ಪ್ರಸಿದ್ದ ಚಲನಚಿತ್ರ ನಟ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚೇತನ್ ರೈ ಮಾಣಿ ಇವರ ಮಗಳು ವೆನ್ಯ ರೈ ನಾಯಕಿಯಾಗಿ ನಟಿಸಿದ ‘ಆರಾಟ’ ಕನ್ನಡ ಸಿನಿಮಾ 16ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆ

ಬೆಂಗಳೂರಿನಲ್ಲಿ ಮಾರ್ಚ್ 1ರಿಂದ 8ರ ತನಕ ನಡೆಯಲಿರುವ 16ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಪ್ರಸಿದ್ದ ಚಲನಚಿತ್ರ ನಟ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚೇತನ್ ರೈ ಮಾಣಿ ಇವರ ಮಗಳು ವೆನ್ಯ ರೈ ನಾಯಕಿಯಾಗಿ ನಟಿಸಿದ ಆರಾಟ ಕನ್ನಡ ಸಿನಿಮಾ ಆಯ್ಕೆಯಾಗಿದೆ. ಅದರಂತೆಯೇ ಪಿದಾಯಿ ಹಾಗೂ ದಸ್ಕತ್ ಎನ್ನುವ ತುಳು ಸಿನಿಮಾಗಳೂ ಆಯ್ಕೆಯಾಗಿವೆ.
ಈ ಮೂರೂ ಚಲನಚಿತ್ರಗಳ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರು ತುಳುನಾಡಿನವರಾಗಿರುವುದು ನಮ್ಮ ಮಂಗಳೂರು ಜನರಿಗೆ ಹೆಮ್ಮೆಯ ವಿಚಾರ. ಈ ಮೂರೂ ಚಲನಚಿತ್ರದ ನಿರ್ದೇಶಕರಿಗೆ, ನಿರ್ಮಾಪಕರಿಗೆ, ತಂತ್ರಜ್ಞರಿಗೆ ಹಾಗೂ ಎಲ್ಲಾ ಕಲಾವಿದರಿಗೂ ಕರಾವಳಿ ಸುದ್ದಿ ಪತ್ರಿಕೆಯು ಅಭಿನಂದನೆಯನ್ನು ಸಲ್ಲಿಸುತ್ತದೆ.
ಆರಾಟ ಕನ್ನಡ ಸಿನಿಮಾದ ನಿರ್ದೇಶಕರು ಪುಷ್ಪರಾಜ್ ರೈ ಮಲಾರಬೀಡು, ಪಿದಾಯಿ ತುಳು ಸಿನಿಮಾದ ನಿರ್ದೇಶಕರು ಸಂತೋಷ್ ಮಾಡ ಹಾಗೂ ದಸ್ಕತ್ ತುಳು ಸಿನಿಮಾದ ನಿರ್ದೇಶಕರು ಅನೀಶ್ ಪೂಜಾರಿ ವೇಣೂರು ಆಗಿರುತ್ತಾರೆ.