಗೇರುಕಟ್ಟೆ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವವು ದೇವಳದ ತಂತ್ರಿಗಳಾದ ಬ್ರಹ್ಮಶ್ರೀ ಬಾಲಕೃಷ್ಣ ಪಾಂಗಾಣ್ಣಯರವರ ಮಾರ್ಗದರ್ಶನದಲ್ಲಿ, ವೇ.ಮೂ. ರಾಘವೇಂದ್ರ ಅಸ್ರಣ್ಣ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜನವರಿ 24ರಿಂದ 30ರ ತನಕ ಧಾರ್ಮಿಕ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವರ್ಷಾವಧಿ ಜಾತ್ರೆಯು ಯಶಸ್ವಿಯಾಗಿ ನಡೆಯಿತು.
ಜನವರಿ 24ರಂದು ಬೆಳಿಗ್ಗೆ ಹೊರೆಕಾಣಿಕೆ ಸಮರ್ಪಣೆ, ಧ್ವಜಾರೋಹಣ, ಮಹಾಪೂಜೆ, ನಿತ್ಯಬಲಿ, ಮಧ್ಯಾಹ್ನ ಅನ್ನಂತರ್ಪಣೆ, ರಾತ್ರಿ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆಯಲ್ಲಿ ಪೂಜೆ, ಮಹಾಪೂಜೆ – ನಿತ್ಯ ಬಲಿ, ದೀಪದ ಬಲಿ, ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಜನವರಿ 25ರಂದು ಉಷಾ ಕಾಲ ಪೂಜೆ, ಮಹಾಪೂಜೆ, ನಿತ್ಯಬಲಿ, ಮಧ್ಯಾಹ್ನ ಅನ್ನಂತರ್ಪಣೆ ನಡೆಯಿತು. ಸಂಜೆ ದೇವರ ಬಲಿ ಹೊರಟು ಕೆರೆಕಟ್ಟೆ ಉತ್ಸವ, ಮಹಾಪೂಜೆ – ನಿತ್ಯಬಲಿ, ದೀಪದ ಬಲಿ, ರಾತ್ರಿ 7 ರಿಂದ ಅಂಗನವಾಡಿ ಕೇಂದ್ರ ನಾಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕೇಸರಿ ಗೆಳೆಯರ ಬಳಗ ನಾಳದ ಸದಸ್ಯರಿಂದ ಹಾಸ್ಯಮಯ ನಾಟಕ “ಏರೆನ್ ನಂಬೋಡು” ಪ್ರದರ್ಶನಗೊಂಡಿತು.
ಜನವರಿ 26ರಂದು ಉಷಾ ಪೂಜೆ, ಮಹಾಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ 7 ರಿಂದ ಚಂದ್ರಮಂಡಲ ಉತ್ಸವ, ರಥಬೀದಿ ಕಟ್ಟೆಪೂಜೆ, ಪ್ರಸಾದ ವಿತರಣೆ, ಮಹಾಪೂಜೆ – ನಿತ್ಯಬಲಿ, ದೀಪದ ಬಲಿ, ರಾತ್ರಿ ಗೇರುಕಟ್ಟೆ ಕೊರಂಜ ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಉಜಿರೆ ವಿ.ಸ್ಕೂಲ್ ಆಫ್ ಡಾನ್ಸ್ ಮಕ್ಕಳಿಂದ ನೃತ್ಯ, ದುರ್ಗಾಪರಮೇಶ್ವರಿ ಭಕ್ತ ವೃಂದ ನಾಳ, ಗೇರುಕಟ್ಟೆ ಓಂಕಾರ ಕಲಾವಾಹಿನಿ, ವೀರ ಕೇಸರಿ ಮತ್ತು ಯುವ ಫ್ರೆಂಡ್ಸ್ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಜನವರಿ 28ರಂದು ಕವಾಟೋದ್ಘಾಟನೆ, ದಿವ್ಯ ದರ್ಶನ, ಮಹಾಪೂಜೆ, ಚೂರ್ಣೋತ್ಸವ ಬಲಿ, ವಿಶೇಷ ಸೇವೆಗಳು, ತುಲಾಭಾರ, ಕೊಡಿಮರಕ್ಕೆ ಜಾನುವಾರು ಒಪ್ಪಿಸುವುದು ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ದೇವರ ಬಲಿ ಹೊರಟು ಬಾಕಿಮಾರು ಗದ್ದೆಯಲ್ಲಿ ಪಿಲಿಚಾಮುಂಡಿ ದೈವದಭೇಟಿ ಮತ್ತು ಗಗ್ಗರ ಸೇವೆ. ಅವಭೃತ ಸ್ಥಾನ, ಧ್ವಜಾವರೋಹಣ, ಮಹಾಪೂಜೆ, ಊರ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ.
ಜನವರಿ 29ರಂದು ಬೆಳಿಗ್ಗೆ ಸಂಪ್ರೋಕ್ಷಣೆ, ಕಲಶಾಭಿಷೇಕ, ಮಹಾಪೂಜೆ, ಸಂಜೆ ಭಜನಾ ವರ್ಧಂತಿ, ರಂಗಪೂಜೆ, ಮಹಾ ಮಂತ್ರಾಕ್ಷತೆ ಹಾಗೂ ರಾತ್ರಿ ಊರ ಹವ್ಯಾಸಿ ಕಲಾವಿದರಿಂದ “ವಸಂತಿಯಕ್ಕ ಒಲುಲ್ಲೆರ್” ಗೆ ನಾಟಕ ಪ್ರದರ್ಶನಗೊಂಡಿತು.
ಜನವರಿ 30ರಂದು ರಾತ್ರಿ ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮತ್ತು ಊರ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಬಯಲಾಟ ನೂತನ ಪ್ರಸಂಗ ನಡೆಯಲಿದೆ. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ, ತಣ್ಣೀರುಪಂಥ ಪಂ.ಅ ಅಧಿಕಾರಿ ಶ್ರವಣ್ ಕುಮಾರ್, ಅಭಿವೃದ್ದಿ ಸಮಿತಿ ಅಧ್ಯಕ್ಷ ಯಾದವ ಗೌಡ ಎಂ., ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆರುಂಬುಡ, ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ್, ನೂತನ ವ್ಯವಸ್ಥಾಪನಾ ಸಮಿತಿ ನಿಯೋಜಿತ ಅಧ್ಯಕ್ಷ ಹರೀಶ್ ಕುಮಾರ್ ಬಿ., ನಿಯೋಜಿತ ಸಮಿತಿ ಸದಸ್ಯರಾದ ಹೇಮಂತ್ ಕುಮಾರ್, ಶರತ್ ಶೆಟ್ಟಿ ಕೆ., ಹರೀಶ್ ಗೌಡ ಕೆ., ಮೋಹಿನಿ ಬಿ. ಗೌಡ, ರೀತಾ ಚಂದ್ರಶೇಖರ್, ರಾಘವ ಎಚ್., ನೀನಾ ಕುಮಾರ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಭುವನೇಶ್ ಜಿ., ಕಳಿಯ ಸಿ.ಎ. ಬ್ಯಾಂಕ್ ಅಧ್ಯಕ್ಷ ಮತ್ತು ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ವಸಂತ ಮಜಲು, ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ಜನಾರ್ಧನ ಪೂಜಾರಿ, ಅಂಬಾ ಬಿ. ಆಳ್ವ, ದಿನೇಶ್ ಗೌಡ ಕೆ., ಉಮೇಶ್ ಕೇಲಡ್ಕ, ರಾಜೇಶ್ ಶೆಟ್ಟಿ, ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಎಸ್, ಕಾರ್ಯದರ್ಶಿ ಲೋಕೇಶ್ ಆಚಾರ್ಯ ಎನ್., ಶ್ರೀ ದುರ್ಗಾ ಮಾತೃಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ್, ಡಾ. ಅನಂತ್ ಭಟ್, ಕೂಸಪ್ಪ ಗೌಡ, ಆನಂದ ಶೆಟ್ಟಿ, ಲಿಂಗಪ್ಪ ಗೌಡ ದರ್ಖಾಸು, ಜಾತ್ರಾ ಮಹೋತ್ಸವ ಸಮಿತಿ ಸದಸ್ಯರಾದ ಸುರೇಶ್ ಆರ್.ಎನ್., ಸತೀಶ್ ಆರ್.ಎನ್., ಸತೀಶ್ ಭಂಡಾರಿ, ಸತೀಶ್ ಆಚಾರ್ಯ ಎನ್., ಚಂದ್ರಯ್ಯ ಶೆಟ್ಟಿ, ತುಕಾರಾಮ ಪೂಜಾರಿ, ಸದಾಶಿವ ನಾಯ್ಕ, ಕೃಷ್ಣ ಕೆ. ಕುಂಟಿನಿ, ಸುಧಾಕರ ಮಜಲು, ವಸಂತ ಗೌಡ ಕೆ., ವಿಜಯ ಗೌಡ ಕೆ., ಜನಾರ್ಧನ ಗೌಡ ಕೆ, ಪೂವಪ್ಪ ಶೆಟ್ಟಿ, ಯೋಗೀಶ್ ಸುವರ್ಣ, ದೇವಸ್ಥಾನದ ಕಚೇರಿ ನಿರ್ವಾಹಕ ಗಿರೀಶ್ ಶೆಟ್ಟಿ ಜಿ.ಎಸ್. ಉಪಸ್ಥಿತರಿದ್ದರು.