ಫೆಬ್ರವರಿ 9 ರಂದು ಮಂಗಳೂರು ಬಿಜೈ ನಲ್ಲಿ ಸ್ಟ್ಯಾನ್ ನೈಟ್

ಮಂಗಳೂರು ಬಿಜೈ ನಲ್ಲಿ ಫೆಬ್ರವರಿ 9ರಂದು ಆದಿತ್ಯವಾರ ಸಂಜೆ 6ಗಂಟೆಗೆ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಮೈದಾನದಲ್ಲಿ ಅರ್ಲ್ಫ್ರೆಡ್ ಬೆನ್ನಿಸ್ ಕ್ರಿಯೇಷನ್ ಮಂಗಳೂರು ಇವರು ನಡೆಸುವ 19 ನೇ ಸ್ಟ್ಯಾನ್ ನೈಟ್ ಜರುಗಲಿದೆ.
ಆಲ್ಫ್ರೆಡ್ ಬೆನ್ನಿಸ್ ಇವರು ಕಳೆದ 18ವರ್ಷಗಳಿಂದ ಇಂತಹ 35 ಕಾರ್ಯಕ್ರಮಗಳನ್ನು ನಡೆಸಿ ಸುಮಾರು 1 ಕೋಟಿ ರೂಪಾಯಿಯಷ್ಟು ಹಣವನ್ನು ದಾನಿಗಳಿಂದ ಸಂಗ್ರಹಣೆ ಮಾಡಿ ಧಾರ್ಮಿಕ ಸಂಸ್ಥೆ, ಮನೆ ನಿರ್ಮಾಣ, ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಅರೋಗ್ಯದ ವೆಚ್ಚಗಳಿಗೆ ನೀಡುವ ಮೂಲಕ ಬಡವರ ಕಷ್ಟಗಳಿಗೆ ಸ್ಪಂದಿಸಿದ್ದಾರೆ ಈ ಬಾರಿಯ ಸಂಗೀತ ರಸ ಮಂಜರಿ ಕಾರ್ಯಕ್ರಮದಲ್ಲಿ ಸಂಗ್ರಹಣೆ ಅದ ಹಣವನ್ನು ಯುನೈಟೆಡ್ ಫ್ರೆಂಡ್ಸ್ ಬಿಜೈ ಇವರು ಬಡವರಿಗಾಗಿ 15 ಮನೆಗಳನ್ನು ನಿರ್ಮಿಸಿ ಕೊಡುವ ಉದ್ದೇಶಕ್ಕಾಗಿ ಬಳಸುವುದಾಗಿ ಅರ್ಲ್ಫ್ರೆಡ್ ಬೆನ್ನಿಸ್ ತಿಳಿಸಿದ್ದಾರೆ.