ಅಸಂಘಟಿತ ಕಾರ್ಮಿಕ ರಿಕ್ಷಾ ಚಾಲಕರಿಗೆ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವತಿಯಿಂದ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ಇವರ ನೇತೃತವದಲ್ಲಿ ಬೃಹತ್ ನೋಂದಾವಣೆ ಕಾರ್ಯಕ್ರಮ

ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾರವರ ಮಹಾನಗರ ಪಾಲಿಕೆ ಕಚೇರಿಯಲ್ಲಿ ರಾಜ್ಯ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ರಾಜ್ಯ ಮೋಟಾರು ಸಾರಿಗೆ ಸಾಮಾಜಿಕ ಭದ್ರತೆ ಕ್ಷೇಮಾಭಿವೃದ್ದಿ ಮಂಡಳಿಯಿಂದ ರಿಕ್ಷಾ ಚಾಲಕರಿಗೆ ವೀಲ್ ಬ್ಯಾಲೆನ್ಸಿಂಗ್ ಆಲೈನ್ಮೆಂಟ್ ಘಟಕಗಳಲ್ಲಿ, ನೀರಿನಿಂದ ಸ್ವಚ್ಛಗೊಳಿಸುವ ಘಟಕಗಳಲ್ಲಿ ಕೆಲಸ ಮಾಡುವವರು, ಮೋಟಾರ್ ಗ್ಯಾರೆಜ್ ಗಳಲ್ಲಿ, ಟಯರ್ ಜೋಡಿಸುವವರು, ಬುಕ್ಕಿಂಗ್ ಗುಮಾಸ್ತರು, ನಿಲ್ದಾಣ ಸಿಬ್ಬಂದಿ, ಮಾರ್ಗ ಪರಿಶೀಲನಾ ಸಿಬ್ಬಂದಿ, ಚಾಲಕ ನಿರ್ವಾಹಕ ಹೀಗೆ ಸುಮಾರು 500 ಮಂದಿಗೆ ನೋಂದಾವಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಾಜಿ ಎಂ.ಎಲ್.ಸಿ. ಹರೀಶ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಎಲೆಕ್ಟ್ರಿಷಿಯನ್ ವೆಲ್ಡರ್ ರವರಿಗೆ ಸರಕಾರದಿಂದ ಸಿಗುವ ಕಿಟ್ ನ್ನು ಸಹಾಯಕ ಲೇಬರ್ ಕಮಿಷನರ್ ನಾಜಿಯಾ ಸುಲ್ತಾನ ಇವರು ವಿತರಿಸಿದರು. ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜರವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಅವರ ಕುಟುಂಬಕ್ಕೆ ಭದ್ರತೆಯನ್ನು ನೀಡುವ ಯೋಜನೆಗಳ ನೋಂದಾವಣಿ ಮಾಡುವ ಮೂಲಕ ಕಾರ್ಮಿಕರಿಗೆ ಭದ್ರತೆ ಒದಗಿಸಲು ಸಮಾಜದ ಎಲ್ಲಾ ವರ್ಗಗಳ ಜನರ ಪ್ರಮುಖ ಜವಾಬ್ದಾರಿ ಎಂದರು. ಈ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಕಾರ್ಮಿಕರಿಗೆ ಸವಲತ್ತುಗಳನ್ನು ನೀಡುವ ಒಂದು ಸಂವಾದ ಕಾರ್ಯಕ್ರಮವನ್ನು ಏರ್ಪಾಡು ಮಾಡುವುದಾಗಿ ಐವನ್ ಡಿಸೋಜ ತಿಳಿಸಿದರು.
ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿವಿಧ ರಂಗಗಳಲ್ಲಿ ಕಾರ್ಯನಿರ್ವಹಿಸುವ 500ಕ್ಕೂ ಅಧಿಕ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಮಾರಂಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ನೋಂದಾವಣೆ ಕಾರ್ಯಕ್ರಮವನ್ನು ಕೈಗೊಂಡು ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ರವರು, ಕಾರ್ಮಿಕ ಅಧಿಕಾರಿಗಳಾದ ಕುಮಾರ್ ಬಿ.ಆರ್., ರಾಜಶೇಖರ್ ಶೆಟ್ಟಿ, ವಿರೇಂದ್ರ ಕುಮಾರ್, ಮೇರಿ ಡಯಾಸ್ ಇವರುಗಳು ಕಾರ್ಮಿಕರಿಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ಅಬ್ಬಾಸ್ ಆಲಿ, ಬ್ಲಾಕ್ ಅಧ್ಯಕ್ಷ ಪ್ರಶಾಂತ್, ಮಂಗಳೂರು ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಅವಿರೋಧ ಪಕ್ಷದ ನಾಯಕ ಅನಿಲ್ ಕುಮಾರ್, ಶಶಿಧರ್ ಹೆಗ್ಡೆ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್, ಚೇತನ್ ಕುಮಾರ್, ಸತೀಶ್ ಪೆಂಗಲ್ ಮಾಜಿ ಮೇಯರ್ ಅಬ್ದುಲ್ ಅಜೀಜ್, ವಕೀಲರಾದ ಮನೋರಾಜ್ ರಾಜೀವ, ಎನ್.ಪಿ. ಮನುರಾಜ್, ಮನೀಶ್ ಬೋಳಾರ್, ರಘುರಾಜ್ ಕದ್ರಿ, ಮೀನಾ ಟೆಲ್ಲಿಸ್, ಅಶ್ರಫ್, ಅಪ್ಪು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಸಂಘಟಿತ ಕಾರ್ಮಿಕರಾದ ದಕ್ಷಿಣ ಕನ್ನಡ ಬ್ಲಾಕ್ ಅಧ್ಯಕ್ಷ ವಸಂತ ಶೆಟ್ಟಿ ವೀರನಗರ ಇವರು ಸಂಘಟಿಸಿದ್ದು, ಪ್ರಾರಂಭದಲ್ಲಿ ರಾಜೇಶ್ ವೀರನಗರ ಸ್ವಾಗತಿಸಿ ಸತೀಶ್ ಪೆಂಗಲ್ ಇವರು ವಂದಿಸಿದರು.