April 27, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶಾಂಭವಿ ಹೋಟೆಲ್ & ಕನ್ವೆಶ್ಷನ್ ಸೆಂಟರ್ ಉಡುಪಿಯ ಆತ್ರಾಡಿಯಲ್ಲಿ ಇಂದು ಉದ್ಘಾಟನೆ

ವಿನೂತನ ಶೈಲಿಯ, ಅತ್ಯಾಕರ್ಷಕ ವಿನ್ಯಾಸದ, ಶುಚಿ-ರುಚಿಯ ಸ್ವಾದದೊಂದಿಗೆ ಲೋಕಾರ್ಪಣೆ

ಉಡುಪಿಯ ಆತ್ರಾಡಿಯಲ್ಲಿ ಶಾಂಭವೀ ಬಿಲ್ಡರ್ಸ್ ಸಂಸ್ಥೆಯಿಂದ ನಿರ್ಮಾಣಗೊಂಡ ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ಇದರ ಉದ್ಘಾಟನಾ ಸಮಾರಂಭ ಇಂದು ಫೆಬ್ರವರಿ 8ರಂದು ಸಾಯಂಕಾಲ 4 ಗಂಟೆಗೆ ನೆರವೇರಲಿದೆ. ಸಭಾರಂಭದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠದ ಶ್ರೀಗಳಾದ ಶ್ರೀಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಆಗಮಿಸಿ ಶುಭಾಶೀರ್ವಚನ ನೀಡಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಸನ್ಮಾನ್ಯ ಯು.ಟಿ. ಖಾದರ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳರ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಅಧ್ಯಕ್ಷ ನಾಡೋಜ ಡಾ. ಜಿ. ಶಂಕರ್, ಕಾಪು ವಿಧಾನಸಭಾ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಹಾಗೂ ಸಚಿವರಾದ ವಿನಯ ಕುಮಾರ್ ಸೊರಕೆ ಮತ್ತು ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಮಣಿಪಾಲದ ಕ್ರೈಸ್ಟ್ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಫಾದರ್ ರೋಮಿಯೋ ಲುವಿಸ್, ಕಾಂಗ್ರೆಸ್ ಮುಖಂಡರಾದ ಉದಯ ಶೆಟ್ಟಿ ಮುನಿಯಾಲು ಕಾರ್ಕಳ ಮತ್ತು ಪ್ರಸಾದ್ ರಾಜ್ ಕಾಂಚನ್ ಉಡುಪಿ, ಆತ್ರಾಡಿ ಹಿರೆಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಶೆಟ್ಟಿ ಬಾಳಟ್ಟ, ಪುರುಷೋತ್ತಮ ಶೆಟ್ಟಿ ಉಜ್ವಲ್ ಡೆವಲಪರ್ & ಬಿಲ್ಡರ್ಸ್ ಉಡುಪಿ, ಆನಂದ್ ಕುಂದರ್ ಚೇರ್‍ ಮ್ಯಾನ್ – ಜನತಾ ಗ್ರೂಪ್ ಆಫ್ ಕಂಪೆನೀಸ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 3 ಗಂಟೆಯಿಂದ ಸಂಗೀತ ನಿರ್ದೇಶಕ, ಗಾಯಕ ವಿದ್ವಾನ್ ಯಶವಂತ ಎಂ.ಕೆ. ಇವರಿಂದ ಸಂಗೀತ ಕಾರ್ಯಕ್ರಮ ಗಾನಾಂಜಲಿ, ಸಂಜೆ 7.00 ಗಂಟೆಯಿಂದ ನೃತ್ಯ ನಿಕೇತನ ಕೊಡವೂರು ಇವರಿಂದ ನೃತ್ಯರೂಪಕ ನಾರಸಿಂಹ (ಒಳಿತಿನ ವಿಜಯದ ಕಥನ) ನಿರ್ದೇಶನ : ಡಾ. ಪಾದ ಭಟ್ ನೃತ್ಯ ನಿರ್ದೇಶನ : ವಿದ್ವಾನ್ ಸುಧೀರ್ ರಾವ್ ಕೊಡವೂರು ವಿದುಷಿ ಮಾನಸಿ ಸುಧೀರ್ ವಿದುಷಿ ಅನಘಶ್ರೀ, ರಾತ್ರಿ 8.30 ರಿಂದ ಸಿಡಿಮದ್ದು ಪ್ರದರ್ಶನ ನಡೆಯಲಿದೆ ಎಂದು ಸಂಸ್ಥೆಯ ಮಾಲೀಕರಾದ ಸೆಲಿನ್, ಅಪ್ಪು ಮರಕಲ, ಅಶ್ವಿನ್, ಅಕ್ಷಯ್ ಮತ್ತು ಏಂಜೆಲಾ ತಿಳಿಸಿದ್ದಾರೆ.

ಇಂದು ಶುಭಾರಂಭಗೊಳ್ಳಲಿರುವ ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ಇಲ್ಲಿ ಲಭ್ಯವಿರುವ ಸೇವೆಗಳು:

AC ಡಿಲೆಕ್ಸ್ ರೂಮ್ ಗಳು, AC ಡಿಲೆಕ್ಸ್ ಫ್ಯಾಮಿಲಿ ರೂಮುಗಳು, ಸ್ಕೂಟ್ ರೂಮ್ಸ್, ಎಕ್ಸಿಕ್ಯೂಟಿವ್ ಸೂಟ್ ರೂಮ್ಸ್, 150 ರಿಂದ 200 ಜನ ಯಾವುದೇ ಕಾರ್ಯಕ್ರಮ ನಡೆಸಲು ಮಿನಿ ಹಾಲ್, 2ನೇ ಮಹಡಿಯ ‘ಇರಾ’ AC ಬ್ಯಾಂಕ್ವೆಟ್ ಹಾಲ್‌ನಲ್ಲಿ 1500 ಮಂದಿಗೆ ಸ್ಥಳಾವಕಾಶ, 750 ಮಂದಿ ಕುಳಿತುಕೊಳ್ಳಲು ವ್ಯವಸ್ಥೆ ಹಾಗೂ ವಿಶಾಲವಾದ ವೇದಿಕೆ ಮತ್ತು ಎರಡು ಗ್ರೀನ್ ರೂಮ್ಸ್, 3ನೇ ಮಹಡಿಯ ‘ತತ್ವ’ ಬ್ಯಾಂಕ್ವೆಟ್ ಹಾಲ್‌ನಲ್ಲಿ 500 ಜನರು ಭಾಗವಹಿಸಲು ಹಾಗೂ 350 ಮಂದಿ ಕುಳಿತುಕೊಳ್ಳಬಹುದಾದ ಸ್ಥಳವಕಾಶ, ಲಿಫ್ಟ್ ವ್ಯವಸ್ಥೆ, ಜನರೇಟರ್ ಬ್ಯಾಕ್ ಅಪ್ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ಸೌಲಭ್ಯ, ನೆಲಮಹಡಿಯಲ್ಲಿ ವೆಜ್ & ನಾನ್ ವೆಜ್‌ ರೆಸ್ಟೋರೆಂಟ್ ಗೆ ಪ್ರತ್ಯೇಕ ಕಿಚನ್ ವ್ಯವಸ್ಥೆ, ಅಡುಗೆಗೆ ಹಾಗೂ ಬಡಿಸಲು ಪ್ರತ್ಯೇಕ ಪಾತ್ರೆಗಳು, ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳು ಇಲ್ಲಿವೆ.

ಮಾಹಿತಿಗಾಗಿ ಸಂಪರ್ಕಿಸಿ : SHAMBHAVI HOTEL & CONVENTION CENTER N.H. 169A, Athrady Junction, Udupi, Karnataka – 576107 Mobile Number : 8618070753, 9916886585

You may also like

News

‘ಪಿದಾಯಿ’ ತುಳು ಚಿತ್ರ ಮೇ 9ಕ್ಕೆ ಬೆಳ್ಳಿತೆರೆಗೆ

ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ರವರು ನಿರ್ಮಾಣ ಮಾಡಿದ, ರಮೇಶ್ ಶೆಟ್ಟಿಗಾರ್ ಬರೆದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ
News

ಪರಮಪೂಜ್ಯ ಪೋಪ್ ಫ್ರಾನ್ಸಿಸ್‌ರವರಿಗೆ MCC ಬ್ಯಾಂಕ್ ವತಿಯಿಂದ ಗೌರವ ನಮನ

ಮಂಗಳೂರಿನ ಹಂಪನಕಟ್ಟೆಯಲ್ಲಿರುವ MCC ಬ್ಯಾಂಕ್ ಇದರ ಆಡಳಿತ ಕಛೇರಿಯಲ್ಲಿ ಕಥೊಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ ರವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಎಪ್ರಿಲ್ 24ರಂದು

You cannot copy content of this page