ರಾಜ್ಯಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ನೇತೃತ್ವದಲ್ಲಿ ಕಾರಾವಾರದ ಶಿರ್ವಾಡ್ ನಲ್ಲಿ ಅಖಿಲ ಭಾರತ ಕ್ಯಾಥೊಲಿಕ್ ಯೂನಿಯನ್ (AICU) ಮೊದಲ ಕಾರ್ಯಕಾರಿ ಸಭೆ

ಅಖಿಲ ಭಾರತ ಕ್ಯಾಥೊಲಿಕ್ ಯೂನಿಯನ್ (AICU) ಮೊದಲ ಕಾರ್ಯಕಾರಿ ಸಭೆ ರಾಜ್ಯಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇವರ ನೇತೃತ್ವದಲ್ಲಿ ಕಾರಾವಾರದ ಶಿರ್ವಾಡ್ ಹೋಲಿ ಕ್ರಾಸ್ ಚರ್ಚ್ ಸಭಾಗಂಣದಲ್ಲಿ ಇಂದು ಫೆಬ್ರವರಿ 8ರಂದು ಬೆಳಿಗ್ಗೆ 10:00 ಗಂಟೆಗೆ ನಡೆಯಿತು.
MSGR ರಿಚ್ಚರ್ಡ್ ರೊಡ್ರಿಗಸ್ ಪ್ರಾರ್ಥನೆಯನ್ನು ನೆರವೇರಿಸಿದರು. ರಾಜ್ಯಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇವರು ವಿವಿಧ ಕಡೆಯಿಂದ ಬಂದ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸ್ವಾಗತಿಸಿ ಸಂಘಟನೆಗಳನ್ನು ಬಲಪಡಿಸಲು ಕರೆಕೊಟ್ಟರು.
AICU ನ ಮಾಜಿ ಅಧ್ಯಕ್ಷ ಲ್ಯಾನ್ಸಿ ಡಿಕುನ್ಹಾ ಇವರು ಮಾತನಾಡಿ AICU ಬಗ್ಗೆ ಮಾಹಿತಿ ನೀಡಿದರು. ಇದೇ ಸಭೆಯಲ್ಲಿ AICU ಇದರ ನೂತನ ರಾಜ್ಯಧ್ಯಕ್ಷರಾಗಿ ಚುನಾಯಿತರಾದ ಆಲ್ವಿನ್ ಡಿಸೋಜ ಪಾನೀರ್ ಹಾಗೂ ಮಾಜಿ ಅಧ್ಯಕ್ಷ ಲ್ಯಾನ್ಸಿ ಡಿಕುನ್ಹಾ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಸಭೆಯಲ್ಲಿ ಸಂಘಟನೆಯನ್ನು ಬಲಪಡಿಸಲು ಸದಸ್ಯರು ಅವರವರ ವಿವಿಧ ಅಭಿಪ್ರಾಯಗಳನ್ನು ತಿಳಿಸಿದರು. ಇದರಂತೆ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ವಂದನಿಯ ಪಾದರ್ ರೋನಿ ರೊಡ್ರಿಗಸ್, ಜಾರ್ಜ್ ಫೆರ್ನಾಂಡಿಸ್, ಅಸಿಸ್ಸಿ ಗೊನ್ಸಾಲ್ವಿಸ್, ದೀಪಕ್ ಡಿಸೋಜ ಹಾಗೂ ವಿವಿಧ ಜಿಲ್ಲೆಯ ಸಂಘಟನೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು. ಎಲ್ಲರಿಗೂ ಅಖಿಲ ಭಾರತ ಕ್ಯಾಥೊಲಿಕ್ ಯೂನಿಯನ್ ರಾಜ್ಯ ಕಾರ್ಯದರ್ಶಿ ಸ್ಟೇಫನ್ ರೊಡ್ರಿಗಸ್ ಧನ್ಯವಾದ ಸಮರ್ಪಿಸಿದರು.