ಕಾಸರಗೋಡು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ. ಮಾನಸ ಇವರಿಗೆ ಕನ್ನಡ ಭವನದಿಂದ ಗೌರವಾರ್ಪಣೆ

“ಮನೆಗೊಂದು ಗ್ರಂಥಾಲಯ, ಮಹತ್ ಯೋಜನೆಯ ರೂವಾರಿ ಕಾಸರಗೋಡು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ. ಮಾನಸರವರಿಗೆ ಕಾಸರಗೋಡು ಕನ್ನಡ ಭವನದಿಂದ, ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ – ಸಂದ್ಯಾ ರಾಣಿ ದಂಪತಿ ಗೌರವಾರ್ಪಣೆ ಸಲ್ಲಿಸಿದರು.
ಕ. ಸಾ. ಪ. ಗಡಿನಾಡು ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೋಟ್ಟೆತೋಡಿ, ಪ್ರೋ. ನಾರಾಯಣ ಮೂಡಿತಾಯ, ಪ್ರೋ. ಎ. ಶ್ರೀನಾಥ್, ಶಿಕ್ಷಣ ತಜ್ಞ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಗೌರವ ಅಧ್ಯಕ್ಷ ಶ್ರೀ ವಿ. ಬಿ. ಕುಲಮರ್ವ, ಗಮಕ ಕಲಾ ಪರಿಷತ್ ಅಧ್ಯಕ್ಷ ತೆಕ್ಕೆಕೆರೆ ಶಂಕರ ನಾರಾಯಣ ಭಟ್, ಸಾಮಾಜಿಕ ಮುಂದಾಳು ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ, ಕನ್ನಡ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ವಿರಾಜ್ ಅಡೂರ್, ಕನ್ನಡ ಭವನ ಕಾರ್ಯದರ್ಶಿ ವಸಂತ ಕೆರೆಮನೆ, ಕನ್ನಡ ಭವನ ಉಪಾಧ್ಯಕ್ಷ ಪ್ರಕಾಶ್ ಚಂದ್ರ ಕಾಸರಗೋಡು ಮುಂತಾದವರಿದ್ದರು.