ಗೆಳೆಯರ ಬಳಗ ಕಲ್ಮಂಜ ಇದರ ರಜತ ಸಂಭ್ರಮ ಕಾರ್ಯಕ್ರಮ

ಗೆಳೆಯರ ಬಳಗ ಅಕ್ಷಯನಗರ (ರಿ.) ನಿಡಿಗಲ್ ಕಲ್ಮಂಜ ಇದರ ರಜತ ಸಂಭ್ರಮ ಕಾರ್ಯಕ್ರಮವು ಫೆಬ್ರವರಿ 9ರಂದು ಆದಿತ್ಯವಾರ ಕಲ್ಮಂಜ ಗ್ರಾಮದ ಅಕ್ಷಯನಗರದ ಕ್ರೀಡಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಪ್ರಾತಃ ಕಾಲ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಪ್ರಾರಂಭಗೊಂಡಂತಹ ಕಾರ್ಯಕ್ರಮವು ನಂತರ ಕಲ್ಮಂಜ ಗ್ರಾಮದ ಆಯ್ದ ಭಜನಾ ತಂಡಗಳಿಂದ ಭಜನಾ ಸೇವೆಯು ಜರುಗಿತು. ನಂತರ ಅತಿಥಿಗಳನ್ನು ಹಾಗೂ ಸನ್ಮಾನಿತರನ್ನು ವಿವಿಧ ಜಾನಪದ ನೃತ್ಯ ತಂಡಗಳೊಂದಿಗೆ ಅತ್ಯಂತ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಭಾರತೀಯ ಸೇನೆಯ ನಿವೃತ್ತ ವೀರ ಯೋಧ ಮಂಜುನಾಥ ನಾಯ್ಕರವರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.
ರವಿ ಟಿ. ಕಂದೂರು ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ರತನ್ ಕುಮಾರ್ ಜೈನ್ ಹುಣಿಪ್ಪಾಜೆ ಗುತ್ತು, ಆಡಳಿತ ಮೊಕ್ತೆಸರರು ಶ್ರೀ ಶಾಂತಿನಾಥ ಜೈನ ಬಸದಿ ನಿಡಿಗಲ್ ಇವರು ದೀಪ ಪ್ರಜ್ವಲನೆಗೊಳಿಸಿ ಉದ್ಘಾಟಿಸಿದರು. ಉಮೇಶ್ ಪೂಜಾರಿ ಅಧ್ಯಕ್ಷರು ರಜತ ಸಂಭ್ರಮ ಸಮಿತಿ ಹಾಗೂ ಸುಬ್ರಾಯ ಅಕ್ಷಯನಗರ ಅಧ್ಯಕ್ಷರು ಗೆಳೆಯರಬಳಗ (ರಿ.) ಇವರ ಸಭಾಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ನಾಮ್ ದೇವ್ ರಾವ್ ಸಂಚಾಲಕರು ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ (ರಿ.) ಮುಂಡಾಜೆ, ಪ್ರವೀಣ್ ಫೆರ್ನಾಂಡಿಸ್ ಉದ್ಯಮಿಗಳು ಹಳ್ಳಿ ಮನೆ ರೆಸ್ಟೋರೆಂಟ್ ಉಜಿರೆ, ಕಿಶೋರ್ ಪಿ. ಸಬ್ ಇನ್ಸ್ಪೆಕ್ಟರ್ ಆರಕ್ಷಕ ಠಾಣೆ ಧರ್ಮಸ್ಥಳ, ಶೇಖರ್ ಟಿ. ಮ್ಯಾನೇಜರ್ ಮಂಜುಶ್ರೀ ಪ್ರಿಂಟರ್ಸ್ ಉಜಿರೆ, ಸೀತಾ ಆರ್. ಶೇಠ್ ವಿಶೇಷ ಸಂಪನ್ಮೂಲ ಶಿಕ್ಷಕರು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ, ವಿಜಯ್ ಕಾಸರಗೋಡು ಅಧ್ಯಕ್ಷರು ಅಪ್ಪೆ ಕಲ್ಲುರ್ಟಿ ವರ್ತೆ ಸೇವಾ ಸಂಘ (ರಿ.) ಮಂಗಳೂರು, ಶೀನ ಅಕ್ಷಯ ನಗರ ಸಂಚಾಲಕರು ಗೆಳೆಯರ ಬಳಗ ಅಕ್ಷಯನಗರ (ರಿ.), ಹಮೀದ್ ಬಿ.ಎನ್. ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಂಜ, ಕೊಳ್ತಿಗೆ ನಾರಾಯಣ ಗೌಡ ಖ್ಯಾತ ಯಕ್ಷಗಾನ ಕಲಾವಿದರು ಪಾಲ್ಗೊಂಡಿದ್ದರು.
ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯ ಬಳಿಕ ಮಕ್ಕಳಿಂದ ಹಾಗೂ ಊರವರಿಂದ ವೈವಿಧ್ಯಮ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ಗೆಳೆಯರ ಬಳಗ ಅಕ್ಷಯನಗರ (ರಿ.) ಸದಸ್ಯರಿಂದ ಬದ್ ಕ್ ದ ಬಿಲೆ ಎಂಬ ತುಳು ನಾಟಕ ಪ್ರದರ್ಶನಗೊಂಡಿತು. ರಾತ್ರಿ 10 ಗಂಟೆಯಿಂದ ಪಿಂಗಾರ ಕಲಾವಿದೆರ್ ಬೆದ್ರ ಅಭಿನಯಿಸಿದ ತುಳು ಹಾಸ್ಯಮಯ ನಾಟಕ ರಂಗಭೂಮಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು.
ಈ ಕಾರ್ಯಕ್ರಮದಲ್ಲಿ ಗೆಳೆಯರಬಳಗವನ್ನು ಕಟ್ಟಿ ಬೆಳೆಸಿರುವ ಹಿರಿಯ ಸಲಹೆಗಾರರಿಗೆ, ಹಿರಿಯ ಸದಸ್ಯರಿಗೆ, ಕಳೆದ 25 ವರ್ಷಗಳಲ್ಲಿ ಬಳಗವನ್ನು ಮುನ್ನಡೆಸಿದ ಎಲ್ಲಾ ಅಧ್ಯಕ್ಷರುಗಳಿಗೆ, ಹಾಗೂ ಕಾರ್ಮಿಕರಿಂದ ದೇಶದ ಸೈನಿಕರ ವರೆಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಾಧಕರನ್ನು ಗೌರವಿಸಲಾಯಿತು. ರಜತ ಸಂಭ್ರಮದ ಅಂಗವಾಗಿ ನಡೆದ ಕ್ರೀಡಾಕೂಟದ ಬಹುಮಾನ ವಿತರಣೆ ಮಾಡಲಾಯಿತು. ಒಟ್ಟಾರೆ ಊರಿನವರ ಉತ್ತಮ ಸಹಕಾರ ದಾನಿಗಳ ಕೊಡುಗೆ ಹಾಗೂ ಗೆಳೆಯರ ಬಳಗದ ಸರ್ವ ಸದಸ್ಯರ ಕಠಿಣ ಪರಿಶ್ರಮದಿಂದ 25 ಸಂವತ್ಸರವನ್ನು ಯಶಸ್ವಿಯಾಗಿ ಪೂರೈಸಿರುವ ಗೆಳೆಯರ ಬಳಗದ ರಜತ ಸಂಭ್ರಮ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನೆಲ್ಸನ್ ಮೊನಿಸ್ ಅಕ್ಷಯನಗರ ಹಾಗೂ ಯಶೋಧ ಪಿ. ಕಾರ್ಯಕ್ರಮ ನಿರೂಪಿಸಿದರು.