ಜೆರಾರ್ಡ್ ಟವರ್ಸ್ ರವರ ಏಕಾಂಗಿ ಪ್ರತಿಭಟನೆಗೆ ಕಣ್ಣುಗಳನ್ನು ತೆರೆದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು

ಧರೆಗುರುಳಿಸಿದ ಕದ್ರಿ ಶಿವಭಾಗ್ ನಲ್ಲಿರುವ ಒಣ ಮರ
ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ಗಿಟ್ಟಿಸಿಕೊಂಡ ಸಾಮಾಜಿಕ ಕಾರ್ಯಕರ್ತ
ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಶಿವಭಾಗ್ ಬಸ್ ಸ್ಟ್ಯಾಂಡ್ ಬಳಿ ಇದ್ದ ಒಣ ಮರವನ್ನು ತೆಗೆಯಲು ಹಲವು ರೀತಿಯಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗದೇ ಇರುವುದನ್ನು ಗಮನಿಸಿ, ಸಾರ್ವಜನಿಕರಿಗೆ ಈ ಒಣ ಮರದಿಂದ ಆಗುವ ಅನಾಹುತಗಳನ್ನು ತಪ್ಪಿಸಲು ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್ ಇದೇ ಜನವರಿ 28ರಂದು ವಿನೂತನ ರೀತಿಯಲ್ಲಿ ಏಕಾಂಗಿಯಾಗಿ ಪ್ರತಿಭಟನೆಯನ್ನು ಮಾಡಿ ‘ಒಣಗಿದ ಮರ ಕಡಿಯಿರಿ ಜನರ ಪ್ರಾಣ ರಕ್ಷಿಸಿ’ ಎಂದು ಮಾಧ್ಯಮಗಳ ಮುಖಾಂತರ ಬೀಸಿದ ಚಾಟಿಗೆ ಇಂದು ಫೆಬ್ರವರಿ 6ರಂದು ಗುರುವಾರ ಒಣಗಿದ ಮರವನ್ನು ಕಡಿದು ಧರೆಗುರುಳಿಸುವ ಮುಖಾಂತರ ಯಶಸ್ವಿಯನ್ನು ಕಂಡಿದ್ದಾರೆ.
ಜೆರಾರ್ಡ್ ಟವರ್ಸ್ ರವರ ಈ ಏಕಾಂಗಿ ಪ್ರತಿಭಟನೆಗೆ ಮತ್ತು ಸಿಕ್ಕ ಯಶಸ್ಸಿಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಂದ ಸೋಶಿಯಲ್ ಮೀಡಿಯಾ ಮುಖಾಂತರ ವ್ಯಾಪಕ ಪ್ರಶಂಸೆಗಳು ಹರಿದು ಬರುತ್ತಿವೆ.